More

    ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ; ಹಾವೇರಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

    ಹಾವೇರಿ: ವಿಶ್ವಕ್ಕೆ ಯೋಗದ ಬಗ್ಗೆ ಪರಿಚಯಿಸಿದ ದೇಶ ನಮ್ಮ ಹೆಮ್ಮೆಯ ಭಾರತ ದೇಶವಾಗಿದೆ ಎಂದು ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ನಗರದ ಗೌರಿ ಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
    ಪತಂಜಲಿ ಮಹರ್ಷಿಗಳು ಹಿಂದಿನ ಕಾಲದಲ್ಲಿ ಯೋಗವನ್ನು ಮಾಡುತ್ತಿದ್ದರು. ಸೂರ್ಯನಿಗೆ ನಮನ ಸರ್ವರ ರೋಗಗಳ ಶಮನ, ಯೋಗ ನಡಿಗೆ ಆರೋಗ್ಯದ ಕಡೆಗೆ, ಯೋಗ ಮಾಡಿದರೆ ರೋಗ ಓಡುವುದು. ದೇಹದ ಎಲ್ಲ ಅಂಗಾಂಗಗಳು ಗಟ್ಟಿಯಾಗುವಂತೆ ಯೋಗ ಮಾಡುತ್ತದೆ. ಯೋಗವು ಮನಸ್ಸಿನ ಅಲೆಗಳನ್ನು ನಿಲ್ಲಿಸುವುದರ ಮೂಲಕ ಮಾನಸಿಕ ಮತ್ತು ದೈಹಿಕ ಅರೋಗ್ಯ ಕಾಪಾಡುತ್ತದೆ ಎಂದು ಹೇಳಿದರು.
    ಶ್ರೀಗಳು ಸ್ವತಃ ಯೋಗ ಮಾಡುವ ಮೂಲಕ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಪದ್ಮಾಸನ, ವಜ್ರಾಸನ, ವೃಶ್ಚಿಕಾಸನ, ಪ್ರಾಣಾಯಾಮ, ಇತರ ಯೋಗಾಸನದ ವಿವಿಧ ಬಂಗಿಗಳನ್ನು ತಿಳಿಸಿಕೊಟ್ಟರು.
    ಮುಖ್ಯೋಪಾಧ್ಯಯ ಶಂಕರ ಅಕ್ಕಸಾಲಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಕಾವ್ಯಾ ಕೊರಕ್ಕನವರ ನಿರೂಪಿಸಿದರು. ಸರಸ್ವತಿ ಹಿರೇಮಠ ವಂದಿಸಿದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts