More

    ನಿವೃತ್ತಿ ನಂತರದ ಅನುಭವ ಸಮಾಜಕ್ಕೆ ನೀಡಿ

    ಹುಮನಾಬಾದ್: ಉಪಾನ್ಯಾಸಕರಾಗಿ, ಪ್ರಾಚಾರ್ಯರಾಗಿ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತರಾದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಆರ್ ಹುಗ್ಗಿ ಅವರ ಸೇವೆ ಮಾದರಿಯಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

    ಪಟ್ಟಣದಲ್ಲಿ ಶಿವ ಬಸವ ನಗರ ಗೆಳೆಯರ ಬಳಗ, ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಹಾಗೂ ಹುಗ್ಗಿ ಪರಿವಾರದ ಸಹಯೋಗದಡಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾದರೂ ಸಹ ತಮ್ಮ ಅನುಭವವನ್ನು ಸದಾ ಸಮಾಜಕ್ಕೆ ನೀಡಿ, ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.

    ಹುಗ್ಗಿ ಅವರ ಸೇವಾ ಅವಧಿಯಲ್ಲಿ ಕಾಲೇಜಿನ ಮೂಲ ಸೌಕರ್ಯಗಳ ಕೂರತೆಗಳ ಬೇಡಿಕೆಗಳಿಗೆ ಸ್ಪಂದಿಸಿ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಲಾಗಿದೆ. ಹುಗ್ಗಿ ಅವರು ಸೇವಾ ನಿವೃತ್ತಿ ಹೂಂದಿದ್ದು ದೇವರು ಆಯುರಾರೋಗ್ಯ ಒದಗಿಸಲಿ ಎಂದು ಪ್ರಾರ್ಥಿಸಿ, ದಂಪತಿಗಳಿಗೆ ಅಭಿನಂದಿಸಿದರು.
    ಸೇವಾ ನಿವೃತ್ತ ಪ್ರಾಚಾರ್ಯ ಪಿ.ಆರ್.ಹುಗ್ಗಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶ್ರೀ ರೇಣುಕ ಗಂಗಾಧರ ಶಿವಾಚಾರ್ಯರು ಮಾತನಾಡಿ, ಸೇವಾ ಸಂತೃಪ್ತಿ ನೆಮ್ಮದಿಯ ಜೀವನಕ್ಕೆ ಕಾರಣವಾಗಲಿದೆ. ತಮ್ಮ ಸೇವೆಯ ಮೂಲಕ ಅದನ್ನು ಹುಗ್ಗಿ ಅವರು ಕಂಡುಕೊಂಡಿದ್ದಾರೆ ಎಂದರು.

    ಬೀದರ್‌ನ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯೆ ಡಾ.ಗಂಗಾಂಬಿಕ ಅಕ್ಕ, ಶಹಾಪುರಿನ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಅಜೇಂದ್ರ ಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗಶೆಟ್ಟಿ ಡುಮಣಿ, ಬಿಇಒ ವೆಂಕಟೇಶ ಗೂಡಾಳ, ಗೆಳೆಯರ ಬಳಗದ ಅಧ್ಯಕ್ಷ ಡಿ.ಎಂ.ನಂದಿ ಮಾತನಾಡಿದರು.

    ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ, ಜಿಲ್ಲಾ ಉಪಾನ್ಯಾಸಕ ಸಂಘದ ಉಪಾಧ್ಯಕ್ಷ ಚಂದ್ರಕಾಂತ ಗಂಗಶೆಟ್ಟಿ, ಪ್ರಮುಖರಾದ ಸುಪ್ರಿತ್ ಬೇಲೂರ, ದಿವಾಕರ ಬೇಲೂರ, ಕಮಲಾ ಸೊಪ್ಪಿನ, ಡಾ.ಶೇಷಾಂಕ ಹುಗ್ಗಿ, ಶ್ರಾವಣಿ ಇತರರಿದ್ದರು. ಕಾಶೀನಾಥ ಕೊಡ್ಲಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಂಗಮಕರ ನಿರೂಪಣೆ ಮಾಡಿದರು. ಶಿವಕುಮಾರ ಕಂಪ್ಲಿ ವಂದಿಸಿದರು.

    ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಈ ವೃತ್ತಿಯಲ್ಲಿ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿರುವ ಹುಗ್ಗಿ ಅವರು ಸಂತೃಪ್ತ ಕುಟುಂಬ ಹೊಂದಿದ್ದಾರೆ. ಸೇವಾ ನಿವೃತ್ತಿ ನಂತರವೂ ಸಮಾಜಕ್ಕೆ ಸಮಯ ನೀಡಿ ಉತ್ತಮ ಬದುಕು ಸಾಗಿಸಲಿ.
    | ಪೂಜೆ ಡಾ.ಗಂಗಾಂಬಿಕ ಅಕ್ಕ ಅಧ್ಯಕ್ಷೆ ಬಸವಸೇವಾ ಪ್ರತಿಷ್ಠಾನ ಬೀದರ್

    ಸರ್ಕಾರಿ ಸೇವೆ ದೊರೆಯುವುದು ನಮ್ಮ ಪುಣ್ಯ. ಇಡೀ ಸೇವಾ ಅವಧಿಯಲ್ಲಿ ಸರ್ಕಾರದ ಸೇವೆ ಪ್ರಮಾಣಿಕತೆಯಿಂದ ಸಲ್ಲಿಸಿರುವ ಸಂತೃಪ್ತಿಭಾವ ಹೊಂದಿದ್ದೇನೆ. ಎಲ್ಲರ ಆಶೀರ್ವಾದಿಂದ ಸುಂದರ ಬದುಕು ಸಾಗಿಸುವಂತಾಗಿದೆ.
    | ಪಿ.ಆರ್.ಹುಗ್ಗಿ ಸೇವಾ ನಿವೃತ್ತ ಪ್ರಾಚಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts