More

    ಆ್ಯಪ್‌ನಲ್ಲಿ ಹೂಡಿಕೆ; ಕೋಟ್ಯಂತರ ರೂ. ಧೋಖಾ

    ಬೆಂಗಳೂರು: ಫೆೇಸ್‌ಬುಕ್, ಇನ್‌ಸ್ಟಾದಲ್ಲಿ ಟ್ರೇಡಿಂಗ್ ಬಿಸಿನೆಸ್ ಬಗ್ಗೆ ಜಾಹೀರಾತು ಕೊಟ್ಟು ಬಳಿಕ ಆ್ಯಪ್‌ನಲ್ಲಿ ಹೂಡಿಕೆ ಮಾಡಿಸಿ ಸೈಬರ್ ಕಳ್ಳರು, ಕೋಟಿ ಕೋಟಿ ರೂ. ವಂಚನೆ ಮಾಡುತ್ತಿದ್ದಾರೆ.ಪ್ರತ್ಯೇಕ ಕೇಸಿನಲ್ಲಿ ಮೂವರು ತಲಾ 1.50 ಕೋಟಿ ರೂ.ಗೂ ಹೆಚ್ಚಿನ ಹಣ ಕಳೆದುಕೊಂಡಿರುವುದು ವರದಿಯಾಗಿದೆ.
    ಜಯನಗರ 8ನೇ ಹಂತದ 50 ವರ್ಷದ ವ್ಯಕ್ತಿ, ಫೆೇಸ್‌ಬುಕ್‌ನಲ್ಲಿ ಹಣ ಹೂಡಿಕೆ ಬಗ್ಗೆ ಸರ್ಚ್ ಮಾಡಿದಾಗ ಉಚಿತ ತರಬೇತಿ ಮತ್ತು ಟಾಟಾ ಕ್ಯಾಪಿಟಲ್‌ನಲ್ಲಿ ಹೂಡಿಕೆ ಎಂಬ ಪೇಜ್ ತೆರೆದಿದೆ. ಅದರ ಮೇಲೆ ದೂರುದಾರ ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಜಾಯಿನ್ ಆಗಿದ್ದಾರೆ. ಗ್ರೂಪ್‌ನಲ್ಲಿ ಹೂಡಿಕೆ ಕುರಿತು ತರಬೇತಿ ನೀಡಿದ ಅಪರಿಚಿತ ವ್ಯಕ್ತಿ, ಬುಲ್ಕ್ ಆ್ಯಂಜೆಲ್ ಪ್ರೂ ಮತ್ತು ಆಟ್ಸ್ ಎಂಬ ಆ್ಯಪ್‌ಗಳ ಲಿಂಕ್ ಕಳುಹಿಸಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾನೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಹೂಡಿಕೆ ಮಾಡಿದ್ದಾರೆ. ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿ ದೂರುದಾರರ ಕಡೆಯಿಂದ ಹಂತ ಹಂತವಾಗಿ 1.61 ಕೋಟಿ ರೂ. ಹೂಡಿಕೆ ಮಾಡಿಕೊಂಡು ಸೈಬರ್ ಕಳ್ಳರು ವಂಚಿಸಿದ್ದಾರೆ.
    ಮೋಸಕ್ಕೆ ಒಳಗಾಗಿರುವುದು ತಿಳಿದು ದೂರುದಾರ, ದಕ್ಷಿಣ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಹಿಳೆಗೆ 1.22 ಕೋಟಿ ವಂಚನೆ :

    ಬೆಳ್ಳಂದೂರಿನ 41 ವರ್ಷದ ಮಹಿಳೆಯನ್ನು ಇನ್‌ವೆಸ್ಟ್‌ಮೆಂಟ್ ಶೇರಿಂಗ್ ಅಕಾಡೆಮಿ ಆ್ಯಂಡ್ ಆ್ಯಕ್ಷನ್ ಇನ್‌ವೆಸ್ಟ್‌ಮೆಂಟ್ ವಿಐಪಿ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡಿದ್ದಾರೆ. ಕೆಲವರು ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಬಗ್ಗೆ ಸಾಮಾನ್ಯ ಜ್ಞಾನದ ಹಂಚಿಕೊಂಡು ಬಳಿಕ ವಾಟ್ಸ್‌ಆ್ಯಪ್‌ಗೆ ಆ್ಯಪ್‌ಯೊಂದರ ಲಿಂಕ್ ಕಳುಹಿಸಿ ಡೌನ್‌ಲೋಡ್ ಮಾಡಿಕೊಂಡು ಹೂಡಿಕೆ ಮಾಡಿ. ಇದರಲ್ಲಿ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿದ್ದರು.
    ಇದನ್ನು ನಂಬಿದ ಮಹಿಳೆ, ಲಿಂಕ್ ಸಹಾಯದಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊದಲು 50 ಸಾವಿರ ರೂ. ಹೂಡಿಕೆ ಮಾಡಿದ್ದಾರೆ. ಇದಕ್ಕೆ ಪ್ರತಿಲವಾಗಿ ಮಹಿಳೆಗೆ ಲಾಭಾಂಶ ನೀಡಿದ ಸೈಬರ್ ಕಳ್ಳರು, ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಹೆಚ್ಚಿನ ಕಮಿಷನ್ ಸಿಗಲಿದೆ ಎಂಬ ಆಸೆಯಿಂದ ಹಂತ ಹಂತವಾಗಿ 1.22 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಹಣ ವಾಪಸ್ ಪಡೆಯಲು ಮಹಿಳೆ ಮುಂದಾದಾಗ, ಸಬೂಬುಹೇಳಿದ ಅಪರಿಚಿತ ವ್ಯಕ್ತಿಗಳು, ಕೊನೆಗೆ ಆ್ಯಪ್‌ಗಳನ್ನೇ ಸ್ಥಗಿತ ಮಾಡಿ ಸಂಪರ್ಕ ಕಡಿತ ಮಾಡಿಕೊಡಿದ್ದಾರೆ.

    ಈಕೆಗೆ 1.10 ಕೋಟಿ ಧೋಖಾ :

    ಸುಬ್ರಮಣ್ಯಪುರದಲ್ಲಿ ನೆಲೆಸಿರುವ 38 ವರ್ಷದ ಮಹಿಳೆಗೆ 1.10 ಕೋಟಿ ರೂ. ವಂಚನೆ ಮಾಡಿದ್ದಾರೆ. ಏಪ್ರಿಲ್ 24ರಂದು ಮಹಿಳೆಗೆ ವಾಟ್ಸ್‌ಆ್ಯಪ್‌ನಲ್ಲಿ ಲಿಂಕ್ ಕಳುಹಿಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಸಲಹೆ ಕೊಟ್ಟಿದ್ದರು. ನಂಬಿದ ಮಹಿಳೆ, ವಾಟ್ಸ್‌ಆ್ಯಪ್ ಗ್ರೂಪ್‌ಗೆ ಜಾಯಿಂನ್ ಆಗುವುದರ ಜತೆಗೆ ಆ್ಯಪ್‌ಗಳಲ್ಲಿ ವಿವಿಧ ಬ್ಯಾಂಕ್‌ಗಳಿಂದ ಹಂತ ಹಂತವಾಗಿ 1.10 ಕೋಟಿ ರೂ. ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ದಕ್ಷಿಣ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೂಡಿಕೆಗೆ ಆ್ಯಪ್ ಬಳಕೆ :

    ಟ್ರೇಡಿಂಗ್ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿ ಗಾಳಕ್ಕೆ ಬೀಳಿಸಿಕೊಳ್ಳುತ್ತಾರೆ. ಬಳಿಕ ಆ್ಯಪ್ ಲಿಂಕ್ ಕಳುಹಿಸಿ ಡೌನ್‌ಲೋಡ್ ಮಾಡಿಸಿ ಅದರಲ್ಲಿ ಹೂಡಿಕೆ ಮಾಡಿಸಿ ಏಕಾಏಕಿ ಸರ್ವರ್ ಡೌನ್ ಮಾಡುತ್ತಾರೆ. ಹೂಡಿಕೆ ಮಾಡಿರುವ ಮಾಹಿತಿ ಆ್ಯಪ್ ಜೊತೆಯಲ್ಲಿಯೇ ನಾಶವಾಗುತ್ತಿದೆ. ಸಾರ್ವಜನಿಕರು ಅಧಿಕೃತವಲ್ಲದ ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಬೇಡಿ ಎಂದು ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.

    ತರಬೇತಿ ನೆಪದಲ್ಲಿ ಗಾಳ :

    ಮೊದಲು ವಾಟ್ಸ್‌ಆ್ಯಪ್ ಕಾಲ್ ಮಾಡಿ ಟ್ರೇಡಿಂಗ್ ವ್ಯವಹಾರದ ಕುರಿತು ಉಚಿತ ತರಬೇತಿ ಕೊಡುವುದಾಗಿ ಸೈಬರ್ ಕಳ್ಳರು ಆಸೆ ಹುಟ್ಟಿಸುತ್ತಾರೆ. ತರಬೇತಿ ವೇಳೆ ಇಲ್ಲದ ಸಲ್ಲದೆ ಆಸೆ ಹುಟ್ಟಿಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಮಾಡಬಹುದು ಎಂದು ಆಮಿಷವೊಡ್ಡಿ ತಮ್ಮ ಕಡೆಗೆ ಸೆಳೆದು ಕೊಳ್ಳಲಿದ್ದಾರೆ. ಕೊನೆಗೆ ತಮ್ಮದೆ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದಾರೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts