More

    ಪ್ರತಿ ಗ್ರಾಪಂನಲ್ಲಿ ತಿಂಗಳೊಳಗೆ ಸಭೆ : ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ

    ಸುಳ್ಯ: ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ಗ್ರಾಪಂಗಳಿಗೆ ತೆರಳಿ ಸಭೆ ನಡೆಸಿ ತಿಂಗಳೊಳಗೆ ವರದಿ ನೀಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.

    ಸುಳ್ಯ ತಾಲೂಕಿನಲ್ಲಿ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಲ್ಮಡ್ಕ ಗ್ರಾಪಂ ಅಧ್ಯಕ್ಷ ಮಹೇಶ್ ಭಟ್ ಕರಿಕ್ಕಳ ಮತನಾಡಿ, ನಮ್ಮಲ್ಲಿ ಎರಡು ಕಾಮಗಾರಿ ಮಾತ್ರ ಹಸ್ತಾಂತರ ಆಗಿದೆ. ಈ ಕಾಮಗಾರಿಗಳು ಸಮರ್ಪಕ ಎಂದು ಅನಿಸುವುದಿಲ್ಲ. ಇದರ ಬಗ್ಗೆ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್ ಮಾಡುವುದು ಉತ್ತಮ ಹೇಳಿದರು. ದೇವಚಳ್ಳ ಗ್ರಾ.ಪಂ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಕೊಲ್ಲಮೊಗ್ರ ಗ್ರಾ.ಪಂ ಸದಸ್ಯ ಮಾಧವ ಚಾಂತಾಳ, ಐವರ್ನಾಡು ಗ್ರಾ.ಪಂ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಮೊದಲಾದವರು ಧ್ವನಿಗೂಡಿಸಿದರು.

    ತಹಸೀಲ್ದಾರ್ ಮಂಜುನಾಥ್, ಇ.ಒ ರಾಜಣ್ಣ ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎ.ಇ.ಇ ರುಕ್ಕು ಇದ್ದರು.

    ಪೈಪ್‌ಲೈನ್ ಅಸಮರ್ಪಕ

    ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಸಭೆಯಲ್ಲಿ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಒಂದು ತಿಂಗಳೊಳಗೆ ಗ್ರಾ.ಪಂ.ಗೆ ಭೇಟಿ ನೀಡಿ ಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಕಾಮಗಾರಿ ಕುರಿತು ವರದಿ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಯೋಜನೆಯ ಪೈಪ್‌ಲೈನ್ ಕಾಮಗಾರಿ ಅಸಮರ್ಪಕವಾಗಿದ್ದು, ವಿದ್ಯುತ್ ಸಂಪರ್ಕ ಆಗಿಲ್ಲ ಎಂದು ಬಾಳಿಲ, ಐವರ್ನಾಡು, ಮಂಡೆಕೋಲು ಮತ್ತಿತರ ಗ್ರಾಪಂ ಅಧ್ಯಕ್ಷರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts