More

    ಮಕ್ಕಳಿಗೆ ಮೊಬೈಲ್ ಬದಲು ಕ್ರೀಡೆಯಲ್ಲಿ ತೊಡಗಿಸಿ: ಪಾಲಕರಿಗೆ ಕ್ಯಾಮ್ಸ್ ಸಲಹೆ

    ಬೆಂಗಳೂರು ಮಕ್ಕಳು ಮೊಬೈಲ್ ಬಳಸುತ್ತಿರುವುದರಿಂದ ಹಲವು ರೀತಿಯ ಅನಾಹುತಕ್ಕೆ ಕಾರಣವಾಗುತ್ತಿದ್ದು, ಮೊಬೈಲ್ ಬದಲಾಗಿ ಪಾಲಕರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿ ಅನಾಹುತಗಳನ್ನು ತಪ್ಪಿಸುವಂತೆ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್)ಸಂಘಟನೆ ಪಾಲಕರಲ್ಲಿ ಮನವಿ ಮಾಡಿದೆ.

    ಪಾಲಕರು ಇತ್ತೀಚಿನ ದಿನಗಳಲ್ಲಿ 5-6ನೇ ತರಗತಿಗಳ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಚಟುವಟಿಕೆಗಳಲ್ಲಿ ಗುಪ್ತವಾಗಿ ವಿವಿಧ ಹೆಸರಿನಲ್ಲಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಪ್ರೀತಿ-ಪ್ರೇಮಕ್ಕೆ ಬಿದ್ದು, ಆನಂತರ ಗಲಾಟೆಗಳು ನಡೆದು ಇದು ಹೊಡೆದಾಡುವ ಸ್ಥಿತಿ ತಲುಪಿದೆ. ಇದು ಅಲ್ಲದೆ, ಆನ್‌ಲೈನ್ ವ್ಯಾಪಾರಗಳು, ಆನ್‌ಲೈನ್ ಆಟಗಳು, ಜೂಜಾಟಗಳಲ್ಲಿ ತೊಡಗಿಸಿಕೊಂಡು ಪಾಲಕರ ಹಣ ಕಳೆಯತ್ತಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಇದು ನಡೆಯುತ್ತಿದೆ.

    ವಿದ್ಯಾರ್ಥಿಗಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಮೊಬೈಲ್ ನೀಡುವುದನ್ನು ನಿಲ್ಲಿಸಬೇಕು. ಇದರ ಬದಲಾಗಿ ಪಾಲಕ-ಪೋಷಕರು ಮಕ್ಕಳನ್ನು ಕ್ರೀಡಾಂಗಣಕ್ಕೆ ಹೋಗಿ ಆಟವಾಡಲು ಪ್ರೋತ್ಸಾಹಿಸಬೇಕು. ಪಾಲಕರು ಸಹ ಮಕ್ಕಳ ಜೊತೆಗೂಡಿ ಆಟವಾಡಬೇಕು. ಇದರಿಂದ ಮುಂದೆ ಸಂಭವಿಸಬಹುದಾದ ಅನಾಹುತದಿಂದ ತಪ್ಪಿಸಬಹುದು ಎಂದು ಕ್ಯಾಮ್ಸ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಪಾಲಕರಿಗೆ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts