More

    ಕರಡೋಣಿ ಸಂಪರ್ಕದ ಗ್ರಾಮಗಳಿಗೆ ಬಸ್ ಬಿಡಿ

    ಗಂಗಾವತಿ: ಕನಕಗಿರಿ ತಾಲೂಕಿನ ಕರಡೋಣಿ ಸಂಪರ್ಕದ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ನಗರದ ಕೆಕೆಆರ್‌ಟಿಸಿ ಘಟಕದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕಿ ಸರೋಜಾಗೆ ಮನವಿ ಸಲ್ಲಿಸಿದರು.

    ಎಸ್‌ಎ್ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ್ ಮಾತನಾಡಿ, ಕನಕಗಿರಿ ತಾಲೂಕಿನ ಕರಡೋಣಿ, ಕಾಟಾಪುರ, ಗುಡದೂರು, ಹಿರೇಖೇಡಾ, ಚಿಕ್ಕಖೇಡ, ನೀರಲೂಟಿ ಇತರ ಗ್ರಾಮಗಳಿಂದ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಗರಕ್ಕೆ ಆಗಮಿಸುತ್ತಿದ್ದು, ಸಕಾಲಕ್ಕೆ ಬಸ್‌ಗಳಿಲ್ಲದೆ ಪರದಾಡುವಂತಾಗಿದೆ.

    200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನಕಗಿರಿ, ಗಂಗಾವತಿ, ಕೊಪ್ಪಳ ಶಾಲಾ-ಕಾಲೇಜು ಅವಲಂಬಿಸಿದ್ದು, ಬಸ್ ಕೊರತೆಯಿಂದ ಶಿಕ್ಷಣ ಮೊಟಕುಗೊಳಿಸುವ ಸ್ಥಿತಿ ಬಂದಿದೆ. ಬೆಳಗ್ಗೆ ತಡವಾಗಿ ಬರುತ್ತಿದ್ದು, ಹೋಗುವಾಗಲೂ ತಡವಾಗುತ್ತಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚುವರಿ ಬಸ್ ಬಿಡಬೇಕೆಂದು ಒತ್ತಾಯಿಸಿದರು.

    ತಾಲೂಕು ಘಟಕದ ಕಾರ್ಯದರ್ಶಿ ಶಿವಕುಮಾರ್, ಸದಸ್ಯ ಹನುಮೇಶ, ವಿದ್ಯಾರ್ಥಿಗಳಾದ ಬಸವರಾಜ, ಶಶಿಕಲಾ, ಪದ್ದಮ್ಮ, ವಿಜಯಲಕ್ಷ್ಮೀ, ದುರಗಮ್ಮ, ಅಂಜನಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts