More

    ದುಬಾರಿ ಬೆಲೆಗೆ ಮಾರಾಟವಾಯ್ತು ಕಲ್ಕಿ 2898 AD ಟಿಕೆಟ್​; ರೇಟ್​ ಎಷ್ಟು ಗೊತ್ತಾ?

    ಮುಂಬೈ: ನಾಗ್​​ಅಶ್ವಿನ್​​ ಆ್ಯಕ್ಷನ್​​-ಕಟ್​​ ಹೇಳಿರುವ ಕಲ್ಕಿ 2898 AD ಸಿನಿಮಾ ದೇಶಾದ್ಯಂತ ಗುರುವಾರ(ಜೂನ್​​ 27)ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಪ್ರಭಾಸ್​, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮುಂಗಡ ಬುಕ್ಕಿಂಗ್​​ಈಗಾಗಲೇ ಆರಂಭವಾಗಿದ್ದು, ಹೈದರಾಬಾದ್, ಮುಂಬೈ, ಬೆಂಗಳೂರು, ನವದೆಹಲಿ ಮತ್ತು ಚೆನ್ನೈನಲ್ಲಿ ಮೊದಲ ದಿನದ ಶೋಗಾಗಿ ಟಿಕೆಟ್​​ಗಳನ್ನು ಕಾಯ್ದಿರಿಸಲಾಗಿದೆ, ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಈ ಚಿತ್ರಕ್ಕೆ ಕ್ರೇಜ್​ ಎಷ್ಟಿದೆ ಎಂಬುದು ಟಿಕೆಟ್​​ ಕಾಯ್ದಿರಿಸಿರುವುದರಲ್ಲಿ ತಿಳಿಯುತ್ತದೆ.

    ಇದನ್ನು ಓದಿ: ರಣವೀರ್​​, ದೀಪಿಕಾ ಮಗು ಬಗ್ಗೆ ಉಲಗ ನಾಯಗನ್ ಕಮಲ್​​ ಹಾಸನ್​​​ ಹೇಳಿದ ಮಾತೇನು ಗೊತ್ತಾ?

    ಅಂಕಿಅಂಶಗಳ ಪ್ರಕಾರ ಇವರೆಗೂ ಕಲ್ಕಿ 2898 AD ಚಿತ್ರದ 1399052 ಟಿಕೆಟ್‌ಗಳು ದೇಶಾದ್ಯಂತ ಬುಕ್ ಆಗಿವೆ. ದೇಶಾದ್ಯಂತ 18551 ಶೋಗಳಿಗೆ ಈ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. ಈ ಮುಂಗಡ ಟಿಕೆಟ್ ಬುಕ್ಕಿಂಗ್​​​ ಮೂಲಕ ಚಿತ್ರ ಇದುವರೆಗೆ 38.41 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಬುಕ್ಕಿಂಗ್​ ಆಗಿರುವ ಸಿನಿಮಾದ ಟಿಕೆಟ್​​ಗಳು ಎಲ್ಲಾ ಭಾಷೆಗಳನ್ನು ಒಳಗೊಂಡಿದೆ.

    ಅಂದಹಾಗೆ ಕಲ್ಕಿ 2898 AD ಸಿನಿಮಾದ ಟಿಕೆಟ್​ ಬೆಲೆ 100 ರಿಂದ 1100 ರೂಪಾಯಿ ಆದರೆ, ಚಿತ್ರದ ಟಿಕೆಟ್​​​ಗಳು ಒಂದೆಡೆ ಅತ್ಯಂತ ದುಬಾರಿಗೆ ಮಾರಾಟ ಮಾಡಲಾಗುತ್ತಿದೆ. ಎಷ್ಟು ಅಂತೀರಾ… ಒಂದು ಟಿಕೆಟ್​ ಅನ್ನು 2300 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಅತ್ಯಂತ ದುಬಾರಿ ಟಿಕೆಟ್ ಹೈದರಾಬಾದ್‌ನಲ್ಲಿ ಮಾರಾಟವಾಗುತ್ತಿರಬಹುದು ಎಂದು ಅಂದುಕೊಳ್ಳುತ್ತಿದ್ದರೆ, ಅದು ತಪ್ಪಾದ ಆಲೋಚನೆ. ಅಷ್ಟಕ್ಕೂ ಈ ದುಬಾರಿ ಟಿಕೆಟ್​​ ಮುಂಬೈನಲ್ಲಿ ಮಾರಾಟವಾಗಿದೆ.

    ಮೈಸನ್ ಐನಾಕ್ಸ್: ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾ ‘ಕಲ್ಕಿ 2898 ಎಡಿ’ ಟಿಕೆಟ್‌ಗಳನ್ನು 2,300 ರೂ.ಗೆ ಮಾರಾಟ ಮಾಡುತ್ತಿದೆ. ವೋರ್ಲಿಯ ಆಟ್ರಿಯಾ ಮಾಲ್​ನಲ್ಲಿರುವ ಐನಾಕ್ಸ್: ಇನ್‌ಸಿಗ್ನಿಯಾ ಮತ್ತು ಲೋವರ್ ಪ್ಯಾರೆಲ್‌ನ PVR ಐಕಾನ್: ಫೀನಿಕ್ಸ್ ಪಲ್ಲಾಡಿಯಮ್‌ಗೆ ಟಿಕೆಟ್‌ಗಳನ್ನು ಕ್ರಮವಾಗಿ 1,760 ರೂ. ಮತ್ತು 1,560 ರೂ.ಗೆಮಾರಾಟ ಮಾಡಲಾಗುತ್ತಿದೆ. ಈ ಟಿಕೆಟ್‌ಗಳಿಗೆ ಯಾವುದೇ ತೆರಿಗೆ ವಿಧಿಸಲಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸೆಪ್ಟೆಂಬರ್ 2023ರಲ್ಲಿ ಶಾರೂಖ್​​ ಖಾನ್ ಅಭಿನಯದ ಜವಾನ್ ಸಿನಿಮಾದ ಟಿಕೆಟ್​ಗಳನ್ನು 2,400 ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಆ ಸಿನಿಮಾದ ನಂತರ ಸದ್ಯ ಕಲ್ಕಿ 2898 AD ಚಿತ್ರದ ಟಿಕೆಟ್​​ಗಳು ದುಬಾರಿ ಬೆಲೆಗೆ ಮಾರಾಟವಾಗಿದೆ. (ಏಜೆನ್ಸೀಸ್​​​)

    ಕಲ್ಕಿ 2898 AD; ಮುಂಗಡ ಟಿಕೆಟ್​ ಬುಕ್ಕಿಂಗ್​​ನ​​ ಮೊದಲ ದಿನವೇ ಗಳಿಸಿದ್ದು ಎಷ್ಟು ಗೊತ್ತಾ?

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts