More

    ಅಸ್ಸಾಂನಲ್ಲಿ ‘ಕ್ಯಾಶ್ ಫಾರ್ ಮಾರ್ಕ್’ ಹಗರಣ..9 ಮಂದಿ ಬಂಧನ!

    ಗುವಾಹಟಿ: ಅಸ್ಸಾಂನಲ್ಲಿ ‘ಕ್ಯಾಶ್ ಫಾರ್ ಮಾರ್ಕ್ಸ್’ ಹಗರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಅಂಕಗಳನ್ನು ಹೆಚ್ಚಿಸಲು ಗುವಾಹಟಿ ವಿಶ್ವವಿದ್ಯಾಲಯದ ಸಿಬ್ಬಂದಿ ಹಣ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ. ಡಿಜಿಟಲ್ ಟ್ಯಾಂಪರಿಂಗ್ ಮಾಡಿದ ಶಂಕಿತ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ

    ಇದನ್ನೂ ಓದಿ: ಕುಸಿದ ನೀರಿನ ಟ್ಯಾಂಕ್: ಇಬ್ಬರು ಮೃತ್ಯು- 13 ಮಂದಿಗೆ ಗಾಯ

    ಗುವಾಹಟಿ ವಿವಿ ಸಂಯೋಜಿತ ಬಾರ್ಪೇಟಾದಲ್ಲಿರುವ ಗಣೇಶಲಾಲ್ ಚೌಧರಿ ಕಾಲೇಜಿನ ಶಿಕ್ಷಕರೊಬ್ಬರು ನಕಲಿ ಅಂಕಗಳನ್ನು ಪತ್ತೆ ಹಚ್ಚುವ ಮೂಲಕ ಹಗರಣವನ್ನು ಬಯಲಿಗೆಳೆದಿದ್ದಾರೆ. ಕಾಲೇಜಿನ ಅಜೀಜುಲ್ ಹಕ್ ಎಂಬ ವಿದ್ಯಾರ್ಥಿಯ ನೈಜ ಅಂಕಗಳಿಗೂ ಅಂಕಪಟ್ಟಿಯಲ್ಲಿನ ಅಂಕಗಳಿಗೂ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ.

    ಹಲವಾರು ಸೆಮಿಸ್ಟರ್‌ಗಳಲ್ಲಿ ಅಂಕಗಳನ್ನು ಹೆಚ್ಚಿಸುವುದಕ್ಕಾಗಿ ಕಂಪ್ಯೂಟರ್ ಆಪರೇಟರ್‌ಗಳಿಗೆ 10ಸಾವಿರ ರೂ. ಪಾವತಿಸಿರುವುದಾಗಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ.

    ಅಸ್ಸಾಂ ಪೊಲೀಸರು ಮತ್ತು ಅಪರಾಧ ತನಿಖಾ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದುವರೆಗೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಅವರ ವಿರುದ್ಧ ಫೋರ್ಜರಿ, ವಂಚನೆ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಕೆಲವು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಈ ಪ್ರಕರಣದ ಪ್ರಮುಖ ಆರೋಪಿ ಕೆ.ಕೃಷ್ಣಮೂರ್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ. ಡಿಜಿಟಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಇನ್ನಷ್ಟು ಆಳವಾದ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

    ಕೊಹ್ಲಿ, ರೋಹಿತ್ ಟಿ20 ನಿವೃತ್ತಿ.. ಇದಕ್ಕಿಂತ ಉತ್ತಮ ಸಂದರ್ಭ ಯಾವುದು ಎಂದ ಗೌತಮ್ ಗಂಭೀರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts