More

    ಆತನ ಮುಂದೆ ವಿಶ್ವಕಪ್ ಗೆದ್ದಿದ್ದಕ್ಕಿಂತ​ ದೊಡ್ಡ ಸಂತೋಷ ಮತ್ತೊಂದಿಲ್ಲ: ಪತ್ನಿ ಎದುರೇ ಬುಮ್ರಾ ಭಾವುಕ

    ಬಾರ್ಬಡೋಸ್​: ಟೀಮ್​ ಇಂಡಿಯಾ ಪ್ರತಿಷ್ಠಿತ ಟಿ20 ವಿಶ್ವಕಪ್ ಜಯಿಸುತ್ತಿದ್ದಂತೆ ದೇಶದೆಲ್ಲೆಡೆ ಸಂಭ್ರಮಾಚರಣೆ ಜೋರಾಗಿ ನಡೆಯಿತು. ಕೋಟ್ಯಂತರ ಅಭಿಮಾನಿಗಳು ಈ ಗೆಲುವನ್ನು ಹಬ್ಬದಂತೆ ಆಚರಿಸಿದರು. ರಸ್ತೆಗೆ ಬಂದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ವಿಶ್ವಕಪ್ ಕನಸು ನನಸಾಗಿರುವುದರಿಂದ ಭಾರತದ ಆಟಗಾರರು ಸಖತ್​ ಸಂಭ್ರಮಿಸಿದರು. ಅಲ್ಲದೆ, ಭಾವುಕರಾದರು. ಚಾಂಪಿಯನ್ ಆಗುತ್ತಿದ್ದಂತೆ ಟೀಮ್​ ಇಂಡಿಯಾ ಆಟಗಾರರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಪರಸ್ಪರ ಅಪ್ಪಿಕೊಂಡು ಕಣ್ಣೀರು ಸುರಿಸುವುದರ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

    ಜೂನ್​ 29ರಂದು ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್​ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದ ಫೈನಲ್ ಪಂದ್ಯ ಕೊನೆಯವರೆಗೂ ರೋಚಕತೆ ಕಾಯ್ದುಕೊಂಡಿದ್ದರಿಂದ ಎಲ್ಲರೂ ಟೆನ್ಷನ್ ಆಗಿದ್ದರು. ಒಂದು ಹಂತದಲ್ಲಿ ಗೆಲುವು ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್​ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಸೂಪರ್ ಬೌಲಿಂಗ್‌ನೊಂದಿಗೆ ದಾಳಿ ನಡೆಸಿದರು. ಕ್ಲಾಸೆನ್-ಮಿಲ್ಲರ್‌ರಂತಹ ಅಗ್ರ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿದ್ದರೂ, ದಕ್ಷಿಣ ಆಫ್ರಿಕಾ 30 ಎಸೆತಗಳಲ್ಲಿ 30 ರನ್ ಗಳಿಸಬೇಕಾದ ಸುಲಭ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಈ ಸೋಲಿನೊಂದಿಗೆ ಆಫ್ರಿಕಾ ಮತ್ತೊಮ್ಮೆ ಚೋಕರ್ಸ್​ ಪಟ್ಟವನ್ನು ಹೊತ್ತುಕೊಂಡಿದೆ. ಭಾರತದ ಗೆಲುವಿನಿಂದ ಕೋಟ್ಯಂತರ ಅಭಿಮಾನಿಗಳು ಇದೀಗ ಸಂತಸದಲ್ಲಿ ಮುಳುಗಿದ್ದಾರೆ.

    ಫೈನಲ್​ ಪಂದ್ಯದಲ್ಲಿ ಹಲವು ಆಟಗಾರರು ಮಿಂಚಿದರೂ ನಿಜವಾದ ಹೀರೋ ಮಾತ್ರ ಜಸ್ಪ್ರೀತ್ ಬುಮ್ರಾ. 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದರು. ಇವರ ಮೊನೆಚಾದ ಬೌಲಿಂಗ್​ ದಾಳಿಯಿಂದ ಆಫ್ರಿಕಾ ರನ್​ ಗಳಿಸಲು ಪರದಾಡಿತು. ಬುಮ್ರಾ ಅವರಿಂದ ಸ್ಫೂರ್ತಿ ಪಡೆದ ಅರ್ಷದೀಪ್ ಮತ್ತು ಹಾರ್ದಿಕ್, ಬೌಲಿಂಗ್‌ನಲ್ಲಿ ಇನ್ನಷ್ಟು ಮಿಂಚಿದರು. ಈ ಟೂರ್ನಿಯಲ್ಲಿ ಬುಮ್ರಾ ಅವರ ಅದ್ಭುತ ಬೌಲಿಂಗ್‌ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಪಡೆದರು. ಈ ಸಂದರ್ಭದಲ್ಲಿ ಅವರು ಭಾವುಕರಾದರು. ಆತನ ಮುಂದೆ ಕಪ್ ಗೆದ್ದಿರುವುದು ಖುಷಿ ತಂದಿದೆ ಎಂದರು.

    ಪಂದ್ಯದ ನಂತರ ಬುಮ್ರಾ ತಮ್ಮ ಪತ್ನಿ ಸಂಜನಾ ಗಣೇಶನ್ ಅವರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ಇಂತಹ ದೊಡ್ಡ ಯಶಸ್ಸನ್ನು ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಪಂದ್ಯದ ಕೆಲವು ಕ್ಷಣಗಳಲ್ಲಿ ನಾನು ತುಂಬಾ ನರ್ವಸ್ ಆಗಿದ್ದೇನೆ. ಆದರೆ ಕಪ್ ಅನ್ನು ಗೆದ್ದಿದ್ದು ಸಂತೋಷವಾಯಿತು. ಇದು ನಮಗೆ ಉತ್ತಮ ಪಂದ್ಯಾವಳಿಯಾಗಿದೆ. ಅನೇಕ ಸಿಹಿ ನೆನಪುಗಳನ್ನು ನೀಡಿದೆ. ಅಂಗದ್ ಕೂಡ ಇಲ್ಲಿದ್ದಾನೆ. ಆತನ ಮುಂದೆ ಕಪ್ ಗೆಲ್ಲುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಎಂದು ಮಗನ ಬಗ್ಗೆ ಬುಮ್ರಾ ಹೇಳಿದರು. ಅಲ್ಲದೆ, ಕೊನೆಯ ನಾಲ್ಕು ಓವರ್​ಗಳಲ್ಲಿ ತೀವ್ರ ಒತ್ತಡದ ನಡುವೆಯೂ ನಾವು ನಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಕೂಲ್​ ಆಗಿಯೇ ಒತ್ತಡವನ್ನು ನಿಭಾಯಿಸಿದೆವು. ಹೀಗಾಗಿ ಗೆಲುವು ಸುಲಭವಾಯಿತು ಎಂದು ಬುಮ್ರಾ ಇದೇ ವೇಳೆ ಹೇಳಿದರು.

    ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ವೆಸ್ಟ್​ಇಂಡೀಸ್​ನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ನಿಗದಿತ 20 ಓವರ್​ಗಳು ಮುಕ್ತಾಯಗೊಳ್ಳುವಾಗ 7 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ರನ್ ಮೆಷಿನ್​ ಕೊಹ್ಲಿಯ ಅಬ್ಬರದ ಅರ್ಧಶತಕ (76 ರನ್​) ಹಾಗೂ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​) ನೆರವಿನಿಂದ ಉತ್ತಮ ರನ್​ ಕಲೆಹಾಕಿತು.

    ಟೀಮ್​ ಇಂಡಿಯಾ ನೀಡಿದ 177 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸೂಕ್ತ ಪ್ರತಿರೋಧ ತೋರಿತಾದರೂ ಅಂತಿಮ ಹಂತದಲ್ಲಿ ಎಡವಿತು. 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 169 ರನ್​ಗಳನ್ನು ಕಲೆಹಾಕುವ ಮೂಲಕ 7 ರನ್​ಗಳ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಈ ಮೂಲಕ ಟ್ರೋಫಿ ಭಾರತದ ಪಾಲಾಯಿತು. (ಏಜೆನ್ಸೀಸ್​)

    ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್​ ಪಠಾಣ್​

    ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿಂಡೀಸ್​ನಲ್ಲಿ ಟೀಮ್​ ಇಂಡಿಯಾ ಲಾಕ್​! ರೋಹಿತ್​ ಪಡೆಯಲ್ಲಿ ಮನೆ ಮಾಡಿದ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts