More

    ಚಂದಮಾಮನ ಮೈಮೇಲಿದೆ ಸ್ಫೋಟಕ ವಸ್ತು! ಚಂದ್ರನ ಮೇಲೆ ‘ಪ್ರಜ್ಞಾನ್‍’ಗೆ ಬೇರೆ ಏನೆಲ್ಲಾ ಸಿಕ್ತು?

    ಬೆಂಗಳೂರು: ಚಂದ್ರಯಾನ- 3ನ ಲ್ಯಾಂಡರ್‍ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದದ್ದು ನಿಜಕ್ಕೂ ಭಾರತಕ್ಕೆ ಹೆಮ್ಮೆ ತಂದಿರುವ ಕ್ಷಣವಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದು ಇಸ್ರೋ. ಇದೀಗ ಅದೇ ಪ್ರದೇಶದಲ್ಲಿ ಸ್ಫೋಟಕ ವಸ್ತುವೊಂದು ಪತ್ತೆಯಾಗಿದೆ! ಹೌದು. ಇದು ನಂಬಲು ಕಷ್ಟವಾದರೂ ಸತ್ಯ. ಚಂದ್ರನ ಮೇಲೆ ಏನೇನಿದೆ ಎನ್ನುವುದರ ಕುರಿತಾಗಿ ಇಸ್ರೋ ಸಂಶೋಧನೆ ನಡೆಸುತ್ತಿದ್ದಾಗ ಈ ಧಾತು ರೋವರ್‍ ಕಣ್ಣಿಗೆ ಬಿದ್ದಿದೆ.

    ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೊದಲ ಆನ್-ಸೈಟ್ ಮಾಪನಗಳು ಭೂಮಿಯ ಚಂದ್ರನ ಮೇಲೆ ಗಂಧಕ, ಅಂದರೆ ಸಲ್ಫರ್ ಉಪಸ್ಥಿತಿಯನ್ನು ದೃಢಪಡಿಸಿವೆ ಎಂದು ಇಸ್ರೋ ಇಂದು ತಿಳಿಸಿದೆ. ಚಂದ್ರಯಾನ -3 ರ ರೋವರ್ ಪ್ರಜ್ಞಾನ್ನಲ್ಲಿರುವ ಲೇಸರ್-ಆಧಾರಿತ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪಿ (ಎಲ್ಐಬಿಎಸ್) ಉಪಕರಣದಿಂದ ಈ ಮಾಪನಗಳನ್ನು ಮಾಡಲಾಗಿದೆ. ಆಂತರಿಕ ಮಾಪನಗಳು ಈ ಪ್ರದೇಶದಲ್ಲಿ ಗಂಧಕದ ಉಪಸ್ಥಿತಿಯನ್ನು ದೃಢಪಡಿಸಿವೆ. ಈ ಮಾಪನಗಳನ್ನು ನಡೆಸಲು ಆರ್ಬಿಟರ್‍ ಬಳಸಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದು ಇಸ್ರೋ ಹೇಳಿದೆ.

    ಗಂಧಕ ಅಥವಾ ಸಲ್ಫರ್‍ ಜತೆಗೆ, ಆಮ್ಲಜನಕ (O), ಕ್ಯಾಲ್ಶಿಯಂ (Cl), ಅಲುಮೀನಿಯಂ(Al), ಟೈಟೇನಿಯಂ(Ti), ಸಿಲಿಕಾನ್(Si), ಮ್ಯಾಂಗನೀಸ್(Mn), ಕಬ್ಬಿಣ(Fe), ಕ್ರೋಮಿಯಂ(Cr) ಮುಂತಾದ ಧಾತುಗಳ ಇರುವಿಕೆ ಪಕ್ಕಾ ಆಗಿದೆ. ಇವುಗಳೊಂದಿಗೆ ಹೈಡ್ರೋಜನ್ ಇದೆಯಾ ಎನ್ನುವುದರ ಕುರಿತಾಗಿ ಸಂಶೋಧನೆ ನಡೆಯುತ್ತಿದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

    ಗಂಧಕದ ಬಳಕೆ ಎಲ್ಲೆಲ್ಲಿ ನಡೆಯುತ್ತೆ?

    ಗಂಧಕವನ್ನು ಸಾಮಾನ್ಯವಾಗಿ ಗನ್‍ಪೌಡರ್‍ ಅಷ್ಟೇ ಅಲ್ಲದೇ ಕಾರ್‍ ಬ್ಯಾಟರಿ, ಗೊಬ್ಬರ, ರಬ್ಬರ್ ಉತ್ಪಾದನೆ, ಬ್ಲೀಚಿಂಗ್ ಪೇಪರ್, ನೀರು ಶುದ್ಧೀಕರಣ ಘಟಕ, ಸಿಮೆಂಟ್, ಡಿಟರ್ಜೆಂಟ್‍, ಕೀಟನಾಶಕ, ಕಚ್ಚಾ ತೈಲದ ಶುದ್ಧೀಕರಣ ಮುಂತಾದ ಅನೇಕ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ. ಈ ಗಂಧಕವನ್ನು ಎಲ್ಲಕ್ಕಿಂತಲೂ ಹೆಚ್ಚಾಗಿ ಬೆಂಕಿಕಡ್ಡಿಗಳನ್ನು ಉತ್ಪಾದಿಸಲು ಹಾಗೂ ಪಟಾಕಿಗಳಲ್ಲಿ ಬಳಸಲಾಗುತ್ತದೆ.

    ಗಂಧಕ, ತೀವ್ರ ತಾಪಮಾನದಲ್ಲಿ ಕರಗಿದ ಸ್ಥಿತಿಯಲ್ಲೂ, ಘನ ಸ್ಥಿತಿಯಲ್ಲೂ ಸಿಡಿಯುವ ಸಾಧ್ಯತೆ ಉಳ್ಳ ಧಾತುವಾಗಿದೆ. ಇದು ಗಾಳಿಯ ಸಂಪರ್ಕಕ್ಕೆ ಬಂದೊಡನೆ, ತಿಳಿ ನೀಲಿ ಬಣ್ಣದ ಬೆಂಕಿ ಜ್ವಾಲೆಯೊಂದಿಗೆ ಸುಡುತ್ತದೆ. ಆದರೆ ಇದು ಕಣ್ಣಿಗೆ ಕಾಣಿಸುವುದಿಲ್ಲ. ಇದು ಆವಿ ರೂಪದಲ್ಲಿ ಸಣ್ಣ ಕೋಣೆಯೊಂದರಲ್ಲಿ ಸೇರಿಕೊಂಡರೆ ದೊಡ್ಡದಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.

    ಸಲ್ಫರ್‍ಅನ್ನು ಇಸ್ರೋ ಕಂಡು ಹಿಡಿದದ್ದು ಹೇಗೆ?

    ಚಂದ್ರನ ಮೇಲ್ಮೈ ಮೇಲೆ ಅನೇಕ ರೀತಿಯ ಸಂಶೋಧನೆಗಳನ್ನು ನಡೆಸಲು ಇಸ್ರೋ ಉದ್ದೇಶಿಸಿದ್ದು ರೋವರ್ ಒಳಗೆ ಅನೇಕ ಸಾಧನಗಳಿಗೆ. ಅದರಲ್ಲಿ LIBS ಕೂಡ ಒಂದು. ಈ LIBS ಎಂಬ ಸಾಧನ, ಚಂದ್ರನ ಮೇಲ್ಮೈಯ ಧಾತು ಸಂಯೋಜನೆಯ ಮಾಪನಗಳನ್ನು ನಡೆಸಿದೆ. ಇದು ವಸ್ತುಗಳನ್ನು ತೀವ್ರವಾದ ಲೇಸರ್ ಬೆಳಕಿಗೆ ಒಡ್ಡುವ ಮೂಲಕ ವಿಶ್ಲೇಷಣೆಯನ್ನು ನಡೆಸಿತು. ಲೇಸರ್‍ ಬೆಳಕನ್ನು ಹಾಯಿಸಿದಾಗ ಬರುವ ಪ್ರತಿಫಲನಗಳನ್ನು ಆಧರಿಸಿ ಯಾವೆಲ್ಲ ಧಾತುಗಳು ಚಂದ್ರನ ಮೇಲೆ ಇವೆ ಎನ್ನುವುದನ್ನು ಈ LIBS ಕಂಡು ಹಿಡಿದಿದೆ.

    ನಿನ್ನೆ ಚಂದ್ರನ ಮೇಲ್ಮೈಯಲ್ಲಿ ನಾಲ್ಕು ಮೀಟರ್ ಕುಳಿಯನ್ನು ರೋವರ್ ಎದುರಿಸಿದ್ದು, ತಕ್ಷಣವೇ ಅದರ ದಾರಿಯನ್ನು ಮರುಹೊಂದಿಸಲಾಗಿದೆ ಎಂದು ಸಂಸ್ಥೆ ನಿನ್ನೆ ಹೇಳಿತ್ತು. ಕುಳಿಯ ಅಂಚಿನಿಂದ ಮೂರು ಮೀಟರ್ ದೂರದಲ್ಲಿ ಅದನ್ನು ಗುರುತಿಸಲಾಗಿತ್ತು.

    ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು. ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ರಷ್ಯಾ, ಯುಎಸ್ ಮತ್ತು ಚೀನಾ ದೇಶಗಳ ಪಟ್ಟಿಗೆ ಭಾರತವೂ ಸೇರಿಕೊಂಡಿದೆ.

    ರಷ್ಯಾದ ಲೂನಾ -25 ಬಾಹ್ಯಾಕಾಶ ನೌಕೆಯ ಎಂಜಿನ್ ವೈಫಲ್ಯ ಆಗಿ ಚಂದ್ರನ ಮೇಲ್ಮೈಯಲ್ಲಿ ಅಪಘಾತಕ್ಕೀಡಾದ ಕೆಲವು ದಿನಗಳ ನಂತರ ಇಸ್ರೋದ ಯಶಸ್ಸು ಜಾಗತಿಕವಾಗಿ ಜನರ ಗಮನ ಸೆಳೆದಿತ್ತು. ರಷ್ಯಾ ಕೂಡ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯುವ ಗುರಿ ಹೊಂದಿತ್ತು.

    ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ 14 ದಿನದ ಮಿಷನ್ ಜೀವಿತಾವಧಿಯನ್ನು ಹೊಂದಿವೆ. ಅಲ್ಲಿನ ಕತ್ತಲೆ ಸಮಯದ ಛಳಿಯಿಂದ ರೋವರ್ ಪಾರಾದರೆ ಇನ್ನೂ 14 ದಿನಗಳ ಕಾಲ ಕಾರ್ಯ ನಿರ್ವಹಿಸಲಿದೆ. ಚಂದ್ರನ ಮೇಲೆ ಭೂಮಿಯ ಮೇಲಿನ 14 ದಿನಗಳು ಎಂದರೆ ಒಂದು ದಿನಕ್ಕೆ ಸಮಾನ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts