More

    ಭಾರತದ ಹೆಡ್​ ಕೋಚ್ ಆದ್ದಲ್ಲಿ ಈ ಫಾರ್ಮೆಟ್​ಗಳಿಂದ ಐವರು​ ಆಟಗಾರರನ್ನು ಕೈಬಿಡಲಿದ್ದಾರೆ ಗೌತಮ್ ಗಂಭೀರ್!​

    ನವದೆಹಲಿ: ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲುತ್ತಿದ್ದಂತೆ ತಂಡದ ಸ್ಟಾರ್ ಕ್ರಿಕೆಟಿಗರಾದ ಕ್ಯಾಪ್ಟನ್ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದರು. ಈ ನಿರ್ಧಾರ ಕೈಗೊಳ್ಳಲು ಬಿಸಿಸಿಐ ಕಾರಣ ಎಂಬುದು ಸದ್ಯ ಎಲ್ಲರಿಗೂ ತಿಳಿದಿರುವ ಸಂಗತಿ. ಭಾರತ ತಂಡದಲ್ಲಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವ ಉದ್ದೇಶದಿಂದ ಭಾರತೀಯ ಕ್ರಿಕೆಟ್ ಮಂಡಳಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದೆ.

    ಇದನ್ನೂ ಓದಿ: ಬೆಳಗ್ಗೆ ಎದ್ದಾಗ ಈ ಲಕ್ಷಣ ಕಂಡು ಬಂದ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ…

    2024ರ ಟಿ20 ವಿಶ್ವಕಪ್ ಟೂರ್ನಿಯೇ ತನ್ನ ಕೊನೆ ಎಂದು ಈ ಹಿಂದೆಯೇ ತಿಳಿಸಿದ್ದ ಹೆಡ್ ಕೋಚ್ ರಾಹುಲ್ ದ್ರಾವಿಡ್​, ಅದರಂತೆಯೇ ಇಂದು ಭಾರತದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಐಪಿಎಲ್ 17ನೇ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಮೆಂಟರ್ ಆಗಿ ತಂಡವನ್ನು ಚಾಂಪಿಯನ್​ ಪಟ್ಟಕೇರಿಸಿದ ಗೌತಮ್ ಗಂಭೀರ್​ಗೆ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಆಫರ್​ ಕೇಳಿಬಂದಿತ್ತು. ಇದರ ಬಗ್ಗೆ ಒಲವು ತೋರಿಸಿದ್ದ ಗಂಭೀರ್​, ಹೆಡ್ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರಾ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

    ಇನ್ನು ಟೀಮ್ ಇಂಡಿಯಾದ ನೂತನ ಹೆಡ್​ ಕೋಚ್ ಆಗಿ ಗಂಭೀರ್ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಬಿಸಿಸಿಐ ಹೊರಡಿಸಲಿರುವ ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ. ಇದೆಲ್ಲದರ ಮಧ್ಯೆ ಗೌತಮ್ ಗಂಭೀರ್​ ಭಾರತಕ್ಕೆ ಕೋಚ್ ಆದರೆ ಈ ಐವರು ಸ್ಟಾರ್​ ಆಟಗಾರರನ್ನು ಆಯಾ ಫಾರ್ಮೆಟ್​ಗಳಲ್ಲಿ ಆಡಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಹಾಸನ SP ಕಚೇರಿ ಆವರಣದಲ್ಲೇ ಪತ್ನಿಗೆ ಚೂರಿ ಚುಚ್ಚಿ ಕೊಂದ ಕಾನ್ಸ್​​ಸ್ಟೇಬಲ್​; ಇಬ್ಬರ ನಡುವೆ ಅದೇನಾಗಿತ್ತು?

    • ರೋಹಿತ್ ಶರ್ಮಾ – ಟಿ20 ಮತ್ತು ಟೆಸ್ಟ್
    • ವಿರಾಟ್ ಕೊಹ್ಲಿ – ಟಿ20
    • ರವೀಂದ್ರ ಜಡೇಜಾ – ವೈಟ್ ಬಾಲ್ ಫಾರ್ಮೆಟ್​
    • ಮೊಹಮ್ಮದ್ ಶಮಿ – ವೈಟ್ ಬಾಲ್ ಫಾರ್ಮೆಟ್​
    • ಮೊಹಮ್ಮದ್ ಸಿರಾಜ್ – ವೈಟ್ ಬಾಲ್ ಫಾರ್ಮೆಟ್​

    ಅಂದು ಅವಮಾನ ಇಂದು ಸನ್ಮಾನ: ಇದಕ್ಕೆ ಹೇಳೋದು… ಹಾರ್ದಿಕ್​ಗೆ ಫ್ಯಾನ್ಸ್ ಕೊಟ್ಟ ಸಂದೇಶವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts