More

    ವೀರಶೈವ ಮಹಾಸಭಾ ಚುನಾವಣೆ ಜು.21ಕ್ಕೆ

    ಹೊಸಪೇಟೆ: ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ ಜು.21 ರಂದು ನಡೆಯಲಿದೆ ಎಂದು ತಾಲೂಕು ಘಟಕದ ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎಂ.ಚAದ್ರಶೇಖರ ಶಾಸ್ತ್ರಿ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾಸಭಾದ ಚುನಾವಣೆ 5 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹಿಂದೆ 2019ರಲ್ಲಿ ಚುನಾವಣೆ ನಡೆದಿತ್ತು. ಅದ್ಯಕ್ಷ ಸ್ಥಾನ ಸೇರಿ 20 ಜನ ಕಾರ್ಯಕಾರಣಿ ಸದಸ್ಯರು. ಇದರಲ್ಲಿ ಚುನಾವಣೆ ನಡೆಯಲಿದೆ 13 ಕಾರ್ಯಕಾರಣಿ, 7 ಜನ ಮಹಿಳೆ ಸದಸ್ಯರಾಗುವ ಅವಕಾಶಯಿದೆ. ಒಟ್ಟು 21 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕಂಪ್ಲಿ ಪ್ರತ್ಯೇಕ ತಾಲೂಕು ಹಾಗೂ ಬಳ್ಳಾರಿಗೆ ಸೇರಿರುವುದರಿಂದ ಹೊಸಪೇಟೆ ತಾಲೂಕಿನಿಂದ ಕಂಪ್ಲಿ ಪ್ರತ್ಯೇಕವಾಗಿ ಅಲ್ಲಿ ಚುನಾವಣೆ ನಡೆಯಲಿದೆ.

    ನಗರದ ಸ್ವಾತಂತ್ರ ಪ.ಪೂ.ಕಾಲೇಜಿನಲ್ಲಿ ಈ ಬಾರಿ ಜು.07ರಂದು ಚುನಾವಣೆ ನಡೆಯಲಿದೆ. ಜೂ.27 ರಿಂದ ಜು.04ರಂದು ನಾಮಪತ್ರ ಸಲ್ಲಿಸಬಹುದು. ಜು.05ರಂದು ನಾಮಪತ್ರ ಪರಿಶೀಲನೆ. ಜು.08ರಂದು ಹಿಂಪಡೆಯುವುದು. ಜು.21ರ ಬೆಳಗ್ಗೆ 8ರಿಂದ ಸಂಜೆ 05ರ ವರೆಗೆ ಚುನಾವಣೆ ನಡೆಯಲಿದೆ. ಸ್ವಾತಂತ್ರ ಪ.ಪೂ.ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಹನುಮಂತ ಗೌಡ, ಯಲಿಗಾರ ಒಪ್ಪತೆಪ್ಪ ಅವರು ಸಹಾಯಕ ಚುನಾವಣಾಧಿಕಾರಿ ನೇಮಕರಾಗಿದ್ದಾರೆ. ತಾಲೂಕು ಘಟಕದಲ್ಲಿ ಅಂದಾಜು 900 ಮತದಾರರಿದ್ದಾರೆ. ಚುನಾವಣೆ ವೇಳೆ ಅದ್ಯಕ್ಷ ಸ್ಥಾನಕ್ಕೆ ಬಿಳಿ ಹಾಳಿ, ಮಹಿಳಾ ಸದಸ್ಯರ ಸ್ಥಾನಕ್ಕೆ ಪಿಂಕ್, ಪುರುಷ್ಯರಿಗೆ ಹಳದಿ ಬಣ್ಣದ ಬ್ಯಾಲೆಟ್ ಪೇಪರ್ ನಲ್ಲಿ ಮತದಾನಕ್ಕೆ ಅವಕಾಶವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts