More

    ವಿಶ್ವಕಪ್​ನಲ್ಲಿ ಭಾರತಕ್ಕಾಗಿ ಪ್ರತ್ಯೇಕ ರೂಲ್ಸ್​ ಮಾಡಲಾಗಿದೆ; ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

    ನವದೆಹಲಿ: ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ ಚುಟುಕು ವಿಶ್ವಸಮರವು ಮುಕ್ತಾಯದ ಹಂತಕ್ಕೆ ಬಂದಿದ್ದು, ಶನಿವಾರ (ಜೂನ್ 29) ವರ್ಣರಂಜಿತ ತೆರೆ ಬೀಳಲಿದೆ. ಇನ್ನೂ ಈ ಬಾರಿಯ ಚುಟುಕು ವಿಶ್ವ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್​ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್​ 08 ಹಂತ ಪ್ರವೇಶಿಸುವಲ್ಲಿ ವಿಫಲವಾಗಿ ತೀವ್ರವಾಗಿ ಟೀಕೆಗೆ ಗುರಿಯಾಗಿತ್ತು. ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನ ಭಾರತದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಇಂಜಮಾಮ್​ ಉಲ್​ ಹಕ್​ ಬಿಸಿಸಿಐ ಹಾಗೂ ಐಸಿಸಿ ವಿರುದ್ಧ ಹೊಸ ಆರೋಪ ಒಂದನ್ನು ಮಾಡಿದ್ದಾರೆ.

    ಜೂನ್​ 27ರಂದು ನಡೆದ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ಇಂಜಮಾಮ್​ ಈ ಆರೋಪವನ್ನು ಮಾಡಿದ್ದು, ಭಾರತದ ಅಭಿಮಾನಿಗಳು ಕಿಡಿಕಾರಿದ್ದಾರೆ. ಭಾರತ ಐಸಿಸಿಯಿಂದ ಪಡೆದಷ್ಟು ಲಾಭ ಪಾಕಿಸ್ತಾನ ಎಂದಿಗೂ ಪಡೆದಿಲ್ಲ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಹಾವೇರಿ ಭೀಕರ ಅಪಘಾತ; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ, ಸಂತಾಪ ಸೂಚಿಸಿದ ಗಣ್ಯರು

    ನೀವು ನಿನ್ನೆ (ಜೂನ್ 27) ನಡೆದ ಎರಡು ಸೆಮಿಫೈನಲ್​ ಪಂದ್ಯಗಳನ್ನು ನೋಡುವುದಾದರೆ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಭಾರತ ತಾನಾಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದು, ಒಂದು ವೇಳೆ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದರೆ ಭಾರತ ಸುಲಭವಾಗಿ ಫೈನಲ್​ ಪ್ರವೇಶಿಸುತ್ತಿತ್ತು.

    ಐಸಿಸಿ ನಡೆಸುದ ಟೂರ್ನಮೆಂಟ್​ಗಳಲ್ಲಿ ಭಾರತಕ್ಕಾಗಿ ಪ್ರತ್ಯೇಕ ನಿಯಮಗಳಿರುತ್ತವೆ. ಏಷ್ಯಾಕಪ್​ನಲ್ಲಿ ಪಾಕಿಸ್ತಾನ ಗೆಲ್ಲುತ್ತದೆ ಎಂಬ ವಿಚಾರ ತಿಳಿದಾಗ ದಿಢೀರ್​ ಎಂದು ಮೀಸಲು ದಿನವನ್ನು ಘೋಷಿಸಲಾಯಿತು. ಭಾರತವು ಪ್ರತಿಬಾರಿಯೂ ತನಗೆ ಬೇಕಾದಂತೆ ಅನುಕೂಲಗಳನ್ನು ಪಡೆಯುತ್ತದೆ. ಭಾರತ ಮಾತಿಗೆ ಸಿಗುವಷ್ಟು ಮನ್ನಣೆ ಐಸಿಸಿ ಯಾಕೆ ಬೇರೆ ತಂಡಗಳಿಗೆ ಕೊಡುವುದಿಲ್ಲ. ಇಂಗ್ಲೆಂಡ್​ನಂತಹ ತಂಡವು ಏನು ಮಾಡದ ಸ್ಥಿತಿಯಲ್ಲಿ ಭಾರತ ಶಕ್ತಿಶಾಲಿಯಾಗಿದೆ. ಕ್ರಿಕೆಟ್​ ಕೇವಲ ಒಂದು ಶಕ್ತಿಯಿಂದ ನಡೆಯುತ್ತಿದೆ ಎಂದು ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಇಂಜಮಾಮ್​ ಉಲ್​ ಹಕ್​ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts