More

    ವಿಕ್ರಮ್​ ಲ್ಯಾಂಡರ್​ ವಿನ್ಯಾಸ ಮಾಡಿದ್ದು ನಾನೇ ಎಂದು ಮಾಧ್ಯಮಗಳಿಗೆ ಸಂದರ್ಶನ ಕೊಡ್ತಿದ್ದ ನಕಲಿ ವಿಜ್ಞಾನಿ ಕೊನೆಗೂ ಅರೆಸ್ಟ್​!

    ಸೂರತ್​: ನಾನು ಇಸ್ರೋ ವಿಜ್ಞಾನಿ, ಚಂದ್ರಯಾನ 3 ಮಿಷನ್​ಗೆ ವಿಕ್ರಮ್​ ಲ್ಯಾಂಡರ್​ ಮಾಡ್ಯೂಲ್​ ವಿನ್ಯಾಸ ಮಾಡಿದ್ದು ನಾನೇ ಎಂದು ಹೇಳಿಕೊಂಡು ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ನಕಲಿ ವಿಜ್ಞಾನಿಯನ್ನು ಗುಜರಾತಿನ ಸೂರತ್​ ನಗರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಮಿತುಲ್​ ತ್ರಿವೇದಿ ಎಂದು ಗುರುತಿಸಲಾಗಿದೆ. ಆಗಸ್ಟ್​ 23ರಂದು ಚಂದ್ರಯಾನ 3 ಚಂದ್ರನಲ್ಲಿ ಸಾಫ್ಟ್​ ಲ್ಯಾಂಡಿಂಗ್​ ಆಗುವ ಮೂಲಕ ಹೊಸ ಇತಿಹಾಸ ಬರೆದಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದೆ. ಅಲ್ಲದೆ, ಚಂದ್ರನಲ್ಲಿ ಇಳಿದ ನಾಲ್ಕನೇ ದೇಶ ಎಂಬ ಗೌರವ ಗಳಿಸಿದೆ. ಇದರ ನಡುವೆ ಸೂರತ್​ನ ಮಿತುಲ್​ ತ್ರಿವೇದಿ, ವಿಕ್ರಮ್​ ಲ್ಯಾಂಡರ್​ ಮಾಡ್ಯೂಲ್​ ವಿನ್ಯಾಸ ಮಾಡಿದ್ದು ನಾನೇ ಹೇಳಿಕೊಂಡು ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದರು.

    ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೇಡ, ಎಥೆನಾಲ್​ನಿಂದಲೇ ಓಡಲಿದೆ ಕಾರು: ಫ್ಲೆಕ್ಸ್-ಇಂಧನ ಎಂಜಿನ್, ಪರ್ಯಾಯ ಶಕ್ತಿ ಬಳಕೆ; ಇವಿ ಮೋಡ್​ನಲ್ಲೂ ಸಂಚಾರ

    ಆರೋಪಿ ತ್ರಿವೇದಿ, ತಾನು ಇಸ್ರೋದ ಪ್ರಾಚೀನ ವಿಜ್ಞಾನ ಅಪ್ಲಿಕೇಶನ್ ವಿಭಾಗದಲ್ಲಿ ಸಹಾಯಕ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದ್ದಾನೆ. ಅಲ್ಲದೆ, 2022ರ ಫೆಬ್ರವರಿ 26 ದಿನಾಂಕವುಳ್ಳ ನಕಲಿ ನೇಮಕಾತಿ ಪತ್ರವನ್ನು ತೋರಿಸಿದ್ದಾನೆ. ಹೀಗಾಗಿ ಎಲ್ಲರು ಆತ ಹೇಳಿದ ಮಾತನ್ನು ನಂಬಿದ್ದರು.

    ಆದರೆ, ಆ ವ್ಯಕ್ತಿ ಇಸ್ರೋದ ಚಂದ್ರಯಾನ-3 ಮಿಷನ್‌ಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಮತ್ತು ತಾನೊಬ್ಬ ಇಸ್ರೋ ಉದ್ಯೋಗಿ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ್ದಾನೆ. ಇಸ್ರೋದ ಬಾಹ್ಯಾಕಾಶದಲ್ಲಿ ಮರ್ಕ್ಯೂರಿ ಬಲ ಎಂಬ ಮುಂದಿನ ಯೋಜನೆಗೆ ನಾನು ಕೂಡ ಒಬ್ಬ ಸದಸ್ಯ ಎಂಬ ನಕಲಿ ಪತ್ರವನ್ನೂ ಆರೋಪಿ ಸಿದ್ಧಪಡಿಸಿದ್ದ ಎಂಬುದು ಸಂಪೂರ್ಣ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಹತ್ವಾಕಾಂಕ್ಷೆಯ ಯೋಜನೆಗೆ ಕೊಡುಗೆ ನೀಡದಿದ್ದರೂ ಇಸ್ರೋ ಕುರಿತು ನಕಲಿ ಸಂದೇಶಗಳನ್ನು ಹರಡಿ, ಆ ಮೂಲಕ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ಸೋಗು ಹಾಕುವ ಮೂಲಕ ವಂಚನೆ), 465 (ನಕಲಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), ಮತ್ತು 471 (ನಕಲಿ ದಾಖಲೆಯನ್ನು ಬಳಸುವುದು) ಅಡಿಯಲ್ಲಿ ಸೂರತ್ ನಗರ ಅಪರಾಧ ವಿಭಾಗವು ಎಫ್‌ಐಆರ್ ದಾಖಲಿಸಿದೆ. (ಏಜೆನ್ಸೀಸ್​)

    ಚಂದಮಾಮನ ಮೈಮೇಲಿದೆ ಸ್ಫೋಟಕ ವಸ್ತು! ಚಂದ್ರನ ಮೇಲೆ ‘ಪ್ರಜ್ಞಾನ್‍’ಗೆ ಬೇರೆ ಏನೆಲ್ಲಾ ಸಿಕ್ತು?

    ಪೆಟ್ರೋಲ್-ಡೀಸೆಲ್ ಬೇಡ, ಎಥೆನಾಲ್​ನಿಂದಲೇ ಓಡಲಿದೆ ಕಾರು: ಫ್ಲೆಕ್ಸ್-ಇಂಧನ ಎಂಜಿನ್, ಪರ್ಯಾಯ ಶಕ್ತಿ ಬಳಕೆ; ಇವಿ ಮೋಡ್​ನಲ್ಲೂ ಸಂಚಾರ

    25 ಲಕ್ಷ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ಹಣ: 7 ಲಕ್ಷ ಕಾರ್ಡ್​ಗಳ ಸಮಸ್ಯೆ ಬಗೆಹರಿಸಿದ ಆಹಾರ ಇಲಾಖೆ; 606 ಕೋಟಿ ರೂ. ಜಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts