More

    ಕಿಮ್ಸ್‌ನಲ್ಲಿ ಶೀಘ್ರವೇ ಐವಿಎಫ್ ಕೇಂದ್ರ

    ಹುಬ್ಬಳ್ಳಿ: ಶೀಘ್ರವೇ ಕಿಮ್ಸ್‌ನಲ್ಲಿ ಐವಿಎಫ್ ಕೇಂದ್ರ ಹಾಗೂ 60 ಬೆಡ್‌ಗಳ ತುರ್ತು ನಿಗಾ ಘಟಕ ಸ್ಥಾಪನೆಯಾಗಲಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹೇಳಿದರು.
    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐವಿಎಫ್ ಸೆಂಟರ್ ಸ್ಥಾಪನೆಯಿಂದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಸಂತಾನಹೀನರಿಗೆ ಸಂತಾನ ಭಾಗ್ಯ ಸಿಗುವ ವಿಶ್ವಾಸವಿದೆ ಎಂದರು.
    1.37 ಕೋಟಿ ರೂ. ವೆಚ್ಚದಲ್ಲಿ ಕಲಬುರ್ಗಿಯ ಮಾನವೀಯ ಟ್ರಸ್ಟ್ ಮತ್ತು ಹಟ್ಟಿ ಗೋಲ್ಡ್ ಮೈನ್ ಲಿಮಿಟೆಡ್‌ನ ಸಿಎಸ್‌ಆರ್ (ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನದಡಿ ಯೋಜನೆ ಸಿದ್ಧವಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ 27 ಕೋಟಿ ರೂ. ವೆಚ್ಚದಲ್ಲಿ 60 ಬೆಡ್‌ಗಳ ತುರ್ತು ನಿಗಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಶೀಘ್ರವೇ ಕಾರ್ಯಾರಂಭವಾಗಲಿದೆ ಎಂದರು.
    ಲಿವರ್ ಕಸಿ, ಕ್ಯಾನ್ಸರ್ ರೋಗಿಗಳಿಗೆ ಬ್ರೇಕಿ ಥೆರಪಿ ಕೂಡ ನಡೆಸಲು ಉದ್ದೇಶಿಸಲಾಗಿದೆ. 20 ಬೆಡ್‌ಗಳ ನರರೋಗ ತುರ್ತು ಚಿಕಿತ್ಸಾ ಹಬ್, ಲಿಂಬ್ ಸೆಂಟರ್‌ಗಳೂ ತೆರೆಯಲು ಅನುಮತಿ ಸಿಕ್ಕಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.
    ಕೆಎಸ್‌ಎಂಸಿಎಲ್ 1.75 ಕೋಟಿ ರೂ., ಬಿಇಎಲ್ 1.3 ಕೋಟಿ ರೂ., ಎಸ್‌ಎನ್‌ಸಿಯು 1.5 ಕೋಟಿ ರೂ., ಪಿಐಸಿಯು 55 ಲಕ್ಷ ರೂ., ಕೆಆರ್‌ಐಡಿಎಲ್ 22 ಲಕ್ಷ ರೂ., ಎಚ್‌ಜಿಎಂಎಲ್ 47.5 ಲಕ್ಷ ರೂ., ಮಾನವೀಯ ಟ್ರಸ್ಟ್ 90 ಲಕ್ಷ ರೂ. ಸಿಎಸ್‌ಆರ್ ಅನುದಾನದಡಿ ವಿವಿಧ ಕಾರ್ಯ ನಡೆಯುತ್ತಿವೆ ಎಂದರು.
    ಹೊರರೋಗಿಗಳ ಹೆಚ್ಚಳ: 2022-23 ರಲ್ಲಿ ಒಪಿಡಿಗೆ 5,70,315 ರೋಗಿಗಳು ದಾಖಲಾಗಿದ್ದಾರೆ. 2023-24ರಲ್ಲಿ 5,93,367 ಜನ ದಾಖಲಾಗಿದ್ದಾರೆ. ಶೇ. 4ರಷ್ಟು ರೋಗಿಗಳು ಹೆಚ್ಚಾಗಿದ್ದಾರೆ. ಐಪಿಡಿಯಲ್ಲಿ 2022-23ರಲ್ಲಿ 67,304 ರೋಗಿಗಳು ದಾಖಲಾಗಿದ್ದಾರೆ. 2023-24ರಲ್ಲಿ 74,535 ದಾಖಲಾಗಿದ್ದಾರೆ. ಶೇ. 9ರಷ್ಟು ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.
    2022-23ನೇ ಸಾಲಿನಲ್ಲಿ 17,325, 2023-24ರಲ್ಲಿ 20,093 ಮೇಜರ್ ಸರ್ಜರಿ, 2022-23ರಲ್ಲಿ 48,476, 2023-24ರಲ್ಲಿ 58,713 ಮೈನರ್ ಸರ್ಜರಿ ಮಾಡಲಾಗಿದೆ. ಸಂಸ್ಥೆಯ ಪೆಡಿಯಾಟ್ರಿಕ್ ಓಪಿಡಿ, ವಾರ್ಡ್, ಎಸ್‌ಎನ್‌ಸಿಯು, ಎನ್‌ಆರ್‌ಸಿ ಸೇವೆ(ಶೇ.92) ಪರಿಗಣಿಸಿ ಮುಸ್ಕಾನ್ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ ಎಂದರು.
    ಪಿಎಂಎಸ್‌ಎಸ್‌ವೈ ವೈದ್ಯಕೀಯ ಅಧೀಕ್ಷಕ ಡಾ. ಎಸ್. ರಾಜಾಶಂಕರ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಸ್ಥಳೀಯ ವೈದ್ಯಾಧಿಕಾರಿ ಡಾ. ಸಿದ್ದೇಶ್ವರ ಕಟಕೋಳ, ಡಾ. ರಾಜಶೇಖರ ದ್ಯಾಬೇರಿ, ಡಾ. ಲಕ್ಷ್ಮೀಕಾಂತ ಲೋಕರೆ, ಡಾ. ರಾಜಕುಮಾರ ಹಿರೇಮಠ, ಡಾ. ಕುಬ್ಬಣ್ಣ ಕಟ್ಟಿಮನಿ, ಡಾ. ಶಿವಾನಂದ ಇಲ್ಲಾಳ, ಡಾ. ಜಗದೀಶ ಸುತಗಟ್ಟಿ, ಡಾ. ಗಿರಿಯಪ್ಪಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts