More

    ವಾಹನಗಳ ವೇಗ ನಿಯಂತ್ರಣಕ್ಕೆ ಲೇಸರ್ ಕ್ಯಾಮರಾ

    ಗಂಗಾವತಿ: ವಾಹನ ಸವಾರರ ವೇಗ ನಿಯಂತ್ರಣಕ್ಕಾಗಿ ಸಂಚಾರಿ ಪೊಲೀಸ್ ಠಾಣೆ ಆಧುನಿಕ ತಂತ್ರಜ್ಞಾನ ಮೊರೆ ಹೋಗಿದ್ದು, ಲೇಸರ್ ಕ್ಯಾಮರಾ ಬಳಸಿಕೊಳ್ಳಲು ಚಿಂತನೆ ನಡೆಸಿದೆ.

    ಜಿಲ್ಲಾ ಪೊಲೀಸ್ ಸೂಚನೆ ಮೇರೆಗೆ ನಗರದಲ್ಲಿ ಲೇಸರ್ ಕ್ಯಾಮರಾ ಬಳಕೆ ಕುರಿತು ಸಂಚಾರಿ ಠಾಣೆ ಪೇದೆಗಳಿಗೆ ಪ್ರಾತ್ಯಕ್ಷಿಕೆ ತರಬೇತಿ ಶುಕ್ರವಾರ ನಡೆದಿದ್ದು, ಮೊದಲ ಹಂತದಲ್ಲಿ ಹಲವು ಸವಾರಿಗೆ ದಂಡ ವಿಧಿಸಲಾಯಿತು.

    ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂಚಾರ ದಟ್ಟಣೆ ಮಿತಿ ಮೀರಿದೆ. ಅದರಲ್ಲೂ ಯುವಕರು ವಾಹನಗಳನ್ನು ಯರ‌್ರಾಬಿರ‌್ರಿ ಓಡಿಸುತ್ತಿದ್ದು, ವೇಗದ ಮಿತಿಯಿಲ್ಲ. ರಾಜ್ಯ ಹೆದ್ದಾರಿಯಲ್ಲಿ ಮಿತಿ ಮೀರಿದ ವೇಗದಲ್ಲಿ ಓಡಾಡುವ ವಾಹನಗಳ ಮೇಲೆ ನಿಗಾವಹಿಸಲು ಪ್ರಾಯೋಗಿಕವಾಗಿ ಕ್ಯಾಮರಾ ಬಳಸಲಾಯಿತು.

    ಈ ಬಗ್ಗೆ ಸಂಚಾರಿ ಪಿಎಸೈ ಶಾರದಮ್ಮ ಮಾತನಾಡಿ, ನಗರದಲ್ಲಿ ವಾಹನಗಳ ಸಂಚಾರ ಹೆಚ್ಚುತ್ತಿದ್ದು, ವೇಗಕ್ಕೆ ಮಿತಿಯಿಲ್ಲ. ಈ ಬಗ್ಗೆ ಹಲವು ಬಾರಿ ತಿಳಿಹೇಳಿದರೂ ವಾಹನ ಸವಾರರು ಸ್ಪಂದಿಸುತ್ತಿಲ್ಲ. ಇನ್ಮುಂದೆ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದ್ದು, ಅಗತ್ಯಬಿದ್ದರೆ ವಾಹನ ಮತ್ತು ಚಾಲನಾ ಪರವಾನಗಿ ರದ್ದುಪಡಿಸಿ, ಕೋರ್ಟ್‌ಗೆ ಹಾಜರುಪಡಿಸಲಾಗುವುದು. ಅಪ್ರಾಪ್ತರು ವಾಹನ ಬಳಸಿದರೂ ಪಾಲಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು.

    ಪಿಎಸೈ ಪುಂಡಪ್ಪ ಜಾಧವ್, ಎಎಸೈ ಅಜೀಜ್ ಅಬ್ದುಲ್, ನಿರ್ವಹಣೆ ಸಿಬ್ಬಂದಿ ಶರಣಪ್ಪಮೇಟಿ, ಚನ್ನಬಸವ, ದೇವರಾಜ, ನಿಂಗಪ್ಪ ಹಕಾರಿ, ಶರಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts