More

    ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 1.43 ಲಕ್ಷ ರೂ. ವಂಚನೆ

    ಹಾವೇರಿ: ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಹಣ ಗಳಿಸಬಹುದು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು ನೀಡುವ ಮೂಲಕ ಆಮಿಷ ಒಡ್ಡಿ, ಲಿಂಕ್ ಕಳುಹಿಸಿ ಹಾವೇರಿಯ ಹೆಸ್ಕಾಂನ ಮಹಿಳಾ ಸಿಬ್ಬಂದಿಯೊಬ್ಬರಿಗೆ 1,43,889 ರೂ. ವಂಚಿಸಿದ್ದಾರೆ.
    ಮೋನಿಕಾ ಶರ್ಮಾ ಎಂಬ ಹೆಸರಿನ ಇನ್‌ಸ್ಟಾ ಐಡಿ ಮೂಲಕ ವಾಟ್ಸ್ ಆ್ಯಪ್ ಗ್ರೂಪ್‌ಗೆ ನಗರದ ಮಹಿಳೆಯ ಮೊಬೈಲ್ ಸಂಖ್ಯೆ ಸೇರಿಸಿದ್ದಾರೆ. ನಂತರ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿದ್ದಾರೆ. ಹಂತ ಹಂತವಾಗಿ 1.43 ಲಕ್ಷ ರೂ. ವರ್ಗಾಯಿಸಿಕೊಂಡು, ಹಣ, ಲಾಭಾಂಶ ಕೊಡದೇ ವಂಚಿಸಿದ್ದಾರೆ ಎಂದು ಮಹಿಳೆ ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts