More

    ಓಟ್ ಬ್ಯಾಂಕ್‌ಗೋಸ್ಕರ ನಟ ದರ್ಶನ್ ‘ಕೃಷಿ ರಾಯಭಾರಿ’ : ರೈತ ಮುಖಂಡ ಕುರುಬೂರು ಶಾಂತಕುಮಾರ್ ಟೀಕೆ

    ಮೈಸೂರು: ನಟ ದರ್ಶನ್ ಮೇಲೆ ಪ್ರಕರಣಗಳು ಇದ್ದರೂ ಅವರನ್ನು ಈ ಹಿಂದೆ ಕೃಷಿ ರಾಯಭಾರಿಯಾಗಿ ನೇಮಕ ಮಾಡಿದ್ದು ಸರಿಯಲ್ಲ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

    ‘ದರ್ಶನ್ ಅವರನ್ನು ಕೃಷಿ ರಾಯಭಾರಿಯಾಗಿ ನೇಮಕ ಮಾಡುವ ಸಂದರ್ಭ ಅವರ ಮೇಲೆ ಯಾವುದೇ ಪ್ರಕರಣ ಇರಲಿಲ್ಲ’ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಸ್ಪಷ್ಟ ನೀಡಿದ್ದಾರೆ. ದರ್ಶನ್ ಅವರನ್ನು ಕೃಷಿ ರಾಯಭಾರಿ ಹಾಗೂ ಅರಣ್ಯ ಇಲಾಖೆ ರಾಯಭಾರಿಯಾಗಿ ನೇಮಿಸುವ ಸಂದರ್ಭ ಹಲವು ಪ್ರಕರಣಗಳು ಇತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಯಾವುದೇ ಒಂದು ಕ್ಷೇತ್ರಕ್ಕೆ ವ್ಯಕ್ತಿಯೊಬ್ಬರನ್ನು ರಾಯಭಾರಿಯಾಗಿ ನೇಮಕ ಮಾಡಬೇಕಾದರೆ ಅವರಿಗೆ ಕ್ಲೀನ್ ಇಮೇಜ್ ಇರಬೇಕು. ರಾಯಭಾರಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವವರಾಗಿರಬೇಕು. ಆದರೆ, ಈ ಅಂಶವನ್ನು ಪರಿಗಣಿಸದೆ ಓಟ್ ಬ್ಯಾಂಕ್‌ಗೋಸ್ಕರ ದರ್ಶನ್ ಅವರನ್ನು ಕೃಷಿ ರಾಯಭಾರಿಯಾಗಿ ಮಾಡಲಾಯಿತು ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts