More

    ನಾನು ಪತಿಯೊಂದಿಗಿರಲ್ಲ, ಬಾಯ್​ಫ್ರೆಂಡ್ ಜತೆ ಬದುಕಲು ಗಂಡನೇ ದುಡ್ಡು ಕೊಡ್ಬೇಕೆಂದು ಬೇಡಿಕೆ ಇಟ್ಟ ಪತ್ನಿ

    ಉತ್ತರಪ್ರದೇಶ: ಕೌಟುಂಬಿಕ ಸಲಹಾ ಕೇಂದ್ರಕ್ಕೆ ಪತಿಯೊಂದಿಗೆ ಬಂದ ಮಹಿಳೆ ಗಂಡನ ಜತೆ ಇರಲು ಸಾಧ್ಯವಿಲ್ಲ, ಪ್ರಿಯಕರನ ಜತೆ ಇರುತ್ತೇನೆ. ಆದರೆ ಖರ್ಚನ್ನು ಗಂಡನೇ ಭರಿಸಲಿ ಎಂದು ಮಹಿಳೆ ಹೇಳಿದ್ದಾಳೆ. ಇದು ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ.. ನಿಜವಾಗಿ ನಡೆದದ್ದು, ಆಗ್ರಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಪತಿಯೊಂದಿಗೆ ಬಾಳಲು ಇಷ್ಟವಿಲ್ಲ, ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಾಯ್ ಫ್ರೆಂಡ್ ಜೊತೆ ಇರುತ್ತೇನೆ. ಆದರೆ ಅವರ ಎಲ್ಲಾ ಖರ್ಚನ್ನು ಪತಿಯೇ ಭರಿಸಬೇಕು. ನನ್ನ ಗೆಳೆಯನಿಗೂ ಹೆಂಡತಿ ಮಕ್ಕಳಿದ್ದಾರೆ. ಅವರ ಖರ್ಚೇ ಅವರಿಗೆ ಸಾಕಾಗುತ್ತದೆ. ಹಾಗಾಗಿ ನನ್ನ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ತಿಂಗಳ ಖರ್ಚನ್ನು ನನ್ನ ಪತಿಯೇ ಭರಿಸಬೇಕು ಎಂದು ಮಹಿಳೆ ಆಗ್ರಹಿಸಿದ್ದಾಳೆ.

    ಆದರೆ ಈ ವಿಚಿತ್ರ ಬೇಡಿಕೆಗೆ ಆಕೆಯ ಪತಿ ಒಪ್ಪಿರಲಿಲ್ಲ. ಆತನ ಆಕೆ ತನ್ನ ಗೆಳೆಯನೊಂದಿಗೆ ಇರಲು ಬಯಸಿದಾಗ, ಅವಳ ಖರ್ಚು ಏಕೆ ಭರಿಸಬೇಕೆಂದು ಕೇಳಿದನು. ಈ ವಿಚಾರವಾಗಿ ಪತಿ-ಪತ್ನಿ ಇಬ್ಬರೂ ಸ್ಥಳೀಯ ಕೌಟುಂಬಿಕ ಸಲಹಾ ಕೇಂದ್ರಕ್ಕೆ ತೆರಳಿದ್ದರು. ಅಲ್ಲಿಯೂ ಮಹಿಳೆಯ ವಿಚಿತ್ರ ಆಸೆ ಕೇಳಿದ ಸಿಬ್ಬಂದಿ.. ಬೆಚ್ಚಿಬಿದ್ದಿದ್ದಾರೆ.

    ಇದೇ ವೇಳೆ ಅವರಿಗೆ ಕೌನ್ಸೆಲಿಂಗ್ ನಡೆಸುತ್ತಿರುವ ಮನಶ್ಶಾಸ್ತ್ರಜ್ಞ ಅಮಿತ್ ಅವರು ಪ್ರಮುಖ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮದುವೆಯಾಗಿ 10 ವರ್ಷಗಳಾಗಿದ್ದು, ಆದರೆ ಆಕೆ ಈಗ ತನ್ನ ಗೆಳೆಯನೊಂದಿಗೆ ವಾಸಿಸಲು ಬಯಸಿದ್ದಾಳೆ. ಆದರೆ ಪತಿಯಿಂದ ಮಾಸಿಕ ಖರ್ಚು ಕೇಳುತ್ತಿದ್ದಳು ಎನ್ನಲಾಗಿದೆ. ಆದರೆ ಪತಿ ಅದಕ್ಕೆ ಒಪ್ಪಲಿಲ್ಲ.. ಇಬ್ಬರ ನಡುವೆ ಯಾವುದೇ ಒಪ್ಪಂದ ಆಗಿಲ್ಲ.. ಮತ್ತೊಮ್ಮೆ ಇಬ್ಬರಿಗೂ ಕೌನ್ಸೆಲಿಂಗ್ ಮಾಡಿ.. ಮಹಿಳೆಯರ ಮನಸ್ಸು ಬದಲಾಯಿಸಲು ಪ್ರಯತ್ನಿಸುವುದಾಗಿ ಅಮಿತ್ ಹೇಳಿದ್ದಾರೆ. ಈ ವಿಚಿತ್ರ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. 

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts