More

    ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ಅನಿಲ ಸೋರಿಕೆ: ಎಂಟು ಮಂದಿ ಆಸ್ಪತ್ರೆಗೆ ದಾಖಲು

    ಭುವನೇಶ್ವರ: ಒಡಿಶಾದ ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ (ಆರ್‌ಎಸ್‌ಪಿ) ಸೋಮವಾರ ಅನಿಲ ಸೋರಿಕೆಯಿಂದ ಎಂಟು ಮಂದಿಕಾರ್ಮಿಕರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿ: ಸೃಜನಶೀಲ ಕಥಾ ಸೃಷ್ಟಿಗೆ ಮಾರ್ಗದರ್ಶಕ ‘ಕಲ್ಕಿ’: ಪ್ರಭಾಸ್​ ಚಿತ್ರಕ್ಕೆ ನಟ ಯಶ್ ಫಿದಾ..!

    ಸರ್ಕಾರಿ ಸ್ವಾಮ್ಯದ ಉಕ್ಕಿನ ಸ್ಥಾವರ ಇದಾಗಿದ್ದು, ಬ್ಲಾಸ್ಟ್ ಫರ್ನೇಸ್ 5ರಲ್ಲಿ ಅನಿಲ ಸೋರಿಕೆಯಾಗಿದೆ. ಉಸಿರಾಟದ ತೊಂದರೆಯಿಂದ ಅಸ್ವಸ್ಥರಾದವರನ್ನು ತಕ್ಷಣ ಇಸ್ಪತ್ ಜನರಲ್ ಆಸ್ಪತ್ರೆಗೆ (ಐಜಿಹೆಚ್) ಕಳುಹಿಸಲಾಗಿದೆ ಎಂದು ಅವರು ಆರ್‌ಎಸ್‌ಪಿಯ ಉಸ್ತುವಾರಿ ನಿರ್ದೇಶಕ ಅತಾನು ಭೌಮಿಕ್ ಹೇಳಿದ್ದಾರೆ.

    ಅವರಲ್ಲಿ ಕಾರ್ಯನಿರ್ವಾಹಕ, ಹಿರಿಯ ಮೇಲ್ವಿಚಾರಕ, ಇನ್ನೊಬ್ಬ ಆರ್‌ಎಸ್‌ಪಿ ಉದ್ಯೋಗಿ ಮತ್ತು ಕೆಲವು ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.

    ಗ್ಯಾಸ್ ಪೈಪ್ ಸಂಪರ್ಕಕ್ಕಾಗಿ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
    -ಏಜನ್ಸೀಸ್​

    ಹೊಸ ಕ್ರಿಮಿನಲ್ ಕಾನೂನುಗಳು ಜಾರಿ: ದೆಹಲಿಯಲ್ಲಿ ಮೊದಲ ಎಫ್‌ಐಆರ್ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts