More

    ಪತ್ರಕರ್ತರು ಆಡಳಿತ ವ್ಯವಸ್ಥೆಯ ಕಣ್ಣುಗಳು

    ಹೊಸಪೇಟೆ: ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರಿಗೆ ಹೊಣೆಗಾರಿಕೆಯೂ ದೊಡ್ಡದಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿAದ ನಗರದ ಖಾಸಗಿ ಹೊಟೇಲ್ ನಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು. ಪತ್ರಕರ್ತರು ತಮ್ಮ ಕುಟುಂಬದ ಜತೆ ಸೇರುವುದೇ ಅಪರೂಪ. ಬರಿ ಸಮಾಜದಲ್ಲಿನ ಸುದ್ದಿ ಮಾಡುವ ಪತ್ರಕರ್ತರು ತಮ್ಮ ಮನೆಯಲ್ಲಿನ ಸಂಕಷ್ಟ ಅರಿಬೇಕು. ವೃತ್ತಿಯ ಕಾಳಜಿಯ ಜತೆ ಕುಟುಂಬದ ಜವಾಬ್ದಾರಿ ಇರಲಿ ಎಂದರು.

    ವೈಯಕ್ತಿಕ ಜೀವನದಲ್ಲಿ ಉತ್ತಮವಾವನು, ವೃತ್ತಿ ಜೀವನ ಕೂಡ ನಿರ್ವಹಣೆ ಮಾಡುತ್ತಾನೆ. ಪತ್ರಕರ್ತರು ಆಡಳಿತ ವ್ಯವಸ್ಥೆಗೆ ಕಣ್ಣುಗಳಿದ್ದಂತೆ. ಬರವಣಿಗೆಯಲ್ಲಿ ಮಾನವೀಯ ಭಾವನೆಗಳನ್ನು ಮೂಡಿಸಿದಾಗ ಜನ ಮೆಚ್ಚುವಂತ ಕೆಲಸ ಆಗಲಿದೆ. ಆಡಳಿತದಲ್ಲಿ ವರದಿಗಳನ್ನು ಗೌರವಯುತವಾಗಿ ಸ್ಪಂದಿಸಬೇಕು. ಸಮಾಜದ ಅಭಿವೃದ್ಧಿಗೆ ಪತ್ರಕರ್ತರು ಅವಶ್ಯ ಎಂದರು.

    ಸಿಇಒ ಸದಾಶಿವ ಬಿ.ಪ್ರಭು ಮಾತನಾಡಿ, ಸದೃಢವಾದ ಪ್ರಜಾಪ್ರಭುತ್ವ ಅನಿಸಿಕೊಳ್ಳಬೇಕು ಎಂದರೆ ಮಾದ್ಯಮಗಳು ಕಾರ್ಯ ಅಗತ್ಯ. ಪತ್ರಿಕೆಗಳಲ್ಲಿ ಬರುವ ಎಲ್ಲಾ ವರದಿಗಳನ್ನು ಸಮಾನವಾಗಿ ಸ್ವೀಕರಿಸಿ ತಪ್ಪುಗಳನ್ನು ಅರಿಯಬೇಕು ಎಂದರು.

    ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಜಾಗತೀಕ ಯುಗದಲ್ಲಿ ಕ್ಷಣಾರ್ಧದಲ್ಲಿ ಸುದ್ದಿಗಳು ಬರುತ್ತವೆ. ಅದರಂತೆ ನ್ಯಾಯಾಲಯದ ತೀರ್ಪುಗಳು ಸರ್ಕಾರದ ನಿಯಮ ಪಾಲಿಸಬೇಕು. ನೈಜ ವರದಿಗಳಿಂದ ಸಮಾಜದ ಅಂಕುಡೊAಕುಗಳನ್ನು ತಿದ್ದಬೇಕಿದೆ ಎಂದರು.

    ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಂಸದ ಈ.ತುಕಾರಾಮ್ ಅವರ ಪತ್ನಿ ಅನ್ನಪೂರ್ಣ, ಸಂಘದ ಅಧ್ಯಕ್ಷ ರಾಜ್ಯ ಸಮಿತಿ ಸದಸ್ಯ ವೆಂಕೋಬ ಪೂಜಾರಿ, ಸತ್ಯನಾರಾಯಣ, ಕಾರ್ಯದರ್ಶಿ ಲಕ್ಷ್ಮಣ ಇತರರಿದ್ದರು.

    ಮಹಿಳೆರ ಮರ್ಯಾದೆ ಕಾಪಾಡಿ

    ಹಣ್ಣು ಮಕ್ಕಳಿಗೆ ಗೌರವವಾಗಿ ನೋಡುವ ಈ ದೇಶದಲ್ಲಿ ಮಹಿಳೆಯರಿಗೆ ಗೌರವ ಸಿಗಲಿ. ಸಮಾಜದ ವಿರುದ್ಧ ಇರುವ ವರದಿಗಳನ್ನು ವೈಭವಿಕರಿಸಿ ತೋರಿಸದೇ, ಸಾಮಾನ್ಯವಾಗಿ ಪ್ರಕಟಿಸಬೇಕು. ಮಹಿಳೆರಯ ಗೌಪ್ಯತೆ ಕಾಪಡಬೇಕು. ಕೆಟ್ಟ ಸುದ್ದಿಗಳು ಪ್ರಚಾರಕ್ಕಾಗಿ ಇತರರಿಗೆ ಪ್ರೇರಣೆ ಆಗದಿರಲಿ. ಹಗರಣಗಳು ಬಯಲಿಗೆ ಎಳೆದಾಗ ಸರ್ಕಾರಗಳು ಅಧಿಕಾರಗಳು ಕಳೆದುಕೊಂಡ ಉದಾಹರಣೆಗಳಿವೆ. ಸಮಾಜದ ತಿದ್ದುವ ಕಾರ್ಯದಲ್ಲಿ ಇದರಲ್ಲಿ ವರದಿಗಾರ ಕಾರ್ಯ ಅನನ್ಯ ಎಂದು ಸಂಸದ ಈ.ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts