More

    ಇತಿಹಾಸ ಅರಿಯದೆ ಭವಿಷ್ಯ ನಿರ್ಮಾಣ ಅಸಾಧ್ಯ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಭಾರತದ ಸ್ವಾತಂತ್ರ್ಯ ಚಳವಳಿ, ಹೋರಾಟಗಳಿಗೆ ಧಾರವಾಡ ಜಿಲ್ಲೆ ಕೊಡುಗೆ ಅಪಾರ. ಅನೇಕ ಹೋರಾಟಗಾರರು ತಮ್ಮ ಆಸ್ತಿ, ಜೀವ ಹಾನಿ ಮಾಡಿಕೊಂಡಿದ್ದಾರೆ. ಈ ಕುರಿತು ಇತಿಹಾಸದಲ್ಲಿ ದಾಖಲಾಗಿದ್ದರೂ ಜನರಿಗೆ ಹೆಚ್ಚು ಮಾಹಿತಿ ಇಲ್ಲ. ಹೀಗಾಗಿ ಸ್ವಾತಂತ್ರ್ಯೋತ್ಸವವನ್ನು ಇನ್ನಷ್ಟು ಅರ್ಥಪೂರ್ಣ ಆಚರಿಸಲು ರಾಷ್ಟ್ರದ ಸ್ವಾತಂತ್ರ್ಯ ಚಳವಳಿಗೆ ಜಿಲ್ಲೆಯ ಕೊಡುಗೆ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
    ನಗರದ ಜಕಣಿಭಾವಿ ಬಳಿ ಖಿಲಾಫತ್​ ಹೋರಾಟಗಾರರ ಗೌರವಾರ್ಥ ಸ್ಥಾಪಿಸಿರುವ ಹುತಾತ್ಮರ ಸ್ಮಾರಕಕ್ಕೆ ಸೋಮವಾರ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
    ಇತಿಹಾಸದ ಅರಿವಿಲ್ಲದೆ ಉತ್ತಮ ಭವಿಷ್ಯ ಕಟ್ಟವುದು ಕಷ್ಟಸಾಧ್ಯ. ಯುವ ಸಮೂಹ ಮತ್ತು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರ ನಾಯಕರ ಬಗ್ಗೆ ಅರಿವು ಮೂಡಿಸಬೇಕಿದೆ. ಜಿಲ್ಲೆಯ ಅನೇಕ ಗ್ರಾಮ ಮತ್ತು ಪಟ್ಟಣಗಳಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿವೆ. ಅನೇಕರು ಹುತಾತ್ಮರಾಗಿದ್ದಾರೆ. ಇವುಗಳ ಕುರಿತು ಶಾಲಾ, ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧೆ, ಕಿರುನಾಟಕ, ವಿಶೇಷ ಉಪನ್ಯಾಸ ಹಾಗೂ ವಿಚಾರ ಸಂಕೀರಣ ಆಯೋಜಿಸಲಾಗುವುದು ಎಂದರು.
    ಹಿರಿಯ ವರ್ತಕ ರವೀಂದ್ರ ಆಕಳವಾಡಿ, ಶಂಕರ ಕುಂಬಿ, ಚಂದ್ರಶೇಖರ ಅಮ್ಮಿನಗಡ, ಎನ್​.ಸಿ. ಕಾಡದೇವರಮಠ, ಮಹಾಂತೇಶ ಪಟ್ಟಣಶೆಟ್ಟಿ, ಕಿರಣ ತೂಗ್ಗಿ, ಶಾಂತಾ ಹಂಚಿನಮನಿ, ಶಾಮರಾವ ಕುಲಕರ್ಣಿ, ಆದರ್ಶ ಬಾಲಿಕಾ ಹಾಗೂ ನಿವೇದಿತಾ ಶಾಲೆ ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು.
    ಸಂಯೋಜಕ ಉದಯ ಯಂಡಿಗೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts