More

    5 ಓವರ್​ ಅಂತ್ಯಕ್ಕೆ ರೋಹಿತ್, ಪಂತ್​, ‘ಸ್ಕೈ’ ವಿಕೆಟ್​ ಪತನ! ಸಂಕಷ್ಟದಲ್ಲಿ ಟೀಮ್ ಇಂಡಿಯಾ

    ಬಾರ್ಬಡೋಸ್​: ಇಲ್ಲಿನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾರೀ ಪೈಪೋಟಿಗೆ ಇಳಿದಿದ್ದು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾಗೆ ಬೌಲಿಂಗ್ ಮಾಡುವಂತೆ ತಿಳಿಸಿತು. ನಾಯಕನ ಆಕರ್ಷಕ ಇನ್ನಿಂಗ್ಸ್​ ಇಲ್ಲಿಯೂ ನೋಡಬಹುದು ಎಂದು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ರೋಹಿತ್ ವಿಕೆಟ್ ಭಾರೀ ಬೇಸರ ಮೂಡಿಸಿತು.

    ಇದನ್ನೂ ಓದಿ: ಮರ್ದಾಳ ಜಂಕ್ಷನ್‌ನಲ್ಲಿ ಹಂಪ್ಸ್ : ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಮನವಿ

    ಉತ್ತಮ ಸ್ಟಾರ್ಟ್​ ಕೊಟ್ಟ ವಿರಾಟ್ ಕೊಹ್ಲಿ, ಮೊದಲ ಓವರ್​ನಲ್ಲಿಯೇ ಮೂರು ಬೌಂಡರಿ ಸಿಡಿಸುವ ಮೂಲಕ 15 ರನ್​ಗಳನ್ನು ತಂಡಕ್ಕೆ ತಂದುಕೊಟ್ಟರು. ಈ ವೇಳೆ ಎರಡನೇ ಓವರ್​ ಪ್ರಾರಂಭದಲ್ಲಿ ಎರಡು ಬೌಂಡರಿ ಬಾರಿಸಿದ ರೋಹಿತ್​, ಕೇಶವ್ ಮಹಾರಾಜ್​ಗೆ ಬೌಲಿಂಗ್​ನಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. 5 ಎಸೆತಗಳಲ್ಲಿ 9 ರನ್ ಕಲೆಹಾಕಿದ ಶರ್ಮ, ಕ್ಲೇಸನ್​ಗೆ ಕ್ಯಾಚ್​ ಕೊಟ್ಟು, ಪೆವಿಲಿಯನ್​ನತ್ತ ಮುಖಮಾಡಿದರು.

    ರೋಹಿತ್ ಔಟ್ ಆಗುತ್ತಿದ್ದಂತೆ ಕ್ರೀಸ್​ಗೆ ಬಂದ ರಿಷಭ್ ಪಂತ್​ ಶೂನ್ಯಕ್ಕೆ ತಮ್ಮ ವಿಕೆಟ್ ಕಳೆದುಕೊಂಡು ಕ್ಯಾಪ್ಟನ್ ಹಾದಿಹಿಡಿದರು. ಎರಡು ಬಾಲ್ ಎದುರಿಸಿದ ಪಂತ್​, ಕೇಶವ್ ಮಹಾರಾಜ್​ಗೆ ವಿಕೆಟ್ ಒಪ್ಪಿಸಿ, ಮೈದಾನದಿಂದ ಹೊರನಡೆದರು. ಇದು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಭಾರೀ ಆಘಾತ ಉಂಟುಮಾಡಿತು. ಇವರಿಬ್ಬರ ಬೆನ್ನಲ್ಲೇ ಸೂರ್ಯಕುಮಾರ್​ ಯಾದವ್​ ಕೂಡ ಕೇವಲ 3 ರನ್​ ಗಳಿಸಿ ಪೆವಿಲಿಯನ್​ನತ್ತ ಸಾಗಿದ್ದಾರೆ.

    ವಿರಾಟ್ ಕೊಹ್ಲಿ ಕಳಪೆ ಫಾರ್ಮ್​ಗೆ ಇದೇ ಬಲವಾದ ಕಾರಣ! ಶಾಕಿಂಗ್ ಸಂಗತಿ ತೆರೆದಿಟ್ಟ ರವಿಶಾಸ್ತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts