More

    ಬೆಂಗಳೂರಿನ ಗೂಗಲ್​ ಕಚೇರಿಯಲ್ಲಿ ಒಬ್ಬ ಉದ್ಯೋಗಿಗೆ ಕರೋನಾ ವೈರಸ್ ಅಟ್ಯಾಕ್ : ದೃಢೀಕರಿಸಿದ ಕಂಪನಿಯಿಂದ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಮ್ ಸೂಚನೆ

    ಬೆಂಗಳೂರು: ಸರ್ಚ್​ ಇಂಜಿನ್​ ದಿಗ್ಗಜ ಕಂಪನಿ ಗೂಗಲ್​ ಶುಕ್ರವಾರ ಬೆಳಗ್ಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಬೆಂಗಳೂರು ಕಚೇರಿಗಳ ಪೈಕಿ ಒಂದು ಕಚೇರಿಯಲ್ಲಿರುವ ಉದ್ಯೋಗಿಯೊಬ್ಬರಿಗೆ ಕರೋನಾ ವೈರಾಣು COVID-19 ಸೋಂಕು ತಗುಲಿದೆ. ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಿದ ವೇಳೆ ಇದು ಪತ್ತೆಯಾಗಿದ್ದು, ಅದರ ಗುಣಲಕ್ಷಣಗಳು ಪತ್ತೆಯಾಗುವ ಮೊದಲೇ ಆ ಉದ್ಯೋಗಿಯನ್ನು ಪ್ರತ್ಯೇಕಿಸಿ ಇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

    ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ನಾವು ಬೆಂಗಳೂರು ಕಚೇರಿಯಲ್ಲಿರುವ ಎಲ್ಲ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದ್ದೇವೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಸಲಹೆಯ ಪ್ರಕಾರ ನಾವು ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದೂ ಅದು ಪ್ರಕಟಣೆಯಲ್ಲಿ ತಿಳಿಸಿದೆ.

    ಗೂಗಲ್​ನ ಬೆಂಗಳೂರು ಕಚೇರಿಯಲ್ಲಿ ಉದ್ಯೋಗಿಯೊಬ್ಬರಿಗೆ ಕರೋನಾ ವೈರಸ್ ತಗುಲಿರುವ ವಿಚಾರ ಮತ್ತು ಅವರನ್ನು ಪ್ರತ್ಯೇಕಿಸಿ ಇಟ್ಟಿರುವುದನ್ನು ಸಿಎನ್​ಬಿಸಿ ನಿನ್ನೆಯೇ ವರದಿ ಮಾಡಿತ್ತು. ಇದರಂತೆ, ಕಂಪನಿಯಲ್ಲಿ ಮೊದಲ ಪ್ರಕರಣ ಫೆಬ್ರವರಿ ಕೊನೆಯಲ್ಲಿ ಕಾಣಿಸಿದ್ದು, ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ಅದು ನಿರ್ಬಂಧ ಹೇರಿತ್ತು. ಸದ್ಯ ಭಾರತದಲ್ಲಿ ಕರೋನಾ ಸೋಂಕು ದೃಢಪಟ್ಟವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಈ ಸೋಂಕಿಗೆ ಕರ್ನಾಟಕದವರೊಬ್ಬರು ಬಲಿಯಾಗಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts