More

    ಬದಲಾದ ಟ್ರಂಪ್​ ನಿಲುವು..ಅಮೆರಿಕಾದಲ್ಲಿರುವ ವಿದೇಶಿ ವಿದ್ಯಾರ್ಥಿಗಳಿಗೆ ಗ್ರೀನ್ ಕಾರ್ಡ್!

    ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವಲಸೆ ನೀತಿಯನ್ನು ಪ್ರಸ್ತಾಪಿಸಿದ್ದಾರೆ.

    ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು: ಕಾರಣ ಇದೇ ನೋಡಿ..

    ಅಮೆರಿಕದ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ವಿದೇಶಿ ವಿದ್ಯಾರ್ಥಿಗಳಿಗೆ ಗ್ರೀನ್ ಕಾರ್ಡ್‌ಗಳನ್ನು (ಶಾಶ್ವತ ನಿವಾಸ ಕಾರ್ಡ್‌ಗಳು) ನೀಡಲಾಗುವುದು ಎಂದು ಘೋಷಿಸಲಾಗಿದೆ.

    ಶಿಕ್ಷಣ ಮುಗಿದ ಕೂಡಲೇ ಸ್ವಯಂಚಾಲಿತವಾಗಿ ಗ್ರೀನ್ ಕಾರ್ಡ್ ಸಿಗುವಂತೆ ಪಾಲಿಸಿ ತರುವುದಾಗಿ ಹೇಳಿದರು. ಇದರಿಂದ ಭಾರತೀಯ ಮತ್ತು ಚೀನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

    ಈ ಹೊಸ ನೀತಿಯು ಟ್ರಂಪ್​ ಹೊಂದಿದ್ದ ಹಿಂದಿನ ನಿಲುವಿಗಿಂತ ಭಿನ್ನವಾಗಿದೆ. ಅವರು ಅಧ್ಯಕ್ಷರಾಗಿದ್ದಾಗ ಅಮೆರಿಕಾದ ಸ್ವದೇಶಿ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ವಲಸೆ ತಡೆಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸುವುದಾಗಿ ಪ್ರತಿಪಾದಿಸಿದ್ದರು.

    ಇದೀಗ ಅನಿವಾಸಿ ಭಾರತೀಯರು ಹಾಗೂ ಚೀನೀಯರ ಬೆಂಬಲ ಪಡೆಯಲು ತಮ್ಮ ಧೋರಣೆ ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಗುರುವಾರ, ಅವರು ವೆಂಚರ್ ಕ್ಯಾಪಿಟಲಿಸ್ಟ್‌ಗಳು ಮತ್ತು ಟೆಕ್ ಹೂಡಿಕೆದಾರರೊಂದಿಗೆ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಈ ಪ್ರಸ್ತಾಪವನ್ನು ಮಾಡಿದರು.

    ಜೂನಿಯರ್ ಕಾಲೇಜುಗಳು ಸೇರಿದಂತೆ ಅಮೆರಿಕದ ಯಾವುದೇ ಕಾಲೇಜಿನಲ್ಲಿ ಓದಿದರೆ ಡಿಪ್ಲೊಮಾದ ಭಾಗವಾಗಿ ಗ್ರೀನ್ ಕಾರ್ಡ್ ಸಿಗುತ್ತದೆ. ಅಮೆರಿಕದ ಆರ್ಥಿಕತೆ ಸದೃಢವಾಗಿರಲು ಅಮೆರಿಕದಲ್ಲಿಯೇ ಬದುಕುವುದು ಅಗತ್ಯ ಎಂದು ಎಲ್ಲ ತಜ್ಞರು ಹೇಳಿದ್ದಾರೆ. ಆದಾಗ್ಯೂ, ಇದು ಕಮ್ಯುನಿಸ್ಟರು, ಮೂಲಭೂತ ಇಸ್ಲಾಮಿಸ್ಟ್​ಗಳು, ಹಮಾಸ್ ಬೆಂಬಲಿಗರು, ಅಮೆರಿಕದ ದ್ವೇಷಿಗಳು ಮತ್ತು ಯುನೈಟೆಡ್ ಸ್ಟೇಟ್ಸ್​ ಹಿತಾಸಕ್ತಿಗಳಿಗೆ ಹಾನಿ ಮಾಡುವ ಕ್ರಿಮಿನಲ್ ಆರೋಪಗಳನ್ನು ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ರಿಯಲ್ ಹೀರೋ ಅನ್ನಿಸಿಕೊಂಡ ಪವನ್ ಕಲ್ಯಾಣ್.. ವಿಧಾನಸಭೆಯಲ್ಲಿ ಕುತೂಹಲಕಾರಿ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts