More

    ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿದ್ದು ಸರಿ ಇದೆ: ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್‌

    ಮುಂಬೈ: ಹಿಜಾಬ್, ಬುರ್ಕಾ ಮತ್ತು ನಖಾಬ್ ಮೇಲೆ ನಿಷೇಧ ಹೇರಲು ತೆಗೆದುಕೊಂಡ ಕಾಲೇಜು ಆಡಳಿತದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

    ಇದನ್ನೂ ಓದಿ: ‘ನನ್ನ ಮಗಳು ಅಳುತ್ತಲೇ ಇರುತ್ತಾಳೆ.. ನಿಮಗೆ ನನ್ನ ಶಾಪ ತಟ್ತದೆ’: ರೇಣು ದೇಸಾಯಿ ಹೀಗೆ ಹೇಳಿದ್ದು ಇದಕ್ಕೇ ನೋಡಿ?

    ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠವು ಡ್ರೆಸ್ ಕೋಡ್ ಅನ್ನು ವಿಧಿಸಿರುವ ಮುಂಬೈನ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಒಲವು ತೋರುವುದಿಲ್ಲ ಎಂದು ಹೇಳಿತಲ್ಲದೆ, ಅದರ ವಿರುದ್ಧ ವಿಜ್ಞಾನ ಪದವಿ ಕೋರ್ಸ್‌ನ ಎರಡನೇ ಮತ್ತು ಮೂರನೇ ವರ್ಷದ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

    ವಿದ್ಯಾರ್ಥಿಗಳು ಆವರಣದೊಳಗೆ ಹಿಜಾಬ್, ನಖಾಬ್, ಬುರ್ಕಾ, ಸ್ಟೋಲ್ಸ್, ಕ್ಯಾಪ್ ಮತ್ತು ಬ್ಯಾಡ್ಜ್‌ಗಳನ್ನು ಧರಿಸುವಂತಿಲ್ಲ ಎಂಬ ಎನ್‌.ಜಿ. ಆಚಾರ್ಯ ಮತ್ತು ಡಿ.ಕೆ.ಮರಾಠೆ ಕಾಲೇಜು ಹೊರಡಿಸಿದ ನಿರ್ದೇಶನವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಈ ತಿಂಗಳ ಆರಂಭದಲ್ಲಿ ಹೈಕೋರ್ಟ್‌ಗೆ ತೆರಳಿದ್ದರು.

    ಅರ್ಜಿದಾರರು, ಇಂತಹ ನಿರ್ದೇಶನವು ತಮ್ಮ ಧರ್ಮವನ್ನು ಆಚರಿಸುವ ಮೂಲಭೂತ ಹಕ್ಕುಗಳು, ಖಾಸಗಿತನದ ಹಕ್ಕು ಮತ್ತು ಆಯ್ಕೆಯ ಹಕ್ಕಿನ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದರು. ಅರ್ಜಿಯಲ್ಲಿ ಕಾಲೇಜಿನ ಕ್ರಮವನ್ನು “ನಿರಂಕುಶ, ಅಸಮಂಜಸ, ಕೆಟ್ಟ ಮತ್ತು ವಿಕೃತ” ಎಂದು ಬಣ್ಣಿಸಲಾಗಿತ್ತು.

    ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂಬ ತಮ್ಮ ಹೇಳಿಕೆಯನ್ನು ಬೆಂಬಲಿಸಲು ಅರ್ಜಿದಾರರ ಪರ ವಕೀಲ ಅಲ್ತಾಫ್ ಖಾನ್ ಕಳೆದ ವಾರ ಖುರಾನ್‌ನ ಕೆಲವು ಪದ್ಯಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು. ತಮ್ಮ ಧರ್ಮವನ್ನು ಆಚರಿಸುವ ಹಕ್ಕಿನ ಹೊರತಾಗಿ, ಅರ್ಜಿದಾರರು ತಮ್ಮ ಆಯ್ಕೆಯ ಹಕ್ಕು ಮತ್ತು ಖಾಸಗಿತನವನ್ನು ಅವಲಂಬಿಸಿದ್ದಾರೆ ಮತ್ತು ಕಾಲೇಜಿನ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.

    ಕಾಲೇಜು ಆವರಣದಲ್ಲಿ ಹಿಜಾಬ್, ನಖಾಬ್ ಮತ್ತು ಬುರ್ಕಾವನ್ನು ನಿಷೇಧಿಸುವ ನಿರ್ಧಾರವು ಕೇವಲ ಏಕರೂಪದ ಡ್ರೆಸ್ ಕೋಡ್‌ಗಾಗಿ ಶಿಸ್ತು ಕ್ರಮವಾಗಿದೆ. ಇದು ಮುಸ್ಲಿಂ ಸಮುದಾಯದ ವಿರುದ್ಧವಲ್ಲ. ಎಲ್ಲಾ ಧರ್ಮ ಮತ್ತು ಜಾತಿಗೆ ಸೇರಿದ ಎಲ್ಲ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಇದೆ ಎಂದು ಕಾಲೇಜು ಆಡಳಿತ ಪರ ವಾದ ಮಂಡಿಸಿದ ಹಿರಿಯ ವಕೀಲ ಅನಿಲ್ ಅಂತೂರಕರ್ ತಿಳಿಸಿದ್ದರು.

    ಹುಡುಗಿಯರು ಕಾಲೇಜು ವಿರುದ್ಧ ಮುಂಬೈ ವಿಶ್ವವಿದ್ಯಾಲಯದ ಕುಲಪತಿ, ಉಪಕುಲಪತಿ ಮತ್ತು ಧನಸಹಾಯ ಆಯೋಗಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ ದೂರು ಸಲ್ಲಿಸಿ, ತಾರತಮ್ಯವಿಲ್ಲದೆ ಎಲ್ಲಾ ನಾಗರಿಕರಿಗೆ ಶಿಕ್ಷಣವನ್ನು ನೀಡುವ ಮನೋಭಾವವನ್ನು ಕಾಪಾಡಿಕೊಳ್ಳಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು.

    ಆದರೆ, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.

    ಇಂತಹ ಆರೋಗ್ಯ ಸಮಸ್ಯೆಗಳಿದ್ದರೆ ಸೋರೇಕಾಯಿ ತಿನ್ನಬೇಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts