More

    ಪ್ರತಿಷ್ಠಿತ ಶಾಲೆಗೆ 10 ಎಸ್‌ಸಿ, ಎಸ್‌ಟಿ ಮಕ್ಕಳು ಆಯ್ಕೆ; ಸಮಾಜ ಕಲ್ಯಾಣ ಇಲಾಖೆ ಜೆಡಿ ರೇಷ್ಮಾ ಕೌಸರ್ ಹೇಳಿಕೆ

    ಹಾವೇರಿ: ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಮಕ್ಕಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಪರೀಕ್ಷೆಯಲ್ಲಿ ಪ್ರತಿಷ್ಠಿತ ಶಾಲೆಗೆ ಜಿಲ್ಲೆಯ ಹತ್ತು ಮಕ್ಕಳು ಆಯ್ಕೆಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ರೇಷ್ಮಾ ಕೌಸರ್ ತಿಳಿಸಿದರು.
    ನಗರದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ಮಕ್ಕಳಿಗೆ ಆದೇಶ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಡಯಟ್ ಮೂಲಕ ಇತ್ತೀಚೆಗೆ ಅರ್ಹತಾ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ 183 ಮಕ್ಕಳು ಹಾಜರಾಗಿದ್ದು, ಇದರಲ್ಲಿ 10 ಮಕ್ಕಳು ಆಯ್ಕೆಯಾಗಿದ್ದಾರೆ. ಜಿಲ್ಲೆಯ ಹನ್ನೊಂದು ಪ್ತಿಷ್ಠಿತ ಶಾಲೆಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು. ಆದರೆ, 10 ಮಕ್ಕಳೂ ರಾಣೆಬೆನ್ನೂರ ತಾಲೂಕಿನ ಕಮದೋಡ ಗ್ರಾಮದ ರೇನ್‌ಬೊ ವಸತಿ ಶಾಲೆಯನ್ನೇ ಆಯ್ಕೆ ಮಾಡಿಕೊಂಡಿದ್ದರಿಂದ ಅಲ್ಲಿಗೆ ದಾಖಲಿಸಲಾಗುತ್ತಿದೆ. ಮೆರಿಟ್ ಆಧಾರದಲ್ಲಿ ಐವರು ವಿದ್ಯಾರ್ಥಿಗಳು, ಐವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ತಲಾ 50 ಸಾವಿರ ರೂ. ಪ್ರತಿ ವರ್ಷ ಇಲಾಖೆಯಿಂದ ಪಾವತಿಸಲಾಗುವುದು ಎಂದರು.
    ಸಮಾರಂಭದಲ್ಲಿ ಸಹಾಯಕ ನಿರ್ದೇಶಕ ರವಿಕುಮಾರ, ಬಿ.ಎನ್.ನೆಗಳೂರ, ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.
    50 ಸೀಟು ಹೆಚ್ಚಳಕ್ಕೆ ಬೇಡಿಕೆ
    ಪ್ರತಿಷ್ಠಿತ ಶಾಲೆಗಳಿಗೆ ಎಸ್‌ಸಿ, ಎಸ್‌ಟಿ ಮಕ್ಕಳ ಆಯ್ಕೆಗಾಗಿ ದಾವಣಗೆರೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ 40, 50 ಸೀಟುಗಳು ಲಭ್ಯವಿದೆ. ಆದರೆ, ಜಿಲ್ಲೆಯಲ್ಲಿ ಕೇವಲ 10 ಸೀಟಿಗೆ ಅವಕಾಶವಿದೆ. ಇಲ್ಲಿ ಬೇಡಿಕೆ ಹೆಚ್ಚು ಇರುವ ಕಾರಣ ಕನಿಷ್ಠ 50 ಸೀಟಿಗೆ ಹೆಚ್ಚಿಸಲು ಇಲಾಖೆಗೆ ಬೇಡಿಕೆ ಪತ್ರ ಸಲ್ಲಿಸಲಾಗಿದೆ ಎಂದು ರೇಷ್ಮಾ ಕೌಸರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts