More

    ವೇದಗಳ ಪರಿಚಯ

    ‘ವೇದಯತೀತಿ ವೇದಃ’ ಅಂದರೆ ಪರಮಾತ್ಮನ ವಿಚಾರವನ್ನು ತಿಳಿಸಿ ಹೇಳುವುದು ವೇದ. ವೇದಗಳ ಕಾಲವನ್ನು ವಿದ್ವಾಂಸರು 6000 ವರ್ಷಗಳಷ್ಟು ಪ್ರಾಚಿನವೆನ್ನುತ್ತಾರೆ. ವೇದ ಎಂದರೆ ಅರಿವು, ತಿಳಿವು, ಜ್ಞಾನ, ಪರಾತ್ಪರ ಶಕ್ತಿಯನ್ನು ಪ್ರತಿನಿಧಿಸುವ ದೇವತೆಗಳನ್ನು ಕುರಿತಾದ ಜ್ಞಾನ ಎಂದು ಅರ್ಥ. ಈ ಜ್ಞಾನವನ್ನು ತಿಳಿಸಿ ಕೊಡುವ ಉದ್ದೇಶದಿಂದಲೇ ಪರಮಾತ್ಮನ ಶ್ವಾಸ-ನಿಶ್ವಾಸದಿಂದ ವೇದಗಳು ಹುಟ್ಟಿಕೊಂಡವು. ಪುರುಷಪ್ರಕೃತವಲ್ಲದ ಈ ವೇದಗಳನ್ನು ಅಪೌರುಷೇಯ ಎಂದು ಕರೆಯಲಾಗಿದೆ. ವೇದವ್ಯಾಸರು ಋಗ್ವೇದ, ಯಜುರ್ವೆದ, ಸಾಮವೇದ, ಹಾಗೂ ಅಥರ್ವಣವೇದ ಎಂದು ವಿಭಾಗಿಸಿಕೊಟ್ಟರು.

    • ಋಗ್ವೇದ: ವೇದ ಮಂತ್ರಗಳನ್ನು ಒಳಗೊಂಡ ಭಾಗಗಳು ಇದರಲ್ಲಿವೆ. ದೇವತೆಗಳ ಉಪಾಸನೆಗಾಗಿ ಮಂತ್ರಗಳನ್ನು ‘ಋಕ್ಕು’ಗಳೆಂದು ಕರೆದಿದ್ದಾರೆ. ಆಯಾ ದೇವತೆಗಳನ್ನು ಕುರಿತು ಆಯಾ ಮಂತ್ರಗಳನ್ನು ಪಠಿಸಬೇಕು. 10,552 ಋಕ್ಕುಗಳನ್ನು ಋಗ್ವೇದ ಒಳಗೊಂಡಿದೆ. ಕೆಲವು ಮಂತ್ರಗಳನ್ನು ಸೇರಿಸಿ ಸೂಕ್ತಗಳೆಂದು ಕರೆಯಲಾಗಿದೆ. ಶ್ರೀಸೂಕ್ತ, ಪುರುಷಸೂಕ್ತ ಮೊದಲಾದ 1028-ಸೂಕ್ತಗಳಿವೆ. ಋಗ್ವೇದವನ್ನು ವೇದಮಂತ್ರ ಒಳಗೊಂಡ ಸಂಹಿತೆ ಎಂದು ಕರೆದರು.
    • ಯಜುರ್ವೆದ: ಯಜುರ್ವೆದ ಅಂದರೆ ಪೂಜಿಸುವ ವಿಧಿ- ವಿಧಾನಗಳನ್ನು ಹೇಳಿಕೊಡುವುದಾಗಿದೆ. ಇಂದ್ರ, ವರುಣ, ಅಗ್ನಿ, ವಾಯು ಮುಂತಾದ 33 ಕೋಟಿ ದೇವರನ್ನು ಪೂಜಿಸುವ ವಿಧಾನ, ಯಜ್ಞ-ಯಾಗಾದಿಗಳನ್ನು ಹೇಗೆ ಮಾಡಬೇಕು? ಇತ್ಯಾದಿ ಕ್ರಮಗಳನ್ನು ತಿಳಿಸುತ್ತದೆ. ಆಯಾ ಪೂಜೆಗಳಿಂದ ಆಯಾ ದೇವತೆಗಳು ಪ್ರಸನ್ನರಾಗಿ ಅನುಗ್ರಹಿಸುತ್ತಾರೆ. ಒಂದರ ವಿಧಾನ ಇನ್ನೊಂದಕ್ಕೆ ಅನ್ವಯಿಸುವುದಿಲ್ಲ.
    • ಸಾಮವೇದ: ಪರಮಾತ್ಮನನ್ನು ಕುರಿತು ಪದ, ಪದ್ಯ ಸ್ತೋತ್ರ, ಋಗ್ವೇದದ ಋಕ್ಕುಗಳನ್ನು ರಾಗ-ತಾಳಬದ್ಧವಾಗಿ ಹೇಗೆ ಹಾಡಬೇಕು ಎಂಬುದನ್ನು ಸಾಮವೇದವು ಹೇಳಿಕೊಡುತ್ತದೆ.
    • ಅಥರ್ವಣವೇದ: ಯಂತ್ರ ಮಂತ್ರ-ತಂತ್ರಗಳನ್ನು, ವಿರೋಧಿಗಳನ್ನು ನಾಶಪಡಿಸುವ ವಿಧಿ- ವಿಧಾನಗಳನ್ನು ತಿಳಿಸುತ್ತದೆ. ಅಂತೂ-ವೇದಗಳ ಗುರಿ, ಇಲ್ಲಿ ಚೆನ್ನಾಗಿ ಬದುಕಬೇಕು. ಆದರೆ ಈ ಬದುಕಿನಾಚೆಯ ಬದುಕನ್ನು ಮರೆಯಬಾರದು ಎಂಬುದೇ ಆಗಿದೆ.

    ನೆಲದ ಮೇಲೆ ನೀವು ಕಣ್ಣೀರಿಟ್ಟಾಗ… ಟೀಮ್ ಇಂಡಿಯಾ ಕ್ಯಾಪ್ಟನ್​ಗೆ ಸಲಾಂ ಎಂದ ಪಾಕ್ ಮಾಜಿ ಕ್ರಿಕೆಟಿಗ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts