More

    ದಕ್ಷಿಣ ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ರನ್‌ಮಳೆ ಹರಿಸಿದ ಭಾರತ: ಹಲವು ದಾಖಲೆ ಬರೆದ ಸ್ಮೃತಿ-ಶೆಫಾಲಿ

    ಚೆನ್ನೈ: ಶೆಫಾಲಿ ವರ್ಮ (205 ರನ್, 197 ಎಸೆತ, 23 ಬೌಂಡರಿ, 8 ಸಿಕ್ಸರ್) ಚೊಚ್ಚಲ ದ್ವಿಶತಕ ಹಾಗೂ ಸ್ಮೃತಿ ಮಂದನಾ (149 ರನ್, 161 ರನ್, 27 ಬೌಂಡರಿ, 1 ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು ಮೊದಲ ದಿನವೇ ರನ್‌ಪ್ರವಾಹ ಹರಿಸಿ ದಾಖಲೆಯ ಮೊತ್ತ ಕಲೆಹಾಕಿದೆ.

    ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಶೆಾಲಿ ವರ್ಮ ಹಾಗೂ ಸ್ಮತಿ ಮಂದನಾ 292 ರನ್‌ಗಳ ಭದ್ರ ಅಡಿಪಾಯ ಹಾಕಿಕೊಟ್ಟರೆ, ಕನ್ನಡತಿ ಶುಭಾ ಸತೀಶ್ (15) ಹೆಚ್ಚು ಹೊತ್ತು ನಿಲ್ಲಲಿಲ್ಲ. ಜೆಮೀಮಾ ರೋಡ್ರಿಗಸ್ (55 ರನ್, 94 ಎಸೆತ, 8 ಬೌಂಡರಿ) ಅರ್ಧಶತಕದ ಬಲದಿಂದ ದಿನದಂತ್ಯಕ್ಕೆ ಭಾರತ 98 ಓವರ್‌ಗಳಲ್ಲಿ 4 ವಿಕೆಟ್‌ಗೆ 525 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್ (42*) ಹಾಗೂ ವಿಕೆಟ್ ಕೀಪರ್-ಬ್ಯಾಟರ್ ರಿಚಾ ೋಷ್ (43*) ಮುರಿಯದ 5ನೇ ವಿಕೆಟ್‌ಗೆ 66 ಎಸೆತಗಳಲ್ಲಿ 75 ರನ್ ಕಸಿದು 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಭಾರತ: 98 ಓವರ್‌ಗಳಲ್ಲಿ 4 ವಿಕೆಟ್‌ಗೆ 525 (ಸ್ಮೃತಿ ಮಂದನಾ 149, ಶೆಫಾಲಿ 205, ಶುಭಾ 15, ಜೆಮೀಮಾ 55, ಹರ್ಮಾನ್‌ಪ್ರೀತ್ 42*, ರಿಚಾ 43*, ಡೆಲ್‌ಮಿ ಟಕ್ಕರ್ 141ಕ್ಕೆ 2).

    525: ಪುರುಷರ ಹಾಗೂ ಮಹಿಳಾ ಟೆಸ್ಟ್ ಕ್ರಿಕೆಟ್ ಪಂದ್ಯದ ಒಂದು ದಿನದ ಆಟದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ. 2002ರಲ್ಲಿ ಬಾಂಗ್ಲಾದೇಶ ಎದುರು ಶ್ರೀಲಂಕಾ ಪುರುಷರ ತಂಡ 9 ವಿಕೆಟ್‌ಗೆ 509 ರನ್ ಗಳಿಸಿದ್ದು ಹಿಂದಿನ ಗರಿಷ್ಠ ಮೊತ್ತ.

    1: ಭಾರತ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದ್ದು, ಇಂಗ್ಲೆಂಡ್ ಎದುರು 467 ರನ್ ಗಳಿಸಿದ್ದು ಹಿಂದಿನ ಸಾಧನೆ.

    292: ಸ್ಮೃತಿ ಮಂದನಾ ಹಾಗೂ ಶೆಫಾಲಿ ವರ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ 2ನೇ ಗರಿಷ್ಠ ರನ್ ಜತೆಯಾಟವಾಡಿದ ಜೋಡಿ ಎನಿಸಿದರು. 1987ರಲ್ಲಿ ಆಸ್ಟ್ರೇಲಿಯಾದ ಎಲ್‌ಎ ರೀಲರ್-ಡಿಎ ಅನ್ನೆಟ್ಸ್ ಜೋಡಿ ಮೂರನೇ ವಿಕೆಟ್‌ಗೆ 309 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ. ಮೊದಲ ವಿಕೆಟ್‌ಗೆ ಪಾಕಿಸ್ತಾನದ ಕಿರಣ್ ಬಲೂಚಾ-ಸಜೀದಾ ಷಾ ಜೋಡಿ 241 ರನ್‌ಗಳಿಸಿದ್ದು ಹಿಂದಿನ ದಾಖಲೆ.

    2. ಶೆಫಾಲಿ ವರ್ಮ (20 ವರ್ಷ, 152 ದಿನ) ಭಾರತದ ಪರ ದ್ವಿಶತಕ ಸಿಡಿಸಿದ 2ನೇ ಮಹಿಳಾ ಬ್ಯಾಟರ್ ಹಾಗೂ ಕಿರಿಯ ಆಟಗಾರ್ತಿ ಎನಿಸಿದರು. ಮಿಥಾಲಿ ರಾಜ್ (19 ವರ್ಷ 256 ದಿನ) ಮೊದಲ ಭಾರತೀಯ ಸಾಧಕಿ. 2002ರಲ್ಲಿ ಮಿಥಾಲಿ (214 ರನ್) 407 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

    1: ಶೆಫಾಲಿ ವರ್ಮ (192 ಎಸೆತ) ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ಸಿಡಿಸಿದ ಆಸ್ಟ್ರೇಲಿಯಾದ ಅನ್ನಾಬೆಲ್ ಸುದರ್‌ಲ್ಯಾಂಡ್ (256) ದಾಖಲೆ ಮುರಿದರು.

    1: ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನವೇ 500 ರನ್‌ಗಳಿಸಿದ ಮೊದಲ ತಂಡ ಭಾರತ. 1935ರಲ್ಲಿ ನ್ಯೂಜಿಲೆಂಡ್ (44) ಹಾಗೂ ಇಂಗ್ಲೆಂಡ್ (431/4) ಎರಡೂ ತಂಡಗಳು ಸೇರಿ 475 ರನ್ ಕಲೆಹಾಕಿದ್ದು ಹಿಂದಿನ ಶ್ರೇಷ್ಠ ಸಾಧನೆ.

    2. ಶೆಫಾಲಿ-ಸ್ಮತಿ ಮಹಿಳೆಯರ ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಶತಕ ಸಿಡಿಸಿದ 2ನೇ ಆರಂಭಿಕ ಜೋಡಿ. 2004ರಲ್ಲಿ ಇಂಗ್ಲೆಂಡ್‌ನ ಚಾರ್ಲೋರ್ಟ್ ಎಡ್ವರ್ಡ್ಸ್-ಲೌರಾ ನ್ಯೂಟನ್ ಈ ಸಾಧನೆ ಮಾಡಿದ ಮೊದಲಿಗರು.

    8: ಶೆಫಾಲಿ ವರ್ಮ ಮಹಿಳೆಯರ ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts