More

    ಗಾಂದಿಪುರ ಕಾಲೇಜ್‌ನ 103 ವಿದ್ಯಾರ್ಥಿಗಳಿಂದ ದಾಖಲೆಯ ರಕ್ತದಾನ

    ಹಾವೇರಿ: ತಾಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 103 ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
    ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾವೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ರಕ್ತದಾನ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಒಟ್ಟು 103 ಯೂನಿಟ್ ರಕ್ತ ಸಂಗ್ರಹವಾಗಿದೆ. ಕಾಲೇಜಿನ ಸಿಬ್ಬಂದಿ ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
    ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಮಾತನಾಡಿ, ಇಂದು ಮಾನವ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಮಾನವ ಮತ್ತು ತಂತ್ರಜ್ಞಾನದಿಂದ ರಕ್ತ ಸರಷ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ, ರಕ್ತವನ್ನು ದಾನಿಗಳಿಂದಲೇ ಪಡೆಯಬೇಕಿದೆ. ಆದ್ದರಿಂದ ರಕ್ತದಾನದ ಕುರಿತು ವ್ಯಾಪಕವಾದ ಪ್ರಚಾರ ಮಾಡಬೇಕಾಗಿದೆ. ದಾನಗಳಲ್ಲಿ ಅತೀ ಶ್ರೇಷ್ಠ ದಾನ ರಕ್ತದಾನವಾಗಿದೆ. ಒಬ್ಬ ರಕ್ತದಾನಿ 3 ಜೀವಗಳನ್ನು ಉಳಿಸಬಲ್ಲ. ಹಾಗೆಯೇ ರಕ್ತದಾನ ಮಾಡುವುದರಿಂದ ರಕ್ತದಾನಿಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
    ಪ್ರಾಂಶುಪಾಲ ಡಾ.ಡಿ. ಟಿ. ಪಾಟೀಲ ಹಾಗೂ ಸಂಚಾಲಕ ಪ್ರೊ.ಎಂ.ಬಿ.ನಾಗಲಾಪುರ ಮಾತನಾಡಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರದ ಡಾ.ಬಸವರಾಜ ಕಮತದ, ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ಲಕಮಾಜಿ, ಉಪನ್ಯಾಸಕರಾದ ರಮೇಶ ನಾಯಕ, ಸಂತೋಷ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts