More

    ಲೋಕಸಭೆ ಅಧಿವೇಶನ..ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು

    ನವದೆಹಲಿ: ಎರಡು ದಿನಗಳ ವಿರಾಮದ ನಂತರ ಸಂಸತ್ ಅಧಿವೇಶನ ಸೋಮವಾರ(ಜೂ.1)ಆರಂಭವಾಯಿತು. ಆರಂಭದಲ್ಲೇ ನೀಟ್ ಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದವು.

    ಇದನ್ನೂ ಓದಿ: ಕುಸಿದ ನೀರಿನ ಟ್ಯಾಂಕ್: ಇಬ್ಬರು ಮೃತ್ಯು- 13 ಮಂದಿಗೆ ಗಾಯ

    ಇದೇ ತಿಂಗಳ 24ರಂದು ಲೋಕಸಭೆ ಅಧಿವೇಶನ ಆರಂಭವಾಗಿದ್ದು, ಮೊದಲೆರಡು ದಿನ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದರು. ಮೂರನೇ ದಿನ ಸಭಾಧ್ಯಕ್ಷರ ಆಯ್ಕೆ ನಡೆಯಿತು. 27ರಂದು ರಾಷ್ಟ್ರಪತಿಯವರು ಮಾತನಾಡಿದರು. ಸೋಮವಾರ ಅಧಿವೇಶನ ಆರಂಭವಾಗುತ್ತಿದ್ದಂತೆ ನೀಟ್ ಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

    ಪ್ರತಿಪಕ್ಷಗಳ ವಿರೋಧದ ನಡುವೆಯೇ ಸಭೆ ನಡೆಯುತ್ತಿದೆ. ಮೊದಲಿಗೆ ವಿವಿಧ ಸಮಿತಿಗಳ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡಿಸಿದರು.

    ನಂತರ ಸ್ಪೀಕರ್ ಒಂಬಿರ್ಲಾ ಅವರು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡಿದರು. ಬಿಜೆಪಿ ಹಮೀರ್‌ಪುರ ಸಂಸದ ಅನುರಾಗ್ ಠಾಕೂರ್ ಚರ್ಚೆ ಆರಂಭಿಸಿದರು.

    ದೇಶದ ಜನತೆ ಮೋದಿ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಸತತ ಮೂರನೇ ಬಾರಿಗೆ ಎನ್ ಡಿಎಯನ್ನು ಗೆಲ್ಲಿಸಿದ್ದಾರೆ. ಪ್ರಧಾನಿ ಮೋದಿ ವಿಶ್ವವೇ ಮೆಚ್ಚುವ ನಾಯಕ ಎಂದು ಹೇಳಿದರು.

    ದೇಶದಿಂದ ಬಡತನ ಓಡಿಸುತ್ತೇವೆ ಎಂದು ದಶಕಗಳಿಂದ ಕಾಂಗ್ರೆಸ್ ಘೋಷಣೆಗಳನ್ನು ನೀಡುತ್ತಿದೆ. ಆದರೆ ಮೋದಿ ಸರ್ಕಾರ ಬಡತನ ಓಡಿಸುವ ಕೆಲಸ ಮಾಡುತ್ತಿದೆ ಎಂದರು.

    ಅಸ್ಸಾಂನಲ್ಲಿ ‘ಕ್ಯಾಶ್ ಫಾರ್ ಮಾರ್ಕ್’ ಹಗರಣ..9 ಮಂದಿ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts