More

    ಸ್ಮಾರ್ಟ್‌ಕ್ಲಾಸ್‌ನಿಂದ ಗುಣಮಟ್ಟದ ಶಿಕ್ಷಣ : ಡಾ.ಗೋವಿಂದ ಬಾಬು ಪೂಜಾರಿ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಸರ್ಕಾರಿ ಶಾಲೆ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಟ್ರಸ್ಟ್ ಮೂಲಕ ಸ್ಮಾರ್ಟ್‌ಕ್ಲಾಸ್ ಮತ್ತು ಇತರ ಕೊಡುಗೆ ನೀಡುತ್ತಾ ಬರುತ್ತಿದ್ದೇವೆ. ವಿದ್ಯಾರ್ಥಿಗಳು ಸ್ಮಾರ್ಟ್‌ಕ್ಲಾಸ್ ಮೂಲಕ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು.

    ಟ್ರಸ್ಟ್‌ನ ಶೈಕ್ಷಣಿಕ, ಸಾಮಾಜಿಕ, ಸೇವಾ ಸಂಸ್ಥೆ ವತಿಯಿಂದ ಸ್ಮಾರ್ಟ್‌ಕ್ಲಾಸ್ ಅನ್ನು ವಂಡ್ಸೆ-ನೆಂಪುವಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಮಂಗಳವಾರ ಹಸ್ತಾಂತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ತರಗತಿಯಲ್ಲಿ ಉತ್ತೀರ್ಣರಾದರಷ್ಟೇ ಸಾಲದು, ಜೀವನದಲ್ಲಿಯೂ ಯಶಸ್ಸು ಪಡೆಯಬೇಕು. ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳುವ ಮೂಲಕ ಸಮಾಜ ಹಾಗೂ ದೇಶದ ಆಸ್ತಿಯಾಗಬೇಕು. ಇಲ್ಲಿನ ಶಿಕ್ಷಕ ವೃಂದ, ಎಸ್‌ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲು ಸಹಕಾರ ನೀಡಬೇಕು ಎಂದರು.

    ಎಸ್‌ಡಿಎಂಸಿ ಅಧ್ಯಕ್ಷ ಗುರು ಸೋಮಯಾಜಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಗ್ರಾಪಂ ಅಧ್ಯಕ್ಷ ರಾಜೀವ ಶೆಟ್ಟಿ, ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್‌ನ ನಾಗರಾಜ ಪಿ.ಯಡ್ತರೆ, ಪ್ರಾಂಶುಪಾಲ ರಾಜೀವ ನಾಯ್ಕ, ಭುಜಂಗ ಶೆಟ್ಟಿ ದಂಪತಿ, ಎಸ್‌ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಇದ್ದರು.

    ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವಿರಾಜ ಶೆಟ್ಟಿ ಪ್ರಾಸ್ತಾವಿಸಿದರು. ಶಿಕ್ಷಕರಾದ ಕುಪ್ಪಯ್ಯ ಮರಾಠಿ ಸ್ವಾಗತಿಸಿ, ಗಣೇಶ ಶೆಟ್ಟಿ ನಿರ್ವಹಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀಧರ ಭಟ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts