More

    ಜು.3ರಿಂದ ಜಿಯೋ ದರ ಏರಿಕೆ

    ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಕಂಪನಿ ಜಿಯೋ ಜು. 3ರಿಂದ ತನ್ನ ಮೊಬೈಲ್ ಸೇವಾ ದರಗಳನ್ನು ಶೇ. 12ರಿಂದ 27ರವರೆಗೆ ಏರಿಸಲು ನಿರ್ಧರಿಸಿದೆ. ಅದಲ್ಲದೆ 5ಜಿ ಅನ್​ಲಿಮಿಟೆಡ್ ಉಚಿತ ಸೇವೆಯನ್ನು ಮಿತಿಗೆ ಒಳಪಡಿಸಲು ತೀರ್ವನಿಸಿದೆ. ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಸಲ ಜಿಯೋ ದರ ಏರಿಸುತ್ತಿದೆ. ಇದು ಬಹುತೇಕ ಎಲ್ಲ ಪ್ಲ್ಯಾನ್​ಗಳಿಗೆ ಅನ್ವಯವಾಗಲಿದೆ. 1 ಜಿಬಿ ಡೇಟಾ ಆಡ್ ಆನ್ ಪ್ಯಾಕ್​ನ ದರ ರೂ. 15 ಇದ್ದದ್ದು ರೂ. 19 ಆಗಲಿದೆ. 399 ರೂ. ಇದ್ದ 75 ಜಿಬಿ ಪೋಸ್ಟ್​ಪೇಡ್ 449 ರೂ. ಆಗಲಿದೆ. 84 ದಿನಗಳ ವ್ಯಾಲಿಡಿಟಿಯ 666 ರೂ.ನ ಪ್ಲ್ಯಾನ್ 799 ರೂ. ಆಗಲಿದೆ. ವಾರ್ಷಿಕ ರೀಚಾರ್ಜ್ ಪ್ಲ್ಯಾನ್​ಗಳು ಕೂಡ ಶೇ. 21ರಷ್ಟು ಏರಿಕೆಯಾಗಲಿವೆ. ಈ ಹಿಂದೆ 2021ರ ಡಿಸೆಂಬರ್​ನಲ್ಲಿ ಜಿಯೋ ದರ ಏರಿಸಿತ್ತು. ಈ ಮಾರುಕಟ್ಟೆಯ ಶೇ. 41ರಷ್ಟು, ಅಂದರೆ 47 ಕೋಟಿ ಮೊಬೈಲ್ ಚಂದಾದಾರರನ್ನು ಜಿಯೋ ಹೊಂದಿದೆ. ಭಾರ್ತಿ ಏರ್​ಟೆಲ್ ಮತ್ತು ವೊಡಾಫೋನ್ ಕೂಡ ಸದ್ಯದಲ್ಲೇ ದರ ಏರಿಸುವ ಸಾಧ್ಯತೆ ಇದೆ.

    ಎರಡು ಹೊಸ ಆಪ್​ಗಳು

    ಜಿಯೋ ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ ಮತ್ತು ಜಿಯೋ ಟ್ರಾನ್ಸ್​ಲೇಟ್ ಎಂಬ ಎರಡು ಅಪ್ಲಿಕೇಷನ್​ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ 199 ರೂ. ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್​ಫರ್ ಸೇವೆಯನ್ನು ಒದಗಿಸುತ್ತದೆ. ಕೃತಕ ಬುದ್ಧಿಮತ್ತೆಯಿಂದ ಚಾಲಿತವಾದ ಜಿಯೋ ಟ್ರಾನ್ಸ್​ಲೇಟ್ ಆಪ್ ತಿಂಗಳಿಗೆ 99 ರೂ. ಪಾವತಿಸಿದರೆ, ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್​ಗಳನ್ನು ಟ್ರಾನ್ಸ್​ಲೇಟ್ ಮಾಡುತ್ತದೆ. ಜಿಯೋ ಬಳಕೆದಾರರಿಗೆ ಒಂದು ವರ್ಷದವರೆಗೆ ಈ ಎರಡೂ ಆಪ್​ಗಳು ಉಚಿತವಾಗಿರಲಿವೆ.

    ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬು. ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದಕ್ಕೆ ಜಿಯೋಗೆ ಹೆಮ್ಮೆ ಇದೆ- ಆಕಾಶ್ ಎಂ. ಅಂಬಾನಿ, ರಿಲಯನ್ಸ್ ಜಿಯೋ ಅಧ್ಯಕ್ಷ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts