More

    IND vs SA: ಫೈನಲ್‌ನಲ್ಲಿ ‘ವಿರಾಟ’ ರೂಪ! ಸೌತ್​ ಆಫ್ರಿಕಾಗೆ 176 ರನ್ ಗುರಿ ನೀಡಿದ ಭಾರತ

    ಬಾರ್ಬಡೋಸ್​: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಭಾರತ ತಂಡ ಗೆಲ್ಲಲು 176 ರನ್ ಗಳ ಸವಾಲಿನ ಗುರಿ ನೀಡಿದೆ.

    ಇದನ್ನೂ ಓದಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದ ಸಿದ್ದರಾಮಯ್ಯ

    ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ 20 ವಿಶ್ವಕಪ್ 2024 ರ ಫೈನಲ್​ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನೂ 20 ಓವರ್‌ಗಳಲ್ಲಿ ಟೀಂ ಇಂಡಿಯಾ 7 ವಿಕೆಟ್‌ ಕಳೆದುಕೊಂಡು 176 ರನ್‌ಗಳಿಸಿದೆ.

    ಟೀಂ ಇಂಡಿಯಾಗೆ ಆರಂಭಿಕ ಆಘಾತ!: ಮೊದಲು ಬ್ಯಾಟ್ ಮಾಡಿ ಬಂದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯ್ತು. ನಾಯಕ ರೋಹಿತ್‌‌ ಶರ್ಮಾ 9 ರನ್‌‌ಗಳಿಸಿ ಔಟ್ ಆದರೆ, ವಿಕೆಟ್ ಕೀಪರ್​ ಪಂತ್‌ ಕೂಡ ಡಕೌಟ್‌ ಆದರು. ಸೂರ್ಯ ಕುಮಾರ್‌ 3 ರನ್​ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಆದ್ರೆ ಇಲ್ಲಿಯವರೆಗೂ ವೈಫಲ್ಯ ಕಂಡಿದ್ದ ವಿರಾಟ್‌ ಕೊಹ್ಲಿ, ಈ ಪಂದ್ಯದಲ್ಲಿ ಭರ್ಜರಿ ಆಟ ಆಡಿದರು. ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ಕೊಹ್ಲಿ ಅರ್ಧ ಶತಕ ಬಾರಿಸುವ ಮೂಲಕ ಆಸರೆಯಾದ್ರು.

    ಅಂತಿಮವಾಗಿ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಸೌತ್ ಆಫ್ರಿಕಾಗೆ ಗೆಲ್ಲಲು 176 ರನ್ ಗಳ ಗುರಿ ನೀಡಿತು.

    ಬಿಜೆಪಿ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಸಮಯ ಬಂದಿದೆ: ಮಾಜಿ ಸಿಎಂ ಹೇಮಂತ್​ ಸೂರೆನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts