More

    ಮನೆ ಸುತ್ತ ನೀರು ನಿಲ್ಲದಂತೆ ನಿಗಾವಹಿಸಿ

    ಗಂಗಾವತಿ: ನಗರದ ವಿರುಪಾಪುರ ತಾಂಡಾ ಸ.ಹಿ.ಪ್ರಾ.ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಲೇರಿಯಾ ನಿವಾರಣೆ ಘಟಕದಿಂದ ವಿಶ್ವ ಮಲೇರಿಯಾ ವಿರೋಧಿ ಮಾಸಾಚರಣೆ ಗುರುವಾರ ಹಮ್ಮಿಕೊಳ್ಳಲಾಗಿತ್ತು.

    ಸೊಳ್ಳೆಗಳ ಕಾಟ, ಪರಿಸರ ಸ್ವಚ್ಛತೆ, ಮಲೇರಿಯಾ ಹರಡುವ ರೀತಿ, ಪರೀಕ್ಷೆ, ಚಿಕಿತ್ಸೆ ಕುರಿತು ಮಾಹಿತಿ ನೀಡಲಾಯಿತು. ಮಲೇರಿಯಾ ವಿಭಾಗದ ಲಿಂಕ್ ವರ್ಕರ್ ಎಚ್.ಸುರೇಶ ಮಾತನಾಡಿ, ಸೊಳ್ಳೆಗಳಿಂದ ಮಲೇರಿಯಾ ಹರಡಲಿದ್ದು, ಗರ್ಭಿಣಿಯರಲ್ಲೂ ಕಾಣಿಸಿಕೊಂಡರೆ ಮಗುವಿನ ಜನನದ ಮೇಲೂ ಪರಿಣಾಮ ಬೀರಲಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದ್ದು, ರೋಗಭಾದೆಗೆ ಕಾರಣವಾಗಲಿದೆ. ಕೊಳಚೆ ಗುಂಡಿ, ಚರಂಡಿ, ಹೂವಿನ ಕುಂಡ ಸೇರಿ ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆವಹಿಸಬೇಕಿದೆ ಎಂದರು.

    ಆರೋಗ್ಯ ಜಾಗೃತಿ ಕುರಿತು ಮುಖ್ಯಶಿಕ್ಷಕ ರಾಮಪ್ಪ ಮಾತನಾಡಿದರು. ಆರೋಗ್ಯ ಕಾರ್ಯಕರ್ತರಾದ ರಮೇಶ, ಗುರುಪ್ರಸಾದ, ಶಿಕ್ಷಕರಾದ ಶ್ರೀದೇವಿ, ದಾದಾಪೀರ್, ಅಶ್ವಿನಿ, ಶ್ವೇತಾಂಜಲಿ, ಓಂಕಾರಪ್ಪ, ರುದ್ರಪ್ಪ, ಆಶಾಕಾರ್ಯಕರ್ತೆಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts