More

    ರೋಹಿತ್, ವಿರಾಟ್ ಬೆನ್ನಲ್ಲೇ ಟಿ20 ಕ್ರಿಕೆಟ್​ಗೆ ಮತ್ತೊಬ್ಬ ಸ್ಟಾರ್​ ಆಟಗಾರ ಗುಡ್​ಬೈ! ಫ್ಯಾನ್ಸ್ ಶಾಕ್

    ನವದೆಹಲಿ: ನಿನ್ನೆ (ಜೂ.29) ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ಟಿ20 ವಿಶ್ವಕಪ್​ ಫೈನಲ್ ಗೆದ್ದ ಭಾರತ, 17 ವರ್ಷಗಳ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. ಈ ಖುಷಿಯಲ್ಲಿದ್ದ ಭಾರತೀಯರಿಗೆ ಕ್ಯಾಪ್ಟನ್ ರೋಹಿತ್ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದು, ಅತೀವ ನೋವನ್ನು ಉಂಟುಮಾಡಿತು. ಇದೀಗ ಇವರಿಬ್ಬರ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಕೂಡ ನಿವೃತ್ತಿ ಘೋಷಿಸಿದ್ದಾರೆ.

    ರೋಹಿತ್, ಕೊಹ್ಲಿ ನಂತರ ಇದೀಗ ಟಿ20 ಕ್ರಿಕೆಟ್​ಗೆ ಸ್ಟಾರ್ ಆಲ್​ರೌಂಡರ್​ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ಈ ಸುದ್ದಿ ತಿಳಿದ ಕ್ರಿಕೆಟ್ ಅಭಿಮಾನಿಗಳು ಭಾರೀ ಅಚ್ಚರಿಗೆ ಒಳಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಧನ್ಯವಾದಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಮೊದಲೇ ‘ಹಿಟ್​ಮ್ಯಾನ್’ ಮತ್ತು ‘ರನ್ ಮಷಿನ್’​ ನಿವೃತ್ತಿಯಿಂದ ಅಘಾತಕ್ಕೊಳಗಾಗಿದ್ದ ನೆಟ್ಟಿಗರು, ಇದೀಗ ಜಡೇಜಾ ನಿರ್ಗಮನ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಶನಿವಾರ (ಜೂನ್​ 29) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಶಸ್ತಿ ಹೋರಾಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ರನ್‌ಗಳ ರೋಚಕ ಜಯವನ್ನು ದಾಖಲಿಸಿತು. ಐದು ಓವರ್ ಅಂತ್ಯಕ್ಕೆ ರೋಹಿತ್, ಪಂತ್ ಮತ್ತು ಸೂರ್ಯಕುಮಾರ್ ಯಾದವ್​ ವಿಕೆಟ್ ಕಳೆದುಕೊಂಡು ಟೀಮ್​ ಇಂಡಿಯಾ ಸಂಕಷ್ಟದಲ್ಲಿದ್ದಾಗ ಅಕ್ಷರ್ ಪಟೇಲ್ ಜತೆಗೂಡಿ ಕೊಹ್ಲಿ ಉತ್ತಮ ಜತೆಯಾಟ​ ನೀಡಿದರು. ಈ ಪಂದ್ಯದಲ್ಲಿ 59 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಅಂದು ಈ ವ್ಯಕ್ತಿ ಬಗ್ಗೆ ರೋಹಿತ್​, ದ್ರಾವಿಡ್​​ ಆಡಿದ ಮಾತು ಇಂದು ನಿಜವಾಯ್ತು! ಟೀಕಾಕಾರಿಗೆ ಭಾರೀ ಮುಖಭಂಗ

    See also  ರೇಷ್ಮೆನಗರಿಗೂ ವಕ್ಕರಿಸಿದ ಕರೊನಾ... ಮಗು, ಕೆಎಸ್​ಆರ್​ಟಿಸಿ ಬಸ್​ ಚಾಲಕನಿಗೂ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts