More

    ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?

    ನವದೆಹಲಿ: ಈಗ ಎಲ್ಲೆಂದರಲ್ಲಿ ಹೃದಯಾಘಾತದ ಸುದ್ದಿ ಕೇಳಿ ಬರುತ್ತಿದೆ. ಚಿಕ್ಕವರು-ದೊಡ್ಡವರು, ಆರೋಗ್ಯವಂತರು ಎನ್ನುವ ಭೇದವಿಲ್ಲದೆ ಜನರು ಕುಸಿದು ಬಿದ್ದು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದಿನ್ನೂ ನಿಗೂಢವಾಗಿದೆ. ಈ ಮಧ್ಯೆ ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸಿಕೊಳ್ಳುವ ಉಪಾಯವೊಂದು ಬಹಿರಂಗಗೊಂಡಿದೆ.

    ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸಿಕೊಳ್ಳುವ ಜತೆಗೆ ಸ್ಟೆಂಟ್​ ಅಳವಡಿಸಿಕೊಂಡಿರುವ ಹೃದ್ರೋಗಿಗಳ ಸಂಕೀರ್ಣತೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಉಪಾಯ ಪ್ರಯೋಜನಕಾರಿ ಎಂಬುದು ಕಂಡುಬಂದಿದೆ. ಲಂಡನ್​ನ ಕ್ವೀನ್ ಮೇರಿ ಯೂನಿವರ್ಸಿಟಿಯವರು ಈ ಉಪಾಯವನ್ನು ಕಂಡುಹಿಡಿದಿದ್ದಾರೆ.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಅಂದಹಾಗೆ ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸುವ ಈ ಉಪಾಯ ಬೇರೇನೂ ಅಲ್ಲ, ಬೀಟ್​ರೂಟ್ ಜ್ಯೂಸ್. ನಿಜ.. ಬೀಟ್​​ರೂಟ್​ ಜ್ಯೂಸ್​ ಮೂಲಕ ಹೃದಯಾಘಾತದ ಸಾಧ್ಯತೆಯನ್ನು ಬಹಳಷ್ಟು ತಗ್ಗಿಸಬಹುದಂತೆ.

    ಪ್ರತಿದಿನ ಬರೀ 70 ಎಂ.ಎಲ್​.ನಷ್ಟು ಬೀಟ್​ರೂಟ್​ ಜ್ಯೂಸನ್ನು ಕುಡಿದರೆ ಅಂಥವರಲ್ಲಿ ಹೃದಯಾಘಾತದ ಸಾಧ್ಯತೆ ಕಡಿಮೆ ಎಂದರೂ ಅರ್ಧಕ್ಕರ್ಧದಷ್ಟು ತಗ್ಗುತ್ತದೆ. ಮಾತ್ರವಲ್ಲ, ಸ್ಟೆಂಟ್​ ಹಾಕಿಸಿಕೊಂಡ ಹೃದ್ರೋಗಿಗಳು ಕನಿಷ್ಠ ಆರು ತಿಂಗಳ ವರೆಗೆ ಬೀಟ್​ರೂಟ್​ ಜ್ಯೂಸ್​ ಕುಡಿದರೆ ಸ್ಟೆಂಟ್​ನಿಂದ ಉಂಟಾಗಬಹುದಾದ ಸಂಕೀರ್ಣತೆಗಳು ಕೂಡ ದೂರವಾಗುತ್ತವೆ ಎಂಬುದಾಗಿ ಕ್ವೀನ್​ ಮೇರಿ ಯೂನಿವರ್ಸಿಟಿ ತಿಳಿಸಿದೆ.

    ಇದನ್ನೂ ಓದಿ: ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

    ಬೀಟ್​ರೂಟ್​ ಜ್ಯೂಸ್​ನಲ್ಲಿರುವ ನೈಟ್ರೇಟ್ಸ್​ ರಕ್ತನಾಳವನ್ನು ವಿಕಸಿತಗೊಳಿಸುವ ಜತೆಗೆ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಈ ಮೂಲಕ ರಕ್ತದೊತ್ತಡ ಹಾಗೂ ಆ ಸಂಬಂಧಿತ ಹಾನಿಗಳನ್ನು ತಡೆದು ಹೃದಯಾಘಾತದ ಸಾಧ್ಯತೆಗಳನ್ನು ದೂರಗೊಳಿಸುತ್ತದೆ ಎಂದು ಯೂನಿವರ್ಸಿಟಿ ತಿಳಿಸಿದೆ.

    ಹೃದಯದ ಆರೋಗ್ಯದ ಸಲುವಾಗಿ ಈ ಕೆಳಗಿನವುಗಳನ್ನು ಪಾಲಿಸುವುದು ಸೂಕ್ತ

    • ಧೂಮಪಾನ ತ್ಯಜಿಸುವುದು
    • ಮದ್ಯಪಾನವನ್ನು ತ್ಯಜಿಸುವುದು ಅಥವಾ ತೀರಾ ಕಡಿಮೆ ಪ್ರಮಾಣದಲ್ಲಿ ಬಳಸುವುದು
    • ಆರೋಗ್ಯಕರ ದೇಹತೂಕ ಕಾಪಾಡಿಕೊಳ್ಳುವುದು
    • ನಿಯಮಿತವಾಗಿ ವ್ಯಾಯಾಮ ಮಾಡುವುದು
    • ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಸೇವನೆ ಮಾಡುವುದು
    • ರಕ್ತದೊತ್ತಡ ಮತ್ತು ಕೊಲೆಸ್ಟೆರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು
    • ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳುವುದು.

     

    ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts