More

    ನರೇಗಾದಡಿ ಹೈಟೆಕ್ ಶಾಲಾ ಕೊಠಡಿ ನಿರ್ಮಾಣ; 13.50 ಲಕ್ಷ ರೂ. ಅನುದಾನಕ್ಕೆ ಕೇಂದ್ರ ಸರ್ಕಾರದ ಅನುಮತಿ

    ಹಾವೇರಿ: ಸರ್ಕಾರಿ ಶಾಲೆಗಳ ಹೈಟೆಕ್ ಅಡುಗೆ ಕೊಣೆ ನಿರ್ಮಾಣಕ್ಕಾಗಿ ನರೇಗಾ ಯೋಜನೆಯಡಿ ಒಂದು ಅಡುಗೆ ಕೊಣೆ ನಿರ್ಮಾಣಕ್ಕೆ 13.50 ಲಕ್ಷ ರೂ. ಅನುದಾನದ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
    ಶಾಲೆಗಳಲ್ಲಿ ಅಡುಗೆ ಕೊಣೆ ಬಹುಮುಖ್ಯ ಪಾತ್ರವಹಿಸುತ್ತದೆ. ಉತ್ತಮ ಮತ್ತು ಸದೃಡ ಕಟ್ಟಡ ಅವಶ್ಯಕವಾಗಿದೆ. ಬಹುತೇಕ ಶಾಲೆಗಳಲ್ಲಿ ಅಡುಗೆ ಕೊಣೆಗಳು ಚಿಕ್ಕದಾಗಿವೆ ಹಾಗೂ ಕೆಲವು ಶಿಥಿಲಾವಸ್ಥೆಯಲ್ಲಿವೆ. ಮೂಲ ಸೌಕರ್ಯಗಳ ಕೊರತೆ ಕಾರಣ, ಸುಸಜ್ಜಿತ ಅಡುಗೆ ಕೊಣೆ ನಿರ್ಮಾಣಕ್ಕೆ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ನರೇಗಾ ಯೋಜನೆಯಡಿ ಅನುಮತಿಸಲ್ಪಟ್ಟ ಕಾಮಗಾರಿಗಳಡಿ ಅಡುಗೆ ಕೊಣೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.
    ಈ ಮೊದಲು 7.45 ಲಕ್ಷಕ್ಕೆ ಅನುಮೋದನೆ ನೀಡಲಾಗಿತ್ತು. ಇದರಿಂದ ವಿಶಾಲ ಹಾಗೂ ಸುಸಜ್ಜಿತ ಅಡುಗೆ ಕೊಣೆ ನಿರ್ಮಾಣಕ್ಕೆ ಅನುದಾನ ಕೊರತೆಯಾಗುತ್ತಿತ್ತು. ಹೊಸದಾಗಿ ಅನುಮೋದನೆ ನೀಡಿದ ಅಡುಗೆ ಕೊಣೆಗೆ 13.50 ಲಕ್ಷ ರೂ. ಅಂದಾಜು ಮೊತ್ತಕ್ಕೆ 36.69/20.90 (ಅಡಿಗಳಲ್ಲಿ) ಅಳತೆ ಜಾಗೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಆರ್‌ಸಿಸಿ ಬದಲಾಗಿ ಶಿಟ್‌ಗಳ ಬಳಕಗೆಗೆ ಅನುವು ಮಾಡಲಾಗಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ, ಹಾವೇರಿ ಜಿಲ್ಲೆಯಲ್ಲಿ ಶಾಲಾ ಅಡುಗೆ ಕೊಣೆ ನಿರ್ಮಾಣಕ್ಕೆ ಸಾಕಷ್ಟು ಬೇಡಿಕೆಗಳು ಬಂದಿದ್ದು, ಈ ಯೋಜನೆಯು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ವರದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
    ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ಸೂರ್ಯಕಾಂತಿ ಎಣ್ಣೆ ಮತ್ತು ಕೆನೆಭರಿತ ಹಾಲಿನ ಪೌಡರ್, ಪೂರಕ ಪೌಷ್ಠಿಕಾಂಶ ಆಹಾರಮೊಟ್ಟೆ/ ಬಾಳೆಹಣ್ಣು, ಚೆಕ್ಕಿ, ಆಹಾರವನ್ನು ಒದಗಿಸುತ್ತಿದೆ. ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಅಂಗನವಾಡಿಗಳು, ಮದರಸಾ ಮತ್ತು ಮಕ್ತಾಬ್‌ಗಳಲ್ಲಿ ಮಕ್ಕಳಿಗೆ ಕೆಲಸದ ದಿನಗಳಲ್ಲಿ ಉಚಿತ ಊಟ ಪೂರೈಸಲಾಗುತ್ತಿದೆ. ಪ್ರಪಂಚದಲ್ಲಿಯೇ ಈ ಯೋಜನೆ ಅತಿದೊಡ್ಡದಾಗಿದೆ ಎಂದು ಸಿಇಒ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts