More

    ಐಸಿಸಿ ಟಿ20 ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ..! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

    ನವದೆಹಲಿ: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, 17 ವರ್ಷಗಳ ಬಳಿಕ ಐಸಿಸಿ ಟಿ20 ವಿಶ್ವಕಪ್​ ಗೆದ್ದ ಭಾರತ, ಚಾಂಪಿಯನ್​ ಆಗಿ ಹೊರಹೊಮ್ಮಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದ ಟೀಮ್ ಇಂಡಿಯಾ 7 ರನ್​ಗಳ ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿತು. ದೇಶವ್ಯಾಪಿ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಪಡೆಯನ್ನು ಅಭಿನಂದಿಸುತ್ತಿದ್ದು, ಮೆಚ್ಚುಗೆ, ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದೆ. ಇದೆಲ್ಲದರ ಮಧ್ಯೆ ವಿರಾಟ್ ಕೊಹ್ಲಿ ಫ್ಯಾನ್ಸ್​ಗೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ.

    ಇದನ್ನೂ ಓದಿ: ರೈತಪರ ಯೋಜನೆ ಸ್ಥಗಿತಕ್ಕೆ ಬಿಜೆಪಿ ಆಕ್ರೋಶ: ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ

    ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ತನ್ನದೇ ‘ಟೀಮ್ ಆಫ್ ದಿ ಟೂರ್ನೆಮೆಂಟ್’ ​ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 76 ರನ್​ಗಳ ಕೊಡುಗೆ ನೀಡಿದ ವಿರಾಟ್​ಗೆ ತನ್ನ ಪಟ್ಟಿಯಲ್ಲಿ ಸ್ಥಾನ ಕೊಡದ ಐಸಿಸಿ ವಿರುದ್ಧ ಇದೀಗ ಅಭಿಮಾನಿಗಳು ತೀವ್ರ ಬೇಸರ ಹೊರಹಾಕಿದ್ದಾರೆ.

    ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಿಂದಲೂ ರೋಹಿತ್ ಶರ್ಮ ಜತೆ ಓಪನಿಂಗ್ ಬಂದ ವಿರಾಟ್ ಕೊಹ್ಲಿ, ಸತತವಾಗಿ ಕಳಪೆ ಪ್ರದರ್ಶನ ತೋರಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಮಾತ್ರ ಅದ್ಭುತ ಬ್ಯಾಟಿಂಗ್ ಮಾಡಿದ ಕೊಹ್ಲಿ, 59 ಎಸೆತಗಳಲ್ಲಿ 76 ರನ್​ ಕಲೆಹಾಕಿದರು. ದಕ್ಷಿಣ ಆಫ್ರಿಕಾದ ವಿರುದ್ಧ ಬ್ಯಾಟಿಂಗ್ ಮಾಡುವಾಗ ಮೊದಲ ಐದು ಓವರ್ ಅಂತ್ಯಕ್ಕೆ ರೋಹಿತ್, ಪಂತ್ ಮತ್ತು ಸೂರ್ಯಕುಮಾರ್ ಯಾದವ್​ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಆಸರೆಯಾಗಿದ್ದು ‘ರನ್ ಮಷಿನ್’​. ಆದ್ರೆ, ಐಸಿಸಿ ಘೋಷಿಸಿದ ತಂಡದಲ್ಲಿ ಆರು ಟೀಮ್ ಇಂಡಿಯಾ ಆಟಗಾರರ ಪೈಕಿ ವಿರಾಟ್​ ಹೆಸರು ಇಲ್ಲವೇ ಇಲ್ಲ ಎಂಬುದೇ ಆಶ್ಚರ್ಯ.

    ಇದನ್ನೂ ಓದಿ: VIDEO | ಮನೆಗೆ ನುಗ್ಗಿ ಸೀರಿಯಲ್ ನೋಡುತ್ತಾ ಕುಳಿತ ಬುಸ್​​ ಬುಸ್​ ನಾಗಪ್ಪ..

    ಟೂರ್ನಿಯಲ್ಲಿ ಒಟ್ಟಾರೆ ಪ್ರದರ್ಶನ ತೋರಿದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್​ಗೆ ಸ್ಥಾನ ಸಿಕ್ಕಿದ್ದು, ವಿರಾಟ್​ ಕೊಹ್ಲಿ ಹೆಸರು ಮಾತ್ರ ಇಲ್ಲ. ಇದು ರನ್ ಮಷಿನ್ ಅಭಿಮಾನಿಗಳಿಗೆ ಕೊಂಚ ಬೇಸರ ತಂದಿದ್ದೇ ಆದರೂ ಕಡೆಯ ಪಂದ್ಯದಲ್ಲಿ ಕೊಟ್ಟ ಪ್ರದರ್ಶನ ಅವಿಸ್ಮರಣಿಯ ಎನ್ನುವಂತೆ ಮಾಡಿದೆ.

    ಐಸಿಸಿ ಪ್ರಕಟಿಸಿದ ‘ಟೀಮ್ ಆಫ್​ ಟೂರ್ನಮೆಂಟ್’: 
    ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್​ ಸಿಂಗ್ (ಟೀಮ್ ಇಂಡಿಯಾ ಆಟಗಾರರು). ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಫಜಲ್ಹಕ್ ಫಾರೂಕಿ (ಅಫ್ಘಾನಿಸ್ತಾನ). ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ) ಮತ್ತು ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್) ಹಾಗೂ 12ನೇ ಆಟಗಾರ ಆನ್ರಿಚ್ ನಾರ್ಟ್ಜೆ.

    ಅಂದು ಅವಮಾನ ಇಂದು ಸನ್ಮಾನ: ಇದಕ್ಕೆ ಹೇಳೋದು… ಹಾರ್ದಿಕ್​ಗೆ ಫ್ಯಾನ್ಸ್ ಕೊಟ್ಟ ಸಂದೇಶವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts