More

    ಅಕ್ರಮ ಲೇಔಟ್​ಗೆ ಕಡಿವಾಣ ಹಾಕಲು ಹುಡಾ ನಿರ್ಧಾರ

    ಹುಬ್ಬಳ್ಳಿ : ಅವಳಿ ನಗರದಲ್ಲಿ ಅಕ್ರಮ ಲೇಔಟ್​ಗೆ ಕಡಿವಾಣ ಹಾಕಲು ಸೋಮವಾರ ನಡೆದ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

    ಅಕ್ರಮ ಲೇಔಟ್ ತಲೆ ಎತ್ತದಂತೆ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಡೆವಲಪರ್​ಗಳಿಗೆ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಆದರೂ, ಅಕ್ರಮ ಬಡಾವಣೆ ನಿರ್ವಿುಸಿದಲ್ಲಿ, ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.

    ನೂತನ ಬಡಾವಣೆಗಳಲ್ಲಿ ನಿರ್ವಣಗೊಳ್ಳುವ ಮೂಲ ಸೌಲಭ್ಯಗಳು ಗುಣಮಟ್ಟದ್ದು ಆಗಿರಬೇಕು. ಬಡಾವಣೆಗಳಿಗೆ ಮುಕ್ತಾಯ ಪ್ರಮಾಣ ಪತ್ರ ಕೊಡುವ ಮೊದಲು ಮಹಾನಗರ ಪಾಲಿಕೆ ಹಾಗೂ ಹುಡಾ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು ಎಂಬ ಸಲಹೆಗಳು ಕೇಳಿಬಂದವು.

    ಡೆವಲಪರ್​ಗಳಿಗೆ ಅಗತ್ಯ ಪರವಾನಿಗೆ ಹಾಗೂ ಇನ್ನಿತರ ದಾಖಲೆಗಳನ್ನು ನೀಡುವುದಕ್ಕಾಗಿ ಸಿಂಗಲ್ ವಿಂಡೊ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.

    ಹುಬ್ಬಳ್ಳಿ-ಧಾರವಾಡ ಹೊರ ವಲಯದಲ್ಲಿ ಈಗಾಗಲೇ ಅರ್ಧ ವರ್ತಳ ರಸ್ತೆ ನಿರ್ವಣಗೊಂಡಿದ್ದು, ಇನ್ನುಳಿದ ಅರ್ಧ ವರ್ತಳ ರಸ್ತೆ ನಿರ್ವಣದ ಬಗ್ಗೆ ರ್ಚಚಿಸಲಾಯಿತು.

    ಹುಡಾ ಅಧ್ಯಕ್ಷ ಶಾಕೀರ ಸನದಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹುಡಾ ಆಯುಕ್ತ ಸಂತೋಷ ಬಿರಾದಾರ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts