More

    ಭಾರತ-ಚೀನಾ ಯುದ್ಧ ಸಂಭವಿಸಿದರೆ ಭಾರತವನ್ನು ಟ್ರಂಪ್ ಬೆಂಬಲಿಸುವುದಿಲ್ಲ!

    ನವದೆಹಲಿ: ಈಗ ಭಾರತ ಮತ್ತು ಅಮೆರಿಕದ ಮಧ್ಯೆ ಸಂಬಂಧ ಚೆನ್ನಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ನಿರಂತರ ಸಂಪರ್ಕದಲ್ಲಿದ್ದಾರೆ. ಆಗಾಗ ದೂರವಾಣಿ ಮೂಲಕ ಮಾತನಾಡುತ್ತಾರೆ. ಆದರೆ ಒಂದು ವೇಳೆ ಚೀನಾ ವಿರುದ್ಧ ಭಾರತ ಯುದ್ಧ ಮಾಡುವುದು ಅನಿವಾರ್ಯವಾದರೆ ಟ್ರಂಪ್ ಭಾರತವನ್ನು ಬೆಂಬಲಿಸುತ್ತಾರಾ?

    ಈಗಿರುವ ಪರಿಸ್ಥಿತಿಯಲ್ಲಿ ಭಾರತವನ್ನು ಅಮೆರಿಕ ಬೆಂಬಲಿಸುತ್ತದೆ ಎಂದೇ ಬಹುತೇಕ ಎಲ್ಲ ಭಾರತೀಯರ ಭಾವನೆ. ಆದರೆ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳುವುದೇ ಬೇರೆ. ‘‘ಟ್ರಂಪ್‌ರನ್ನು ನಂಬುವುದಕ್ಕೆ ಆಗುವುದಿಲ್ಲ. ಚೀನಾ-ಭಾರತದ ನಡುವೆ ಸಂಬಂಧ ಇನ್ನಷ್ಟು ಹದಗೆಟ್ಟರೆ ಭಾರತವನ್ನು ಟ್ರಂಪ್ ಬೆಂಬಲಿಸುತ್ತಾರೆ ಎಂಬ ಯಾವ ಗ್ಯಾರಂಟಿಯೂ ಇಲ್ಲ’’ ಎನ್ನುತ್ತಾರೆ ಬೋಲ್ಟನ್. ಇದನ್ನೂ ಓದಿ; ಕದ್ದ ಹಣದಿಂದಲೇ ಖರೀದಿಸಿದ್ದ ಖಾಸಗಿ ವಿಮಾನ; ಸೈಬರ್​ ಫ್ರಾಡ್​ನಲ್ಲಿ ಈತನನ್ನು ಮೀರಿಸೋರೆ ಇಲ್ಲ…!

    ‘‘ಗಡಿ ವಿವಾದದ ಬಗ್ಗೆ ಟ್ರಂಪ್‌ಗೆ ಎಷ್ಟು ಗೊತ್ತಿದೆ? ಭಾರತ-ಚೀನಾ ನಡುವಿನ ಘರ್ಷಣೆಗಳ ಇತಿಹಾಸವೂ ಟ್ರಂಪ್‌ಗೆ ಗೊತ್ತಿಲ್ಲ. ಅಧಿಕಾರಿಗಳು ಅವರಿಗೆ ಈ ಬಗ್ಗೆ ಮಾಹಿತಿ ನೀಡಿರಬಹುದು. ಆದರೆ ಅದ್ಯಾವುದೂ ಟ್ರಂಪ್ ತಲೆಗೆ ಹೋಗುವುದಿಲ್ಲ. ಯಾವ ದೇಶವನ್ನು ಬೆಂಬಲಿಸಬೇಕೆಂಬುದರ ಬಗ್ಗೆ ಅವರು ಮೊದಲೇ ಯೋಚಿಸಿರುವುದೂ ಇಲ್ಲ’’ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

    ‘‘ಟ್ರಂಪ್ ಇದೇ ನವೆಂಬರ್‌ನಲ್ಲಿ ಚುನಾವಣೆ ಎದುರಿಸಬೇಕಿದೆ. ಸದ್ಯಕ್ಕೆ ಅಮೆರಿಕದ ಆರ್ಥಿಕತೆ ಡೋಲಾಯಮಾನವಾಗಿದೆ. ಈ ಹಂತದಲ್ಲಿ ಟ್ರಂಪ್ ಯಾವುದೇ ದೇಶವನ್ನು ವ್ಯಾಪಾರದ, ಲಾಭದ ದೃಷ್ಟಿಯಿಂದಲೇ ನೋಡುತ್ತಾರೆ. ಹಾಗಾಗಿಯೇ ಅವರು ಚೀನಾದಲ್ಲಿ ಉಯ್ಘರ್ ಮುಸ್ಲಿಮರನ್ನು ಶೋಷಿಸುತ್ತಿರುವುದರ ಕುರಿತು, ಹಾಂಗ್‌ಕಾಂಗ್‌ಮೇಲಿನ ದಬ್ಬಾಳಿಕೆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಈಗಾಗಲೇ ಈ ಸಲದ ಚುನಾವಣೆ ಪ್ರಚಾರ ಅವರಿಗೆ ಕಠಿಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತವನ್ನಾಗಲಿ, ಚೀನಾದವರನ್ನಾಗಲಿ ಎದುರು ಹಾಕಿಕೊಳ್ಳುವುದಕ್ಕೆ ಟ್ರಂಪ್ ಮುಂದಾಗುವುದಿಲ್ಲ. ಬದಲಿಗೆ ಅವೆರಡು ದೇಶಗಳ ಗಡಿ ವಿವಾದ ತಣ್ಣಗಾಗಲಿ ಎಂದೇ ಬಯಸುತ್ತಾರೆ’’ ಎಂದು ಬೋಲ್ಟನ್ ವಿವರಿಸಿದ್ದಾರೆ.

    ಕರೊನಾ ಬಿಕ್ಕಟ್ಟಿಗೆ ಭಾರತದ ಪ್ರಾಚೀನ ಜ್ಞಾನದಲ್ಲಿದೆ ಪರಿಹಾರ: ಪ್ರಿನ್ಸ್ ಚಾರ್ಲ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts