More

    ಕಲಿಕಾ ಗುಣಮಟ್ಟ ಹೆಚ್ಚಳಕ್ಕಾಗಿ ವಿಶೇಷ ಸಭೆ

    ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಳಕ್ಕಾಗಿ ಶಿಕ್ಷಕರೊಂದಿಗೆ ವಿಶೇಷ ಸಭೆ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

    ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಕ್ಕಳ ಕಲಿಕಾಮಟ್ಟ ಕುಸಿಯುತ್ತಿದ್ದು, ಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಮಂಡಳಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಶಿಕ್ಷಕರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಯಿತು.

    ಕಲಿಕೆಯಲ್ಲಿ ಹಿಂದುಳಿಯಲು ಕಾರಣ, ಗುಣಮಟ್ಟದ ಶಿಕ್ಷಣ, ಬೋಧನಾ ಪದ್ಧತಿ ಮತ್ತು ಮಕ್ಕಳಲ್ಲಿ ಕಲಿಕಾ ಪ್ರವೃತ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಶಿಕ್ಷಕರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಕಲಿಕೆಯಿಂದ ಹಿಂದುಳಿದ ಮಕ್ಕಳ ಬಗ್ಗೆ ನಿಗಾವಹಿಸುವಂತೆ ಸೂಚಿಸಲಾಯಿತು. ಶಿಕ್ಷಣ ಸುಧಾರಣೆಗೆ ಮೂರು ತಿಂಗಳಿಗೊಮ್ಮೆ ಕಲಿಕಾ ಗುಣಮಟ್ಟ ಪರಾಮರ್ಶಿಸುವಂತೆ ಶಿಕ್ಷಕರಿಗೆ ತಿಳಿಸಲಾಯಿತು. ಲಿತಾಂಶ ಸುಧಾರಣೆಗೆ ಪೂರಕವಾಗಿ ಶಾಲೆಗೆ ಗ್ರಾಪಂನಿಂದ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದ್ದು, ಎಲ್ಲ ರೀತಿಯ ಸಹಕಾರ ನೀಡಲು ಭರವಸೆ ನೀಡಲಾಯಿತು.

    ಈ ಬಗ್ಗೆ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಲಿತಾಂಶ ಸುಧಾರಣೆಗೆ ಶಿಕ್ಷಕರು ವಿಶೇಷ ಗಮನಹರಿಸಬೇಕಿದ್ದು, ಗ್ರಾಪಂನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ತಿಮ್ಮಪ್ಪ ಬಾಳಿಕಾಯಿ, ಡಾ.ಕೆ. ವೆಂಕಟೇಶಬಾಬು, ಸುಶೀಲಾ ಸಂತೋಷ, ಹೊನ್ನಪ್ಪ ನಾಯಕ, ನರಸಿಂಹಲು, ರಾಜಶೇಖರ್, ವೆಂಕಟೇಶ, ಮಾಜಿ ಸದಸ್ಯೆ ಅಂಜನಾದೇವಿ, ವಿವಿಧ ಶಾಲೆ ಮುಖ್ಯಶಿಕ್ಷಕರಾದ ವಿಜಯಕುಮಾರ, ಶಿವಕಾಂತ ತಳವಾರ, ಮಹಾದೇವ, ಬಸವಲಿಂಗಪ್ಪ, ರೇಣುಕಮ್ಮ ಸೇರಿ, ಆನೆಗೊಂದಿ, ಚಿಕ್ಕರಾಂಪುರ, ಬಸವನದುರ್ಗ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts