More

    ಸೆಮಿಸ್​ಗೂ ಮುನ್ನ ಇಂಗ್ಲೆಂಡ್​ ತಂಡಕ್ಕೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ಹಾರ್ದಿಕ್​ ಪಾಂಡ್ಯ!

    ನವದೆಹಲಿ: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಬ್ರೇಕ್ ಇಲ್ಲದ ಬುಲ್ಡೋಜರ್‌ನಂತೆ ಮುನ್ನುಗ್ಗುತ್ತಿದೆ. ಇದುವರೆಗೂ ರೋಹಿತ್​ ಪಡೆಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಗ್ರೂಪ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ತಂಡಗಳನ್ನು ಸೋಲಿಸಿದ ರೋಹಿತ್ ಸೇನೆ, ಸೂಪರ್-8ರಲ್ಲೂ ಮುನ್ನಡೆ ಸಾಧಿಸಿತು. ಕ್ರಮವಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಬಗ್ಗುಬಡಿಯಿತು. ನಾಯಕ ರೋಹಿತ್ ಶರ್ಮರ ಅಬ್ಬರದ ಬ್ಯಾಟಿಂಗ್​ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮೊನೆಚಾದ ಬೌಲಿಂಗ್ ದಾಳಿಯಿಂದಾಗಿ ಎದುರಾಳಿ ತಂಡಗಳು ಟೀಮ್​ ಇಂಡಿಯಾ ಬಗ್ಗೆ ಭಯಪಡುವಂತಾಗಿದೆ.

    ಅಪಾಯಕಾರಿ ಆಸ್ಟ್ರೇಲಿಯಾ ತಂಡ ತವರಿದೆ ತೆರಳಿದೆ. ನ್ಯೂಜಿಲೆಂಡ್ ಕೂಡ ಕೆಲವು ಟೂರ್ನಿಯಿಂದ ಹೊರಬಿದ್ದಿದೆ. ವೆಸ್ಟ್​ ಇಂಡೀಸ್ ಮತ್ತು ಪಾಕಿಸ್ತಾನದಂತಹ ತಂಡಗಳು ಸಹ ರೇಸ್‌ನಲ್ಲಿಲ್ಲ. ಭಾರತ ಕಪ್ ಗೆಲ್ಲಲು ಇದೇ ಸರಿಯಾದ ಸಮಯ ಎಂದು ಎಲ್ಲರೂ ಹೇಳುತ್ತಿದ್ದಾರೆ. ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೆಮಿಸ್​ನಲ್ಲಿ ಸೋಲಿಸಿದರೆ ಸಾಕು, ಕಪ್ ನಮ್ಮದೇ ಎಂಬ ಭರವಸೆ ಮೂಡಿದೆ.

    ಇದೇ ಸಂದರ್ಭದಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತೇನೆ ಮತ್ತು ನಾನು ವಿಶ್ವಕಪ್​ಗಾಗಿ ಆಡುತ್ತೇನೆ ಎಂದು ಹೇಳಿದರು. ಸದ್ಯ ತಂಡಕ್ಕೆ ಈ ಮೆಗಾ ಟೈಟಲ್ ಕೊಡಲು ಏನು ಬೇಕಾದರೂ ಮಾಡಲು ಸಿದ್ಧ ಎನ್ನುವ ಮೂಲಕ ಸೆಮಿಫೈನಲ್​ ಎದುರಾಳಿ ಇಂಗ್ಲೆಂಡಿಗೆ ಪರೋಕ್ಷವಾಗಿ ಪಾಂಡ್ಯ ವಾರ್ನಿಂಗ್ ನೀಡಿದ್ದಾರೆ.

    ಆರಂಭದಿಂದಲೂ ಟೀಮ್​ ಇಂಡಿಯಾ ಪರ ಆಡುವುದು ನನ್ನ ಕನಸಾಗಿತ್ತು. ಅದು ಕೂಡ ವಿಶ್ವಕಪ್ ಗೆಲ್ಲಬೇಕು ಎಂಬುದು ದೊಡ್ಡ ಕನಸು. ನಾನು 2016ರಲ್ಲಿ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ್ದೇನೆ. ಆ ದಿನದಿಂದ ಇಲ್ಲಿಯವರೆಗೂ ದೇಶಕ್ಕಾಗಿ ಕ್ರೀಡಾಂಗಣಕ್ಕೆ ಇಳಿದಾಗಲೆಲ್ಲ ವಿಶ್ವಕಪ್ ಗೆಲ್ಲುವ ಆಸೆಯಿಂದಲೇ ಆಡುತ್ತೇನೆ. ಇದೀಗ ಅದೇ ಗುರಿಯೊಂದಿಗೆ ಆಡುತ್ತಿದ್ದೇನೆ. ನಾನು ಭಾರತಕ್ಕಾಗಿ ಆಡುವಷ್ಟು ದಿನಗಳವರೆಗೆ ಬ್ಯಾಟರ್, ಬೌಲರ್ ಮತ್ತು ಫೀಲ್ಡರ್ ಆಗಿ ನನ್ನ ನೂರು ಪ್ರತಿಶತ ಪ್ರಯತ್ನವನ್ನು ನೀಡುತ್ತೇನೆ. ನಾಯಕ ಯಾರೇ ಆದರೂ ನನ್ನ ದೃಷ್ಟಿಕೋನ ಬದಲಾಗುವುದಿಲ್ಲ. ತಂಡಕ್ಕೆ ವಿಶ್ವಕಪ್ ನೀಡಲು ನಾನು ಏನು ಬೇಕಾದರೂ ಮಾಡಲು ಸಿದ್ಧ. ಫೀಲ್ಡಿಂಗ್, ಬ್ಯಾಟಿಂಗ್, ಬೌಲಿಂಗ್ ಯಾವುದೇ ವಿಭಾಗದಲ್ಲಿದ್ದರೂ ತಂಡಕ್ಕೆ ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ ಎಂದು ಹಾರ್ದಿಕ್ ಹೇಳಿದ್ದಾರೆ.

    ಸೆಮಿಸ್‌ಗೂ ಮುನ್ನ ಹಾರ್ದಿಕ್‌ ಮಾಡಿದ ಕಾಮೆಂಟ್‌ಗಳು ವೈರಲ್‌ ಆಗುತ್ತಿವೆ. ವಿಶ್ವಕಪ್ ಗೆಲ್ಲಲು ಏನು ಬೇಕಾದರೂ ಮಾಡಲು ಸಿದ್ಧ ಎಂಬ ಅವರ ಕಾಮೆಂಟ್‌ಗಳು ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟಿಸಿದೆ. ಹಾರ್ದಿಕ್ ಅವರ ಕಾಮೆಂಟ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ. (ಏಜೆನ್ಸೀಸ್​)

    ನಿಜ ಹೇಳ್ತೀನಿ 2 ಬಾರಿ ಅನುಷ್ಕಾ ಶರ್ಮಾರನ್ನು… ಮದ್ವೆ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟ ವಿಜಯ್​ ಮಲ್ಯ ಪುತ್ರ!

    ವಿಶ್ವಕಪ್​ ಮೇಲೆ ಕಾಲಿಟ್ಟವನಿಗೆ ಇಂದು ಹೀನಾಯ ಸ್ಥಿತಿ! ಮಾರ್ಷ್​ ಮಾತು ಕೇಳಿ ಅಯ್ಯೋ ಪಾಪ ಅಂದ್ರು ನೆಟ್ಟಿಗರು

    ಆಸಿಸ್​ ವಿರುದ್ಧ ಶತಕದ ಅಂಚಿನಲ್ಲಿ ಔಟ್: ರೋಹಿತ್​ ಆಡಿದ​​​ ಮಾತುಗಳನ್ನು ಕೇಳಿದ್ರೆ ಸೆಲ್ಯೂಟ್​ ಹೊಡಿರೋ ಅಂತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts