More

    ಭಾರತ – ದಕ್ಷಿಣ ಆಫ್ರಿಕಾ ಫೈನಲ್​ಗೆ ಮಳೆ ಅಡ್ಡಿಯಾದರೆ ಚಾಂಪಿಯನ್ ಆಗುವವರು ಯಾರು? ಡಕ್‌ವರ್ತ್ ಲೂಯಿಸ್ ನಿಯಮ ಏನು?

    ನವದೆಹಲಿ: ಟಿ20 ವಿಶ್ವಕಪ್ 2024 ರ ಅಂತಿಮ ಪಂದ್ಯವು ಶನಿವಾರ(ಜೂನ್ 29) ಭಾರತ ತಂಡ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಈ ಪಂದ್ಯ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕಿಂಗ್‌ಸ್ಟನ್ ಓವಲ್‌ನಲ್ಲಿ ನಡೆಯಲಿದೆ. ಆದರೆ ಇದಕ್ಕೂ ಮುನ್ನ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದು ಹೊರಬಂದಿದೆ.

    ಇದನ್ನೂ ಓದಿ: ರೋಹಿತ್ ಶರ್ಮ ಕೇವಲ ಒಬ್ಬ ಕ್ಯಾಪ್ಟನ್​ ಅಲ್ಲ, ಅವರು… ಪಿಯೂಷ್ ಚಾವ್ಲಾ ಮಾತಿಗೆ ತಲೆಬಾಗಿದ ಕ್ರಿಕೆಟ್ ಫ್ಯಾನ್ಸ್​

    ಪಂದ್ಯದ ವೇಳೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ವೇಳೆ ಮಳೆ ಬಂದರೆ ಪಂದ್ಯ ನಡೆಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಒಂದು ವೇಳೆ ಪಂದ್ಯ ರದ್ದಾದರೆ ಡಕ್ವರ್ತ್ ಲೂಯಿಸ್ ನಿಯಮಗಳೇನು? ಎಂಬ ಬಗ್ಗೆಯೂ ಕ್ರೀಡಾವಲಯದಲ್ಲಿ ಚರ್ಚಿತವಾಗುತ್ತಿದೆ.

    ಮಳೆ ಕಣ್ಣಾಮುಚ್ಚಾಲೆ ಆಡಿದರೆ ಎಷ್ಟು ಓವರ್‌ಗಳಲ್ಲಿ ಪಂದ್ಯ ಮುಗಿಯುತ್ತದೆ? ಅಲ್ಲದೆ, ಪಂದ್ಯದ ಓವರ್‌ಗಳ ಕಡಿತದ ಸಮಯ ಎಷ್ಟು? ಪಂದ್ಯ ಮತ್ತು ಮೀಸಲು ದಿನ ಎರಡೂ ಮಳೆಯಲ್ಲಿ ಕೊಚ್ಚಿಹೋದರೆ ಚಾಂಪಿಯನ್ ಯಾರು? ಇವೆಲ್ಲವುಗಳಿಗೆ ಉತ್ತರ ತಿಳಿಯೋಣ…

    ಪಂದ್ಯವನ್ನು ಶತಾಯ ಗತಾಯ ನಡೆಸಲು ಐಸಿಸಿ ಪ್ರಯತ್ನ ಮಾಡಿದೆ. ಇದಕ್ಕಾಗಿ ಐಸಿಸಿ 190 ನಿಮಿಷ (3 ಗಂಟೆ 10 ನಿಮಿಷ) ಹೆಚ್ಚುವರಿ ಸಮಯವನ್ನು ನೀಡಿದೆ. ಅಂದರೆ ಮಳೆಯ ಬಂದರೆ ಪಂದ್ಯದ ಸಮಯವನ್ನು ಆಗಾಗ ವಿಸ್ತರಿಸಬಹುದು. ಒಂದು ವೇಳೆ ಪಂದ್ಯ ಈ ದಿನ ರದ್ದಾದರೆ ಮೀಸಲು ದಿನ ಪಂದ್ಯ ನಡೆಸಬಹುದು. ಆದರೆ ಆ ದಿನವೂ ಮಳೆ ಕಣ್ಣಾಮುಚ್ಚಾಲೆ ಆಡಿದರೆ, ಡಕ್ವರ್ತ್ ಲೂಯಿಸ್ ನಿಯಮದ ಅಡಿಯಲ್ಲಿ ಪಂದ್ಯವನ್ನು 10-10 ಓವರ್‌ಗಳಲ್ಲಿ ಆಡಲು ಪ್ರಯತ್ನಿಸಲಾಗುವುದು. ಇದಕ್ಕಾಗಿ, ಕೊನೆಯ ಕಟ್‌ಆಫ್ ಸಮಯವನ್ನು ಭಾರತೀಯ ಕಾಲಮಾನ ಮಧ್ಯಾಹ್ನ 1:40 ರವರೆಗೆ ಇರಿಸಲಾಗಿದೆ (ಹೆಚ್ಚುವರಿ ಸಮಯ ಸೇರಿದಂತೆ). ಈ ವೇಳೆಗಾದರೂ ಪಂದ್ಯ ಆರಂಭವಾಗದಿದ್ದರೆ ಮೀಸಲು ದಿನದಂದು (ಜೂನ್ 30) ನಡೆಯಲಿದೆ.

    ಒಂದು ವೇಳೆ ಶನಿವಾರ (ಜೂನ್ 29) 10 ಓವರ್ ಗಳವರೆಗೆ ಪಂದ್ಯ ನಡೆಯದಿದ್ದರೆ, ಮೀಸಲು ದಿನವಾದ ಜೂನ್ 30 ರಂದು ಪಂದ್ಯ ನಡೆಯಲಿದೆ. ಅಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ಮೀಸಲು ದಿನದಂದು ಸಹ ಪಂದ್ಯವು ಮಳೆಯಿಂದ ರದ್ದಾದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ. ವಿಶ್ವಕಪ್ (ಟಿ20 ಮತ್ತು ಏಕದಿನ) ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಸಂಭವಿಸುತ್ತದೆ.

    ತಂಡಗಳ ಆಟಗಾರರು: ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್​, ಜಸ್ಪ್ರೀತ್ ಬುಮ್ರಾಹ್ ಮತ್ತು ಮೊಹಮ್ಮದ್ ಸಿರಾಜ್.

    ದಕ್ಷಿಣ ಆಫ್ರಿಕಾ: ಏಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ರಿಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ಸ್ಟಬ್ಸ್, ಮಾರ್ಕೊ ಜಾನ್ಸೆನ್, ಒಟ್ನಿಯಲ್ ಬಾರ್ಟ್‌ಮನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಬ್ಜಾರ್ನ್ ಫೋರ್ಟುಯ್ನ್, ಎನ್ರಿಕ್ವೆ ಫೋರ್ಟ್ಯುನ್ ಮತ್ತು ಎನ್ರಿಕ್ವೆನ್ ಫೋರ್ಟ್ಯೂನ್ ತಬ್ರಿಜ್​.

    ವಿರಾಟ್​ ಕೊಹ್ಲಿಯ ದೊಡ್ಡ ದಾಖಲೆ ಮುರಿಯುವರೇ ರೋಹಿತ್ ಶರ್ಮಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts