More

    ಅಮೂಲ್ಯ ಸಮಯ ಹಾಳು ಮಾಡಿಕೊಳ್ಳಬೇಡಿ: ಚುಂಚಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು

    ಮಂಡ್ಯ: ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
    ನಗರದ ಬಿಜಿಎಸ್ ಸಮುದಾಯ ಭವನದಲ್ಲಿ ವಿಶ್ವ ಮಾನವ ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮ ಹಾಕಿದರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ. ವಿದ್ಯೆ ಮರೆತು ಅಡಂಬರದಿಂದ ಕಾಲಹರಣ ಮಾಡಿದರೆ, ವಿದ್ಯಾರ್ಥಿ ಜೀವನ ಕಳೆದವರು ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
    ಸಾಧನೆ ಮಾಡುವುದಕ್ಕೆ ಸಿಕ್ಕಿರುವ ಈ ವಿದ್ಯಾರ್ಥಿ ದಿಸೆಯಲ್ಲಿನ ಸಮಯವನ್ನು ಸದ್ಭಳಕೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಯಶಸ್ಸಿನ ಗುರಿಯತ್ತ ಮುನ್ನುಗ್ಗಬೇಕು. ಓದುವ ಹವ್ಯಾಸದ ಜತೆಗೆ ದೈಹಿಕ ಆರೋಗ್ಯದ ಕಡೆಯು ಗಮನಹರಿಸುವುದು ಸೂಕ್ತ ಎಂದರು.
    ಡಿಡಿಪಿಐ ಚೆಲುವಯ್ಯ ಮಾತನಾಡಿ, ಪಿಯುಸಿಯಲ್ಲಿ ಪಡೆದ ಅಂಕಗಳು ನಿಮ್ಮ ಯಶಸ್ಸಿನ ಗುಟ್ಟು ಅಡಗಿದೆ. ಏಕೆಂದರೆ ನೀವು ಶ್ರದ್ಧೆಯಿಂದ ಓದಿ ಪಡೆದ ಅಂಕಗಳು ನಿಮ್ಮ ಮುಂದಿನ ಭವಿಷ್ಯದ ನೀಟ್ ಮತ್ತು ಸಿಇಟಿ ಸೇರಿದಂತೆ ಇತರೆ ಪ್ರವೇಶಾತಿ ಪರೀಕ್ಷೆಗೆ ಅನುಕೂಲವಾಗಲಿದೆ. ತುಂಬಾ ಚೆನ್ನಾಗಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳು ಉನ್ನತ ಮಟ್ಟದ ಅಧಿಕಾರ ಪಡೆದಿದ್ದಾರೆ. ಅದೇ ರೀತಿ ಆದಿಚುಂಚನಗಿರಿ ವಿದ್ಯಾರ್ಥಿಗಳು ಸಹ ಹೆಸರು ತಂದಿದ್ದಾರೆ ಎಂದು ಶ್ಲಾಘಿಸಿದರು.
    ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಬಿಇಒ ಮಹದೇವು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts