More

    ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ

    ಹೊಸಪೇಟೆ: ವಿಜಯನಗರ, ಬಳ್ಳಾರಿ, ಕೆuಟಿಜeಜಿiಟಿeಜಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, 11854 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಸೋಮವಾರ ಜಲಾಶಯಕ್ಕೆ ಹರಿದು ಬಂದಿದೆ.

    ಸದ್ಯ ಜಲಾಶಯದಲ್ಲಿ 6.782 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 3.092 ಟಿಎಂಸಿ ನೀರು ಸಂಗ್ರಹ ಇತ್ತು. ಕಳೆದ ಬಾರಿ ಹೊಲಿಸಿದರೆ 3.69 ಟಿಎಂಸಿ ನೀರು ಹೆಚ್ಚಿದೆ. ಮಲೆನಾಡು ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಮತ್ತು ಶೃಂಗೇರಿ ಭಾಗದಲ್ಲಿ ವ್ಯಾಪಕವಾಗಿ ಮಳೆಯಾದರೆ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವಿನ ಪ್ರಮಾಣ ವ್ಯಾಪಕವಾಗಿ ಏರಿಕೆಯಾಗಲಿದೆ. ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಇಷ್ಟು ಒಳ ಹರಿವು ಹೆಚ್ವಳವಾಗುವ ಸಾದ್ಯತೆಯಿದೆ.

    ಕಳೆದ ಜೂನ್ 28 ರಂದು ಜಲಾಶಯದಲ್ಲಿ ಕೇವಲ 879 ಕ್ಯೂಸೆಕ್, ಜೂನ್ 29ರಂದು 1819 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಭಾನುವಾರ 6 ಸಾವಿರ ಕ್ಯೂಸೆಕ್ ಅಧಿಕ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಸೋಮವಾರ ಒಳಹರಿವು ದ್ವಿಗುಣಗೊಂಡಿದ್ದು, 11 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂತಸ ತಂದಿದೆ.

    See also  ಶಿಕ್ಷಕರ ವರ್ಗಾವಣೆಯನ್ನು ತನಿಖೆಗೊಳಪಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts