More

    ತುರ್ತು ಪರಿಸ್ಥಿತಿ ಜನರು ಮರೆತಿಲ್ಲ

    ಹೊಸಪೇಟೆ: ಇಂದಿರಾ ಗಾಂಧಿ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲ ಆಶಯವನ್ನ ತಿದ್ದುಪಡಿಮಾಡುವುದರ ಮೂಲಕ ಅಪಚಾರ ಮಾಡಿದ್ದು, ಈಗ ಕಾಂಗ್ರೆಸ್ ನವರು ಸಂವಿಧಾನ ಉಳುವಿನ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ವ್ಯಂಗ್ಯವಾಡಿದರು.

    ನಗರದಲ್ಲಿ ಸೋಮವಾರ ಬಿಜೆಪಿ ಯುವ ಮೋರ್ಚಾದಿಂದ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದ ಕಾಂಗ್ರೆಸ್ ವಿರುದ್ಧ ಬಿತ್ತಿಚಿತ್ರ ಅಭಿಯಾನ ನಡೆಸಿ ಮಾತನಾಡಿದರು.

    ಕಾಂಗ್ರೆಸ್ ಪಕ್ಷ ಗೋಮುಕ ವ್ಯಾಘ್ರ ಇದ್ದಂತೆ, ತಮ್ಮದೆ 60 ವರ್ಷದ ಆಡಳಿತದಲ್ಲಿ ನೂರಾರು ಬಾರಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದರು. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಭಾರತದ ಮೇಲೆ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿ ಜನರು ಮರೆತಿಲ್ಲ. ವಿನಾ ಕಾರಣ ದೇಶಾದ್ಯಂತ ಮೋದಿ ಸರ್ಕಾರ ಸಂವಿಧಾನ ವಿರೋಧಿ, ಸಂವಿಧಾನವನ್ನು ಬದಲಿಸುತ್ತಾರೆ ಎನ್ನುವ ಅಪಪ್ರಚಾರ ಮಾಡುತ್ತಿದೆ. ಬಿಜೆಪಿ ದೇಶದ ಹಿತ ಕಾಯುತ್ತದೆ. ಕಾಂಗ್ರೆಸ್ ತಮ್ಮ ವಂಶಪಾರAಪರ್ಯವಾಗಿ ಮಾಡಿಕೊಂಡು ಬಂದಿರುವ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಒಪ್ಪಿಕೊಳ್ಳಬೇಕು. ವಿನಃ ಕಾರಣ ಬಿಜೆಪಿ ಮೇಲೆ ಆರೋಪ ಮಾಡುವ ರಾಹುಲ್ ಗಾಂಧಿಯವರು ದೇಶದ ಜನತೆಗೆ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ನಂತರ ಪೊಲೀಸರು ಯುವ ಮೋರ್ಚಾದ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸದರು.

    ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಯುವ ಮೋರ್ಚಾ ಜಿಲ್ಲ ಉಪಾಧ್ಯಕ್ಷರಾದ ಸೂರಿ ಬಂಗಾರು, ಗುಳುಗಿ ವೀರೇಶ್, ಕಾರ್ಯದರ್ಶಿ ವ್ಯಾಸರಾಜ್, ಕೋಶಾಧ್ಯಕ್ಷ ಅಯ್ಯಳ್ಳಿ ರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts