More

    ವಕೀಲ ಜಿ.ದೇವರಾಜೇಗೌಡಗೆ ಹೈಕೋರ್ಟ್ ಜಾಮೀನು

    ಬೆಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿರುವ ವಕೀಲ ಜಿ.ದೇವರಾಜೇಗೌಡ ಅವರಿಗೆ ಹೈಕೋರ್ಟ್ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

    ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.

    ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಘಟನೆಯ ಬಳಿಕ 90 ದಿನ ವಿಳಂಬವಾಗಿ ದೂರು ದಾಖಲಿಸಿದ್ದಾರೆ. ಜತೆಗೆ ತನಿಖೆ ವೇಳೆ ಸಂತ್ರಸ್ತೆ ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ ವಿಡಿಯೋ ಕಾಲ್‌ಗಳನ್ನು ಏಕೆ ಸ್ವೀಕರಿಸಿದ್ದರೆಂಬುದಕ್ಕೆ ಸಮರ್ಥನೆ ಕಂಡುಬರುತ್ತಿಲ್ಲ ಎಂದು ಜಾಮೀನು ನೀಡಿದೆ. ಜಾಮೀನು ಮಂಜೂರಾತಿಗೆ ವಿಧಿಸಿರುವ ಷರತ್ತುಗಳನ್ನು ಒಳಗೊಂಡ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

    ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, 2023ರ ಡಿ.29ರಂದು ಅತ್ಯಾಚಾರ ನಡೆಸಿದ್ದಾರೆಂದು ಏ.1ರಂದು ದೂರು ನೀಡಿದ್ದಾರೆ. ಅದಕ್ಕೂ ಮೊದಲು ಮಾ.29ರಂದೇ ಹನಿಟ್ರ್ಯಾಪ್ ಎಂದು ದೇವರಾಜೇಗೌಡ ದೂರು ನೀಡಿದ್ದಾರೆ. ಮಾ.29 ರಂದು ದೇವರಾಜೇಗೌಡ ವಿರುದ್ಧ ಸಂತ್ರಸ್ತೆ ಪತಿ ದೂರು ನೀಡಿದ್ದಾರೆ, ಆದರೆ, ಅದರಲ್ಲಿ ಅತ್ಯಾಚಾರದ ನಡೆದಿರುವ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

    See also  ₹5 ಕೋಟಿ ಕೊಟ್ರೆ ಪ್ರಧಾನಿ ಮೋದಿಯ ಮರ್ಡರ್​ ಮಾಡ್ತೇನೆ ಎಂದು ಪೋಸ್ಟ್​- ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts