More

    ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಸಿ

    ಕುಶಾಲನಗರ: ಹಾರಂಗಿ, ಯಡವನಾಡು, ಅತ್ತೂರು ಮತ್ತು ಹುದುಗೂರು ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಸುವಂತೆ ಸೆಸ್ಕ್‌ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಶೋಕ್ ಕುಮಾರ್‌ಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಸೋಮವಾರ ಮನವಿ ಸಲ್ಲಿಸಿದರು.

    ಹಾರಂಗಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮತ್ತು ರಾಜ್ಯಕ್ಕೆ ನೀರುಣಿಸುವ ಅಣೆಕಟ್ಟೆಯಲ್ಲಿ ಪ್ರಮುಖ ಅಣೆಕಟ್ಟೆ . ಆದರೆ ಈ ಅಣೆಕಟ್ಟೆಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಕುಶಾಲನಗರದಿಂದ ಕೂಡಿಗೆ-ಭುವನಗಿರಿ ಮಾರ್ಗವಾಗಿ ಸುಮಾರು 60 ಕಿಮೀ ನಷ್ಟು ಬಳಸಿಕೊಂಡು ಬಂದು ಕೊನೆಯದಾಗಿ ಹಾರಂಗಿ ಮತ್ತು ಯಡವನಾಡು ಅತ್ತೂರು, ಹುದುಗೂರು ಗ್ರಾಮಕ್ಕೆ ವಿದ್ಯುತ್ ಸರಬರಾಜು ಆಗುತ್ತಿದೆ. ಇದರಿಂದ ಈ ಮಾರ್ಗ ಮಧ್ಯದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದರೆ ವಿದ್ಯುತ್ ಕಡಿತವಾಗುತ್ತದೆ. ಸಣ್ಣ ಗಾಳಿ ಮಳೆ ಬಂದರೂ ಹಾರಂಗಿ ಅಣೆಕಟ್ಟೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಭಾಸ್ಕರ್ ನಾಯಕ್ ಸುದಸ್ದಿಗಾರರಿಗೆ ಹೇಳಿದರು.

    ವಿದ್ಯುತ್ ಕಡಿತವಾದ ಕೂಡಲೇ ಅಣೆಕಟ್ಟೆಯ ಮುಂಭಾಗದಲ್ಲಿರುವ ಬಿಎಸ್‌ಎನ್‌ಎಲ್ ಟವರ್‌ನಲ್ಲಿ ನೆಟ್‌ವರ್ಕ್ ಇಲ್ಲದಂತಾಗುತ್ತದೆ. ಅಣೆಕಟ್ಟೆ ಮತ್ತು ಮುಂಭಾಗದ ಗ್ರಾಮಗಳ ಜನರು ಇದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೆ ಅಣೆಕಟ್ಟೆಗೆ ಸಂಗೀತ ಕಾರಂಜಿ ನೋಡಲು ಬರುವ ಪ್ರವಾಸಿಗರು ಹಲವು ಬಾರಿ ಕಾರಂಜಿ ನೋಡದೆ ನಿರಾಸೆಯಿಂದ ತೆರಳಿದ್ದಾರೆ. ಕುಡಿಯುವ ನೀರಿನ ಸರಬರಾಜಿನಲ್ಲೂ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು.

    ಅಣೆಕಟ್ಟೆ ತುಂಬಿದ ಸಂದರ್ಭ ಯಾವುದೇ ಸಮಯದಲ್ಲಿ ಸಮಸ್ಯೆ ಉಂಟಾಗಬಹುದಾಗಿರುವುದರಿಂದ ಪ್ರತ್ಯೇಕ ವಿದ್ಯುತ್ ಫೀಡರ್ ಅಳವಡಿಕೆ ಮಾಡಬೇಕೆಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts