More

    ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ 6.8%: ಎಸ್ ಆ್ಯಂಡ್​ ಪಿ ಗ್ಲೋಬಲ್ ರೇಟಿಂಗ್ಸ್ ಭವಿಷ್ಯ

    ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು 2024-25ನೇ ಹಣಕಾಸು ವರ್ಷದಲ್ಲಿ ಶೇ. 6.8 ಇರಲಿದೆ ಎಂದು ಎಸ್​ ಆ್ಯಂಡ್​ ಪಿ ಗ್ಲೋಬಲ್ ರೇಟಿಂಗ್ಸ್ ಮುನ್ಸೂಚನೆ ನೀಡಿದೆ.

    “ಭಾರತದ ಆರ್ಥಿಕ ಬೆಳವಣಿಗೆಯು ಏರಿಕೆಯ ಮೂಲಕ ಅಚ್ಚರಿ ಮುಂದುವರಿಸಿದೆ. 2023-24 ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ. 8.2ಕ್ಕೆ ಪರಿಷ್ಕರಿಸಲಾಗಿದೆ. ಹೆಚ್ಚಿನ ಬಡ್ಡಿ ದರಗಳು ಮತ್ತು ಕೃಷಿಯೇತರ ವಲಯಗಳಲ್ಲಿ ಕಡಿಮೆ ಹಣಕಾಸಿನ ಉತ್ತೇಜಕ ಬೇಡಿಕೆಯೊಂದಿಗೆ ಈ ಹಣಕಾಸು ವರ್ಷದಲ್ಲಿ ಬೆಳವಣಿಗೆಯು ಶೇ. 6.8ರಷ್ಟು ಆಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ರೇಟಿಂಗ್ ಸಂಸ್ಥೆಯು ಏಷ್ಯಾ ಪೆಸಿಫಿಕ್ ಪ್ರದೇಶದ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ ಹೇಳಿದೆ.

    ಹಣಕಾಸು ವರ್ಷ 2025-26 ಮತ್ತು 2026-27ರಲ್ಲಿ, ಭಾರತದ ಆರ್ಥಿಕತೆಯು ಕ್ರಮವಾಗಿ ಶೇ. 6.9 ಮತ್ತು ಶೇ. 7 ರಷ್ಟು ಬೆಳೆಯುತ್ತದೆ ಎಂದು ಅದು ಅಂದಾಜಿಸಿದೆ.

    ಚೀನಾದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು 2024ಕ್ಕೆ ಶೇ. 4.6 ರಿಂದ ಶೇ. 4.8 ಏರಿಸಿದೆ,

    ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಬಡ್ಡಿ ನೀತಿ ದರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಸ್ತುತ ಶೇ. 6.5 ರಿಂದ ಶೇ. 6 ಕ್ಕೆ ಇಳಿಸುತ್ತದೆ ಎಂದು ರೇಟಿಂಗ್​​ ಸಂಸ್ಥೆ ನಿರೀಕ್ಷಿಸುತ್ತದೆ. ಅಲ್ಲದೆ, ಬಡ್ಡಿ ದರವನ್ನು 2025-26 ಮತ್ತು 2026-27ರಲ್ಲಿ ಕ್ರಮವಾಗಿ ಶೇ. 5.5 ಮತ್ತು ಶೇ. 5.25ಕ್ಕೆ ಕಡಿತ ಮಾಡಲಿದೆ ಎಂದು ಅದು ನಿರೀಕ್ಷಿಸುತ್ತದೆ.

    ಹೊಸ ಮೈತ್ರಿಗಳನ್ನು ರೂಪಿಸುವಲ್ಲಿ ಮತ್ತು ಹಣದುಬ್ಬರ, ಅಧಿಕ ನಿರುದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆಗಳಂತಹ ದೀರ್ಘಕಾಲದ ಸವಾಲುಗಳನ್ನು ಎದುರಿಸುವಲ್ಲಿ ಭಾರತೀಯ ಜನತಾ ಪಕ್ಷವು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಮುಂದಿನ ಐದು ವರ್ಷಗಳ ಕಾಲ ಭಾರತದ ಬೆಳವಣಿಗೆಯ ಪಥವನ್ನು ನಿರ್ಧರಿಸುತ್ತದೆ ಎಂದು ರೇಟಿಂಗ್ ಸಂಸ್ಥೆ ಹೇಳಿದೆ.

    “ಸಮ್ಮಿಶ್ರ ಪಾಲುದಾರರು ನೀತಿ ನಿರ್ಧಾರಗಳಲ್ಲಿ ಪ್ರಭಾವ ಮತ್ತು ಹತೋಟಿಯನ್ನು ಪಡೆಯುತ್ತಾರೆ. ಬಿಜೆಪಿಯು ಒಗ್ಗಟ್ಟಿನ ಸರ್ಕಾರವನ್ನು ನಿರ್ವಹಿಸಲು ಸಂಧಾನ ಮತ್ತು ಹೊಂದಾಣಿಕೆಯ ಸಾಧನಗಳನ್ನು ಬಳಸಬೇಕಾಗುತ್ತದೆ. ಇದು ನಿರ್ಧಾರ ತೆಗೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಪಕ್ಷದ ಕೆಲವು ಪ್ರಮುಖ ನೀತಿ ಉಪಕ್ರಮಗಳನ್ನು ಇದು ದುರ್ಬಲಗೊಳಿಸಬಹುದು” ಎಂದು ಅದು ಹೇಳಿದೆ.

    ಆರಂಭಿಕ ಕುಸಿತದ ನಂತರ ಚೇತರಿಕೆ: ಅಲ್ಪ ಏರಿಕೆ ಕಂಡ ಸೂಚ್ಯಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts